ಕಲಬುರಗಿ : ಎಸ್‌ಆರ್‌ಎನ್ ಮೆಹ್ತಾ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿರುವ ವಿಜಯಲಕ್ಷ್ಮೀ ಬಿರಾದರ್, ಮಹಿಳೆಯರ ಮೇಲಿನ ಅತ್ಯಾಚಾರ ತಡೆಗಟ್ಟಲು ಸತತ ಪ್ರಯತ್ನದಿಂದ ಈ ಆ್ಯಂಟಿ ರೇಪ್ ಫುಟ್‌ವೇರ್ ಕಂಡು ಹಿಡಿದಿದ್ದಾಳೆ. ಈ ಚಪ್ಪಲಿ ಧರಿಸಿದವರ ಮೇಲೆ ಅತ್ಯಾಚಾರಿ ಏನಾದರೂ ಎರಗಿದ್ರೆ ಸಾಕು, ಕ್ಷಣಾರ್ಧದಲ್ಲಿ ಚಪ್ಪಲಿಯಿಂದ ಅತ್ಯಾಚಾರಿಗೆ ಶಾಕ್ ತಗುಲುತ್ತೆ. ಬೆಚ್ಚಿಬಿಳೊ ಆತ ಏನೆಂದು ಸಾವರಿಸಿಕೊಂಡು ನೋಡೊದ್ರೊಳಗೆ ದಾಳಿಗೆ ಸಿಲುಕಿದ ಮಹಿಳೆ ಅಲ್ಲಿಂದ ಪರಾರಿಯಾಗಬಹುದು. ಇನ್ನೂ ಚಪ್ಪಲ್ ಕೆಳಭಾಗದಲ್ಲಿ ಬ್ಯಾಟರಿ ಸೆಲ್ ಬಳಸಲಾಗಿದ್ದು, ಮಹಿಳೆ ಈ ಚಪ್ಪಲಿಗಳನ್ನ ಧರಿಸಿ ನಡೆಯೋವಾಗಲೆ ಇಲ್ಲಿನ ಬ್ಯಾಟರಿಗಳು ಚಾರ್ಜ್ ಆಗುತ್ತವೆ. ಇದರ ಜೊತೆಗೆ ರಿಮೋಟ್ ಸಹ ಇಡಲಾಗಿದ್ದು, ಪಾದದ ಹೆಬ್ಬೆರಳು ಜಾಗದಲ್ಲಿ ಚಿಕ್ಕ ಬಟನ್ ಮಾಡಲಾಗಿದೆ. ಆ ಬಟನ್ ಬೆರಳಿನಿಂದಲೇ ಪ್ರೇಸ್ ಮಾಡಿದ್ರೆ ಸಾಕು 0.5 ಆಂಪಿಯರ್‌ನಷ್ಟು ವಿದ್ಯುತ್‌ಚಕ್ತಿ ಉತ್ಪತ್ತಿಯಾಗಿ ಚಪ್ಪಲಿ ಸಂಪರ್ಕಕ್ಕೆ ಬರುವ ಕಾಮುಕರನ್ನ ಬೆಚ್ಚಿಬಿಳಿಸುತ್ತೆ.
ಇನ್ನೂ ಸ್ಮಾರ್ಟ್ ಫುಟ್‌ವೇರ್‌ನಲ್ಲಿ ಬ್ಲಿಂಕ್ ಆ್ಯಪ್ ಲಿಂಕ್ ತಂತ್ರಜ್ಞಾನ ಆಳವಡಿಸಲಾಗಿದೆ.. ತೊಂದರೆಯಲ್ಲಿರೋ ಮಹಿಳೆ ಹೆಬ್ಬರಳಿನ ಗುಂಡಿ ಪ್ರೇಸ್ ಮಾಡಿದ್ರೆ ಸಾಕು ಕರೆಂಟ್ ಉತ್ಪತ್ತಿ ಆಗುವುದರ ಜೊತೆಗೆ ತೊಂದರೆಯಲ್ಲಿರೋ ಮಹಿಳೆಯ ಲೈವ್ ಲೋಕೆಷನ್ ರಕ್ಷಣೆ ಕೋರುವ ಸಂದೇಶ ಆ್ಯಪ್‌ನಲ್ಲಿ ಮೊದಲೇ ದಾಖಲಿಸಿರುವ ಸಂಪರ್ಕ ಸಂಖ್ಯೆಗಳೆಲ್ಲದಕ್ಕೂ ರವಾನಿಸುತ್ತದೆ.. ಈ ಆ್ಯಪ್‌ನಲ್ಲಿ ಮಹಿಳೆ ತನ್ನ ಪೋಷಕರು, ಬಂಧುಗಳು, ತಮ್ಮ ಪ್ರದೇಶದ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆಗಳನ್ನ ಬ್ಲಿಂಕ್ ಆ್ಯಪ್‌ನಲ್ಲಿ ದಾಖಲಿಸಿದ್ರೆ ಸಾಕು. ಏಕಕಾಲಕ್ಕೆ ಎಲ್ಲರಿಗೂ ತಾನು ತೊಂದರೆಯಲ್ಲಿರೋ ಲೈವ್ ಲೋಕೆಷನ್ ರವಾನೆ ಆಗುತ್ತೆ.. ಇನ್ನೂ ವಿಜಯಲಕ್ಷ್ಮಿ ಆವಿಷ್ಕರಿಸಿರೋ ಈ ಸಾಧನ ಗೋವಾದಲ್ಲಿ ನಡೆದಿದ್ದ ಇಂಡಿಯಾ ಇಂಟರ್ನ್ಯಾಷನಲ್ ಮತ್ತು ಇನ್ನೋವೇಷನ್ ಎಕ್ಸ್‌ಪೋದಲ್ಲಿ ಜಗತ್ತಿನ ವಿವಿಧ ದೇಶಗಳಿಂದ ಬಂದಿದ್ದ 26 ಮಾದರಿಗಳಲ್ಲಿ ಈ ವಿದ್ಯಾರ್ಥಿನಿಯ ಆ್ಯಂಟಿ ರೇಪ್ ಫುಟ್‌ವೇರ್ ಮಾದರಿ ಬೆಳ್ಳಿ ಪದಕ ಪಡೆದುಕೊಂಡಿದೆ. ಇನ್ನೂ ವಿದ್ಯಾರ್ಥಿನಿಯ ಸಾಧನೆಗೆ ಶಾಲೆಯ ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಅದೆನೇ ಇರಲಿ ಎಷ್ಟೇ ಕಠಿಣ ಕಾನೂನು ಜಾರಿಗೆ ತಂದರೂ ಮಹಿಳೆಯರು ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಒಂದು ವೇಳೆ ಈ ಆ್ಯಂಟಿ ರೇಪ್ ಫುಟ್‌ವೇರ್‌ಗೆ ಮನ್ನಣೆ ಸಿಕ್ಕಿ ಮಾರುಕಟ್ಟೆಗೆ ಬಂದ್ರೆ, ಅತ್ಯಾಚಾರ ಪ್ರಕರಣಗಳಿಗೆ ಕೊಂಚಮಟ್ಟಿಗೆಯಾದರೂ ಕಡಿವಾಣ ಬಿಳುವುದರಲ್ಲಿ ಸಂದೇಹನೆ ಇಲ್ಲ.
ಅನಿಲ್‌ಸ್ವಾಮಿ, ಪವರ್ ಟಿವಿ, ಕಲಬುರಗಿ