Wednesday, January 22, 2025

ಆನೆ ದಾಳಿಗೆ ಟೊಮೆಟೊ ಬೆಳೆ ನಾಶ

ರಾಮನಗರ: ಕೈಲಾಂಚ ಹೋಬಳಿಯ ದೇವರದೊಡ್ಡಿ ಗ್ರಾಮದಲ್ಲಿ ಆನೆ ದಾಳಿಯಿಂದಾಗಿ ಭಾರೀ ಪ್ರಮಾಣದ ಟೊಮೆಟೊ ಬೆಳೆ ನಾಶವಾಗಿದೆ.

ಉಮೇಶ್ ಎಂಬುವವರಿಗೆ ಸೇರಿದ ತೋಟದಲ್ಲಿ, ತಡ ರಾತ್ರಿ ಆನೆ ದಾಳಿ ಮಾಡಿದ್ದರಿಂದ ಸಂಪೂರ್ಣವಾಗಿ ಬೆಳೆ ನಾಶವಾಗಿದೆ. ರೈತ ಎರಡು ಎಕರೆ ಪ್ರದೇಶದಲ್ಲಿ ಲಕ್ಷಾಂತರ ರೂ. ಮೌಲ್ಯದ ಟೊಮೆಟೊ ಬೆಳೆದಿದ್ದ ಬೆಳೆಯೆಲ್ಲಾ ನಾಶವಾಗಿದೆ.

ಆನೆಗಳು ಈ ಹಿಂದೆ ಕೂಡ ರೈತ ಉಮೇಶ್​ಗೆ ಸೇರಿದ್ದ ಪಪ್ಪಾಯ ಬೆಳೆಯನ್ನು ನಾಶ ಮಾಡಿದ್ದವು. ವರ್ಷವಿಡೀ ಬೆಳೆದ ಬೆಳೆಗೆ ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದ ರೈತ ಕಂಗಾಲಾಗಿದ್ದಾನೆ. ಇದಕ್ಕೆ ಸೂಕ್ತ ಪರಿಹಾರ ನೀಡುವಂತೆ ಅಧಿಕಾರಿಗಳಲ್ಲಿ‌ ಮನವಿ ಮಾಡಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES