Wednesday, January 22, 2025

ಬಿಜೆಪಿ ಸೇರಲು ಸುನೀಲನಿಗೆ ಅವಕಾಶ ಇಲ್ಲ : ನಳಿನ್‌ ಕುಮಾರ್‌ ಕಟೀಲ್‌

ಬೆಂಗಳೂರು : ರಾಜಕಾರಣಿಯಾಗಲು ಮುಂದಾಗಿದ್ದ ರೌಡಿ ಶೀಟರ್​​ ಸುನೀಲ್​​ಗೆ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಶಾಕ್ ನೀಡಿದ್ದಾರೆ.

ಮೊನ್ನೆ ಬಿಜೆಪಿ ನಾಯಕರ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ಸೈಲೆಂಟ್ ಸುನೀಲ ಬಿಜೆಪಿ ಸೇರುವ ಬಗ್ಗೆ ಊಹಾಪೋಹಗಳು ಹರಿದಾಡುತ್ತಿದ್ವು. ಆದರೆ ಇದೀಗ ಸೈಲೆಂಟಾಗಿಯೇ ಸುನೀಲನಿಗೆ ರಾಜ್ಯ ಬಿಜೆಪಿ ಗುನ್ನ ಕೊಟ್ಟಿದೆ.

ಬಿಜೆಪಿ ಸೇರಲು ಸೈಲೆಂಟ್‌ ಸುನೀಲನಿಗೆ ಅವಕಾಶವಿಲ್ಲ, ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ ಎಂದು ಕಟೀಲ್‌ ಅವರು ಸೈಲೆಂಟ್‌ ಸುನೀಲನ ಆಸೆಗೆ ತಣ್ಣೀರೆರಚಿದ್ದಾರೆ. ನಳಿನ್‌ ಕುಮಾರ್‌ ಕಟೀಲ್‌ ಮಾಧ್ಯಮ ಪ್ರಕಟಣೆ ಮೂಲಕ ಈ ವಿಷಯ ಸ್ಪಷ್ಟಪಡಿಸಿದ್ದಾರೆ.

RELATED ARTICLES

Related Articles

TRENDING ARTICLES