Saturday, December 28, 2024

ಕಣ್ಮುಚ್ಚಿ ಕುಳಿತಿದೆಯಾ ಪೊಲೀಸ್ ಇಲಾಖೆ

ಬೆಂಗಳೂರು : ಇತ್ತೀಚೆಗೆ ನಗರದ 86 ರೌಡಿಶೀಟರ್​​​ಗಳ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಆದ್ರೆ ಪುಡಿ ರೌಡಿಗಳ ಮೇಲೆ ತಮ್ಮ ಪ್ರತಾಪ ತೋರಿಸಿ ಡಾನ್​ಗಳನ್ನು ಟಚ್ ಕೂಡ ಮಾಡದೆ ಸುಮ್ಮನಾಗಿದ್ದಾರೆ ಎಂಬ ಬಗ್ಗೆ ಚರ್ಚೆಯಾಗುತ್ತಿದೆ.

ನವೆಂಬರ್ 23ರಂದು ನಡೆದಿದ್ದ ದಾಳಿ ವೇಳೆ ಎಸ್ಕೇಪ್ ಆದ ಎಂದು ಹೇಳಲಾಗುತ್ತಿದ್ದ ಸೈಲೆಂಟ್ ಸುನೀಲ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ರಾಜಕೀಯ ಗಣ್ಯರೊಂದಿಗೆ ಕಾಣಿಸಿಕೊಂಡಿದ್ದಾನೆ. ಇತ್ತೀಚಿನ ದಾಳಿಯಲ್ಲಿ ಪೊಲೀಸರು ಪುಡಿ ರೌಡಿಗಳನ್ನ ಎತ್ತಾಕ್ಕೊಂಡು ಬಂದು ಪ್ರತಾಪ ತೋರಿಸಿದ್ದಾರೆ.

ಇನ್ನು,  ಪ್ರಮುಖ ರೌಡಿಗಳಾದ ಸೈಲೆಂಟ್ ಸುನೀಲ್, ವಿಲ್ಸನ್ ಗಾರ್ಡನ್ ನಾಗ, ಸೈಕಲ್ ರವಿ, ಒಂಟೆ ರೋಹಿತ, ಕಾಡುಬೀಸನಹಳ್ಳಿ ರೋಹಿತ ಪರಾರಿಯಾಗಿದ್ದಾರೆಂದು ಸಿಸಿಬಿ ಪೊಲೀಸರು ಹೇಳಿಕೆ ಕೊಟ್ಟ ಸುಮ್ಮನಾಗಿದ್ದರು. ಇದರ ಬೆನ್ನಲ್ಲೇ ಈಗ ಅಂದು ಪರಾರಿಯಾಗಿದ್ದಾರೆಂದು ಹೇಳಿದ್ದ ಸೈಲೆಂಟ್ ಸುನೀಲ ನಿನ್ನೆ ಬಹಿರಂಗವಾಗಿ ಕಾಣಿಸಿಕೊಂಡಿದ್ದಾನೆ. ರಾಜಕಾರಣಿಗಳ ಸಮ್ಮುಖದಲ್ಲೇ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾನೆ. ಹೀಗಾಗಿ ಪೊಲೀಸ್ ಇಲಾಖೆ ಬಗ್ಗೆ ಅನೇಕ ಅನುಮಾನಗಳು ಕಾಡುತ್ತಿವೆ.

RELATED ARTICLES

Related Articles

TRENDING ARTICLES