Monday, December 23, 2024

ಐದೇ ದಿನಕ್ಕೆ ಕಿತ್ತು ಬಂದ ಡಾಂಬರು

ಕಲಬುರಗಿ :  ಜಿಲ್ಲೆಯಲ್ಲಿ ಕಳಪೆ ಕಾಮಗಾರಿ ಹೆಚ್ಚಾಗಿ ಕಂಡು ಬರುತ್ತಿದೆ. ಕಲಬುರಗಿ ಜಿಲ್ಲೆಯ ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ಕಳಪೆ ಕಾಮಗಾರಿ ಆರೋಪ ಕೇಳಿ ಬಂದಿದ್ದು ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕೋಟಿ ಕೋಟಿ ಹಣ ನುಂಗಿ ನೀರು ಕುಡಿಯುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.

ಐದು ದಿನದ ಹಿಂದೆ ಹಾಕಿದ್ದ ಡಾಂಬರು ಕಿತ್ತು ಬರುತ್ತಿದೆ. ಜಿಲ್ಲಾ ಪಂಚಾಯತ್ ಅನುಧಾನದಲ್ಲಿ ಚೇಂಗಟಾ ಗ್ರಾಮದಿಂದ ದುತ್ತರಗಿ ಗ್ರಾಮದ ವರಗೆ ನಿರ್ಮಾಣವಾಗಿರೋ ಎರಡು ಕಿಲೋ ಮೀಟರ್ ರಸ್ತೆಗೆ ಸುಮಾರು ಐವತ್ತು ಲಕ್ಷ ಹಣ ಬಳಸಲಾಗಿದೆ. ಆದ್ರೆ ಐದೇ ದಿನಕ್ಕೆ ರಸ್ತೆ ಹಾಳಾಗಿದ್ದು ಜನ ಕೆಂಡಾಮಂಡಲರಾಗಿದ್ದಾರೆ. ಗುತ್ತಿಗೆದಾರರು ಮತ್ತು ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

RELATED ARTICLES

Related Articles

TRENDING ARTICLES