Wednesday, January 22, 2025

ಅಭಿಷೇಕ್​ಗೆ ಕಾಂತಾರದ ಸಪ್ತಮಿ ಗೌಡ ನಾಯಕಿ

ದಿವಂಗತ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್ `ಅಮರ್’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರೋದು ಗೊತ್ತಿರುವ ವಿಚಾರ. ಇನ್ನು, ಅಭಿಷೇಕ್ ನಟನೆಯ ಎರಡನೇ ಸಿನಿಮಾ ಬ್ಯಾಡ್ ಮ್ಯಾನ್ಸರ್ಸ್ ಚಿತ್ರ ಬಿಡುಗಡೆ ಆಗಿಲ್ಲ.

ಇದೀಗ ಅಭಿಷೇಕ್​ ಅಂಬರೀಶ್​ ನಟಿಸುತ್ತಿರೋ ಕಾಳಿ ಚಿತ್ರ ಸೈಲೆಂಟ್ ಆಗಿ ಸೆಟ್ಟೇರಿದೆ. ಹೌದು ಪೈಲ್ವಾನ್ ಸಿನಿಮಾ ನಿರ್ದೇಶಕ ಎಸ್​. ಕೃಷ್ಣ ನಿರ್ದೇಶಿಸುತ್ತಿರುವ ಕಾಳಿ ಚಿತ್ರದ ಮುಹೂರ್ತ ಬೆಂಗಳೂರಿನ ಶ್ರೀ ಬಂಡಿ ಮಂಕಾಳಮ್ಮ ದೇವಸ್ಥಾನದಲ್ಲಿ ಯಶಸ್ವಿಯಾಗಿ ನೆರವೇರಿದೆ. ಅಭಿಷೇಕ್ ಅಂಬರೀಶ್​ಗೆ ಕಾಂತಾರ ಸಿನಿಮಾದ ನಾಯಕಿ ಸಪ್ತಮಿ ಗೌಡ ಜೋಡಿಯಾಗುತ್ತಿದ್ದಾರೆ‌. ಈ ಹಿಂದೆ ಕೃಷ್ಣ ನಿರ್ದೇಶನದ ‘ಹೆಬ್ಬುಲಿ’ ಮತ್ತು ‘ಪೈಲ್ವಾನ್’ ಚಿತ್ರಗಳಿಗೆ ಛಾಯಾಗ್ರಾಹಕರಾಗಿದ್ದ ಕರುಣಾಕರ್​, ಇಲ್ಲೂ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದಾರೆ.

ಇನ್ನು, ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ಟಗರು’ ‘ಸಲಗ’ ಮುಂತಾದ ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ಚರಣ್ ರಾಜ್ ಈ ಚಿತ್ರದ ಸಂಗೀತ ನಿರ್ದೇಶಕರು. ದೀಪು ಎಸ್ ಕುಮಾರ್ ಸಂಕಲನ ಮತ್ತು ‘ಕೆಜಿಎಫ್’ ಖ್ಯಾತಿಯ ಚಂದ್ರಮೌಳಿ ಈ ಚಿತ್ರಕ್ಕೆ ಸಂಭಾಷಣೆ ಬರೆಯಲಿದ್ದಾರೆ.

RELATED ARTICLES

Related Articles

TRENDING ARTICLES