Monday, December 23, 2024

ಉಡುಪಿಗೂ ಬಂದಿದ್ನಾ ಉಗ್ರ ಶಾರೀಕ್‌..?

ಉಡುಪಿ : ಉಗ್ರ ಶಾರೀಕ್ ಕುರಿತು ದಿನಕ್ಕೊಂದು ಸ್ಫೋಟಕ ಮಾಹಿತಿ ಹೊರ ಬರ್ತಿದೆ. ಶಾರೀಕ್‍ ಉಗ್ರ ಪುರಾಣ ಬಗೆದಷ್ಟು ಬಯಲಾಗ್ತಿದೆ. ಸದ್ಯ ಆಸ್ಪತ್ರೆ ಬೆಡ್ ಮೇಲೆ ಬಿದ್ದಿರೋ ಪಾಪಿ ವಿಚಾರಣೆಗೆ ಸಹಕರಿಸೋ ಸ್ಥಿತಿಯಲ್ಲಿಲ್ಲ. ಹೀಗಾಗಿ ತನಿಖೆ ಚುರುಕುಗೊಳಿಸಿರೋ ಖಾಕಿ ಪಡೆ, ಸಿಕ್ಕ ಸಾಕ್ಷ್ಯಗಳ ಭೇದಿಸಿ ಕುಕ್ಕರ್ ಬಾಂಬರ್​ನ ಹಿಸ್ಟರಿ ಹೊರತೆಗೆಯುತ್ತಿದೆ. ಶಾರೀಕ್‍ನ ಮೊಬೈಲ್ ಹಿಡಿದು ಹೊರಟ ಪೊಲೀಸರಿಗೆ ಕೃಷ್ಣ ನಗರಿಯ ಅಡ್ರೆಸ್ ಸಿಕ್ಕಿದೆ. ಉಗ್ರ ಶಾರೀಕ್ ಉಡುಪಿಯ ಶ್ರೀಕೃಷ್ಣಮಠಕ್ಕೂ ಬಂದಿದ್ದ ಎಂದು ಹೇಳಲಾಗುತ್ತಿದೆ.. ಹೀಗಾಗಿ ಮಂಗಳೂರು ಪೊಲೀಸರು ಕೃಷ್ಣ ಮಠಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಅಂದಹಾಗೆ, ಉಗ್ರ ಶಾರೀಕ್​, ಅಕ್ಟೋಬರ್ 11ರಂದು ಕೃಷ್ಣಮಠ ಹಾಗೂ ರಥಬೀದಿಯಲ್ಲಿ ಸುತ್ತಾಡಿರುವ ಬಗ್ಗೆಯೂ ತಿಳಿದು ಬಂದಿದೆ.. ರಥಬೀದಿ ಸ್ಥಳದಿಂದ ಶಾರೀಕ್ ಮೊಬೈಲ್‌ನಿಂದ ಕರೆ ಮಾಡಲಾಗಿದೆ.. ಫೋನ್‌ ಕರೆಯಿಂದಾಗಿ ಪೊಲೀಸರಿಗೆ ಈ ವಿಷಯ ಗೊತ್ತಾಗಿದೆ.. ಹೀಗಾಗಿ ಉಡುಪಿಯ ರಥಬೀದಿ ಆಸುಪಾಸಿನ ಸಿಸಿಟಿವಿ ಫೂಟೇಜ್​ಗಳನ್ನ ಮಂಗಳೂರು ಪೊಲೀಸರು ಪರಿಶೀಲನೆ ನಡೆಸಿದ್ರು.. ದುರಾದೃಷ್ಟವಶಾತ್ ಪೊಲೀಸರಿಗೆ ಯಾವುದೇ ದೃಶ್ಯಾವಳಿ ಲಭ್ಯವಾಗಿಲ್ಲ.

ಉಡುಪಿಯಲ್ಲೂ ಸ್ಯಾಟ್‌ಲೈಟ್ ಫೋನ್ ಸಕ್ರಿಯವಾಗಿದ್ಯಾ ಅನ್ನೋ ಪ್ರಶ್ನೆ ಎಂದಿದೆ. ಯಾಕಂದ್ರೆ ಮಂದಾರ್ತಿ ಸಮೀಪದ ಅರಣ್ಯ ಪ್ರದೇಶದಲ್ಲಿ ನವೆಂಬರ್‌ 9ರಂದು ಸ್ಯಾಟಲೈಟ್ ಫೋನ್ ಆ್ಯಕ್ಟಿವ್‌ ಆಗಿರೋದು ಪತ್ತೆಯಾಗಿದೆ.. ಮಂದಾರ್ತಿ ದೇವಸ್ಥಾನದಿಂದ ಸುಮಾರು ಒಂದೂವರೆ ಕಿಲೋ ಮೀಟರ್‌ ದೂರದಲ್ಲಿ ಸ್ಯಾಟಲೈಟ್ ಫೋನ್ ಆ್ಯಕ್ಟಿವ್‌ ಆಗಿದೆ.. ಗೇರುಬೀಜ ಕಾರ್ಖಾನೆ ಬಳಿಯ ಲೊಕೇಶನ್​ ಟ್ರೇಸ್​ ಆಗಿದೆ. ಕೊಲ್ಲೂರು, ಜಡ್ಡಿನಗುಡ್ಡೆ, ಹೆರ್ಮುಂಡೆ ಭಾಗದಲ್ಲಿ ಆ್ಯಕ್ಟಿವ್​ ಆಗಿತ್ತು. ಹೀಗಾಗಿ ಉಗ್ರರ ಕರಿಚಾಯೆ ಕೃಷ್ಣನಗರಿ ಉಡುಪಿ ಮೇಲೂ ಬಿದ್ದಿದೆ. ಈ ಕುರಿತು ರಾಜ್ಯ ಆಂತರಿಕ ಭದ್ರತಾ ವಿಭಾಗದಿಂದ ಜಿಲ್ಲಾ ಆಂತರಿಕ ವಿಭಾಗಕ್ಕೆ ಮಾಹಿತಿ ನೀಡಲಾಗಿದೆ.

ಉಗ್ರ ಶಾರೀಕ್​ನ ಮತ್ತಷ್ಟು ಉಗ್ರಾವತಾರ ಬಯಲಾಗಿದೆ. ಉಡುಪಿ ಕೃಷ್ಣ ಮಠ ಬಳಿಕ ಧರ್ಮಸ್ಥಳ ಟಾರ್ಗೆಟ್‌ ಮಾಡಿದ್ನಾ ಅನ್ನೋ ಅನುಮಾನ ವ್ಯಕ್ತವಾಗ್ತಿದೆ. ಕಳೆದ ವಾರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ನಡೆದಿತ್ತು. ಆ ವೇಳೆ ರಕ್ತಪಾತಕ್ಕೆ ಉಗ್ರರು ಸ್ಕೆಚ್​ ಹಾಕಿರೋ ಶಂಕೆ ವ್ಯಕ್ತವಾಗ್ತಿದೆ.

ಗಿರಿಧರ್​ ಶೆಟ್ಟಿ, ಪವರ್ ಟಿವಿ, ಮಂಗಳೂರು

RELATED ARTICLES

Related Articles

TRENDING ARTICLES