ಶಿವಮೊಗ್ಗ : ಯಡಿಯೂರಪ್ಪ, ಬೊಮ್ಮಾಯಿ ಏನು ಮಾಡಿದರು. ರೈತ ನಾಯಕ ಎಂದು ಹೇಳಿಕೊಂಡರೆ ಆಗುವುದಿಲ್ಲ ಎಂದು ಶಿವಮೊಗ್ಗದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ. ರವಿ ಮೋಸ್ಟ್ ಕಮ್ಯೂನಲ್ ಫೆಲೋ. ಅವರಿಗೆ ಜಾತ್ಯತೀತ ತತ್ವ ಅರ್ಥವಾಗುವುದಿಲ್ಲ. ಅವರಿಗೆ ಸಂವಿಧಾನದ ತತ್ವ ಅರ್ಥವಾಗುವುದಿಲ್ಲ. ಅಂತಹವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನಿನ್ನೆ ಶಿವಮೊಗ್ಗದ ಮಲೆನಾಡು ಜನಾಕ್ರೋಶ ಸಭೆ ಯಶಸ್ವಿಯಾಗಿದೆ. ನಾವು ಅಧಿಕಾರದಲ್ಲಿದ್ದಾಗ ಶರಾವತಿ ಸಂತ್ರಸ್ತರ ಹಿತ ಗಮನದಲ್ಲಿಟ್ಟುಕೊಂಡು 56 ಡಿ ನೋಟಿಫಿಕೇಷನ್ ಹೊರಡಿಸಿದ್ದೇವು ಎಂದರು.
ಇನ್ನು, ಮದನ್ ಗೋಪಾಲ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದೇವು. ಶರಾವತಿ ಯೋಜನೆ ಆಗಿದ್ದು 1950ರಲ್ಲಿ ಅರಣ್ಯ ಕಾಯ್ದೆ ಬಂದಿದ್ದು 1980 ರಲ್ಲಿ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ನಾವು ಆದೇಶ ಹೊರಡಿಸಿದ್ದು. ಆದರೆ ಗಿರೀಶ್ ಆಚಾರ್ ಎಂಬುವರು ಹೈ ಕೋರ್ಟ್ ಗೆ ಹೋದ ಕಾರಣ ಡಿ ನೋಟಿಫಿಕೇಷನ್ ರದ್ದಾಗಿದೆ. ಈಗಿನ ಬಿಜೆಪಿ ಸರ್ಕಾರ ಏನು ಮಾಡಿತು. ಯಡಿಯೂರಪ್ಪ, ಬೊಮ್ಮಾಯಿ ಏನು ಮಾಡಿದರು. ರೈತ ನಾಯಕ ಎಂದು ಹೇಳಿಕೊಂಡರೆ ಆಗುವುದಿಲ್ಲ ಎಂದು ಹೇಳಿದರು.