Monday, December 23, 2024

ಸ್ಯಾಂಡಲ್‌ವುಡ್‌ ಚಿಟ್ಟೆ ಬಾಳಲ್ಲಿ ಚೆಲುವೆ ಹರಿಪ್ರಿಯಾ ಚಿತ್ತಾರ

ಬೆಂಗಳೂರು : ಸ್ಯಾಂಡಲ್‌ವುಡ್ ನಟಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಇಂತಹ ಮಾತುಗಳಿಗೆ ಕಾರಣವಾಗಿದ್ದು, ಹರಿಪ್ರಿಯಾ ಅವರ ಮೂಗು ಚುಚ್ಚಿಸಿಕೊಳ್ಳುವ ವಿಡಿಯೋ. ವಿಡಿಯೋದಲ್ಲಿ ಹರಿಪ್ರಿಯಾ ಅವರು ಮೂಗು ಚುಚ್ಚಿಸಿಕೊಂಡ ಬಳಿಕ ಅವರನ್ನು ಸಮಾಧಾನಪಡಿಸುವ ಮತ್ತು ಕಣ್ಣೀರು ಒರೆಸಿರುವುದು ವಸಿಷ್ಠ ಸಿಂಹ ಎಂದು ಹೇಳಲಾಗುತ್ತಿದೆ. ವಿಡಿಯೋದಲ್ಲಿ ಮುಖ ಕಾಣಿಸಿಲ್ಲವಾದರೂ, ಹರಿಪ್ರಿಯಾ ಪಕ್ಕ ನಿಂತಿದ್ದ ವ್ಯಕ್ತಿ ವಸಿಷ್ಠ ಸಿಂಹ ಎಂದೇ ಹೇಳಲಾಗುತ್ತಿದೆ.

ನಾಲ್ಕು ವಾರಗಳ ಹಿಂದಷ್ಟೇ ತಮ್ಮ ಇನ್‌ಸ್ಟಾಗ್ರಾಂನಲ್ಲಿ ತಾವು ಮತ್ತು ಹರಿಪ್ರಿಯಾ ಅವರಿರುವ ವಿಡಿಯೋ ಪೋಸ್ಟ್ ಮಾಡಿದ್ದ ವಸಿಷ್ಠ, ಹರಿಪ್ರಿಯಾ ನಿಮಗೆ ಎಲ್ಲದರಲ್ಲೂ ಅತ್ಯುತ್ತಮವಾದುದನ್ನೇ ಬಯಸುತ್ತೇನೆ ಪಾರ್ಟ್ನರ್. ನಿಮಗೆ ಹೆಚ್ಚಿನ ಸಂತೋಷ ಮತ್ತು ಪ್ರೀತಿಯು ದೊರೆಯಲಿ. ನೀನು ನೀನಾಗಿರುವದಕ್ಕೆ ಧನ್ಯವಾದಗಳು ಎಂದಿರುವುದು ಅನುಮಾನಕ್ಕೆ ಇಂಬು ನೀಡುತ್ತಿದೆ.

ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿರುವ ಹರಿಪ್ರಿಯಾ ಅವರು ಇದ್ದಕ್ಕಿಂದ್ದಂತೆ ಮೂಗು ಚುಚ್ಚಿಸಿಕೊಂಡಿದ್ದು ಅಭಿಮಾನಿಗಳಲ್ಲಿ ನಟಿ ಮದುವೆಯಾಗುತ್ತಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗುವಂತೆ ಮಾಡಿದೆ.

RELATED ARTICLES

Related Articles

TRENDING ARTICLES