Sunday, December 22, 2024

ಪ್ಯಾಲೆಸ್ ಗ್ರೌಂಡ್​ನಲ್ಲಿ ಅದಿತಿ ಪ್ರಭುದೇವ weds ಯಶಸ್ವಿ

ಬಹಳ ಅದ್ಧೂರಿಯಿಂದ ನಡೀತಿದೆ ಬೆಣ್ಣೆ ನಗರಿಯ ಶ್ಯಾನೆ ಟಾಪ್ ಹುಡ್ಗಿ ಅದಿತಿ ಪ್ರಭುದೇವ ಕಲ್ಯಾಣ. ಉದ್ಯಮಿ ಯಶ್ ಕೈ ಹಿಡಿಯುತ್ತಿರೋ ಚೆಂದುಳ್ಳಿ ಚೆಲುವೆ ಅದಿತಿಯ ಆರತಕ್ಷತೆಯ ಸಂಭ್ರಮ ಹೇಗಿತ್ತು ಅನ್ನೋದನ್ನ ಕಲ್ಯಾಣಪೂರ್ವ ಶಾಸ್ತ್ರಗಳ ಝಲಕ್ ಸಮೇತ ನಿಮಗೆ ತೋರಿಸ್ತಿದೀವಿ. ನೀವೇ ಓದಿ.

  • ಸಪ್ತಪದಿಗೆ ಕ್ಷಣಗಣನೆ.. ಮದ್ವೆ ಮನೆಯಲ್ಲಿ ಸಂಭ್ರಮಾಚರಣೆ
  • ಪಟ್ಲ ಹಾಗೂ ಬಣಕಾರ ಕುಟುಂಬದವರಿಂದ ಕರೆಯೋಲೆ
  • ಕೊಡಗಿನ ಸೊಸೆಯಾಗುತ್ತಿರೋ ಶ್ಯಾನೆ ಟಾಪ್ ಹುಡ್ಗಿ ಅದಿತಿ

ನಾಯಕನಟಿ ಆಗೋಕೆ ಅಂದ ಚೆಂದ ಮಾತ್ರ ಇದ್ರೆ ಸಾಕಾಗಲ್ಲ. ಅಗಳಷ್ಟು ಅದೃಷ್ಟ ಕೂಡ ಅಂಗೈಯಲ್ಲಿರಬೇಕು ಅಂತಾರೆ. ಅದು ಅಕ್ಷರಶಃ ಸತ್ಯ. ಬೆಣ್ಣೆ ನಗರಿ ದಾವಣಗೆರೆ ಮೂಲದ ನಟೀಮಣಿ ಅದಿತಿ ಪ್ರಭುದೇವ ಕೂಡ ಧೈರ್ಯಂ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಜಸ್ಟ್ ಐದು ವರ್ಷದಲ್ಲಿ ಶ್ಯಾನೆ ಟಾಪ್ ಹುಡ್ಗಿಯಾಗಿ ಬೆಳೆದರು.

ಹೌದು.. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆದ ಈಕೆ, ಸೌಂದರ್ಯಕ್ಕೆ ತಕ್ಕನಾಗಿ ಮನೋಜ್ಞ ಅಭಿನಯದಿಂದಲೂ ಕನ್ನಡಿಗರ ಮನೆ, ಮನಸುಗಳನ್ನ ತಲುಪಿದ್ರು. ಕ್ಲಾಸ್​ಗೂ ಸೈ, ಮಾಸ್​ಗೂ ಜೈ ಅಂತ ತರಹೇವಾರಿ ಪಾತ್ರಗಳಲ್ಲಿ ಬಹುಬೇಗ ಶೈನ್ ಆದ ಗ್ಲಾಮರ್ ಡಾಲ್​ಗಳ ಪಟ್ಟಿ ಸೇರಿಕೊಂಡರು. ದೊಡ್ಡ ಅಭಿಮಾನಿ ಬಳಗ ಸಂಪಾದಿಸಿಕೊಂಡ ಈಕೆ, ಅಷ್ಟೇ ಬೇಗ ಆ ಫ್ಯಾನ್ಸ್​ಗೆ ಮದ್ವೆ ಶಾಕಿಂಗ್ ನ್ಯೂಸ್ ಕೊಟ್ರು.

ಮಡಿಕೇರಿ ಮೂಲದ ಕಾಫಿ ಪ್ಲಾಂಟರ್ ಯಶಸ್ವಿ ಕೈ ಹಿಡಿಯೋಕೆ ಮುಂದಾದ ಅದಿತಿ, ಅಫಿಶಿಯಲಿ ಇಬ್ಬರ ನಿಶ್ವಿತಾರ್ಥವನ್ನು ಫೋಟೋಗಳ ಮೂಲಕ ಹಂಚಿಕೊಂಡಿದ್ರು. ಇದೀಗ ಅವ್ರ ಕಲ್ಯಾಣ ಹಸೆಮಣೆವರೆಗೂ ಬಂದು ನಿಂತಿದೆ. ಭಾನುವಾರ ಇಂದು ಪ್ಯಾಲೆಸ್ ಗ್ರೌಂಡ್​ನಲ್ಲಿ ಅದ್ಧೂರಿ ಆರತಕ್ಷತೆ ನಡೆಯಲಿದ್ದು, ನಾಳೆ ಬೆಳಗ್ಗೆ ಅಂದ್ರೆ ಸೋಮವಾರ ಮುಹೂರ್ತ ಕಾರ್ಯಕ್ರಮ ನೆರವೇರಲಿದೆ.

ಎರಡೂ ಕುಟುಂಬಗಳು ಪ್ಯಾಲೆಸ್ ಗ್ರೌಂಡ್​ನಲ್ಲಿರೋ ಮದ್ವೆ ಮನೆ ಸೇರಿಕೊಂಡಿದ್ದು, ಶಾಸ್ತ್ರೋಕ್ತವಾಗಿ ಕಲ್ಯಾಣದ ಕಾರ್ಯಗಳನ್ನು ಮಾಡ್ತಿವೆ. ಮದ್ದು ಮನ ಸುಗಳೆರಡೂ ಒಂದಾಗಿವೆ. ಜೊತೆಗೂಡಿ ಜೀವಿಸಲು ಸಜ್ಜಾಗಿವೆ. ಸವಿನುಡಿಗಳೊಂದಿಗೆ ಆಮಂತ್ರಿಸುತ್ತಿರುವೆವು. ಮಮತೆಯೊಂದಿಗೆ ಬಂದು ಆಶೀರ್ವದಿಸಬೇಕಾಗಿ ಕೋರುವೆವು ಅಂತ ಪಟ್ಲ ಹಾಗೂ ಬಣಕಾರ ಕುಟುಂಬಗಳು ಆಮಂತ್ರಣ ನೀಡಿವೆ.

ಮದ್ವೆಗೂ ಮುನ್ನ ಅದಿತಿ ಮನೆಯಲ್ಲಿ ಅರಿಶಿಣ ಶಾಸ್ತ್ರ, ಸಂಗೀತ್, ಮೆಹಂದಿ ಕಾರ್ಯಕ್ರಮಗಳು ನಡೆದಿವೆ. ಅವುಗಳ ಒಂದಷ್ಟು ಸ್ಟಿಲ್ ಫೋಟೋಸ್ ಹಾಗೂ ವಿಡಿಯೋಸ್ ಕೂಡ ಸೋಶಿಯಲ್ ಮೀಡಿಯಾಗಳಲ್ಲಿ ಜೋರಾಗಿ ಹರಿದಾಡ್ತಿವೆ. ಒಟ್ಟಾರೆ ಅದಿತಿ- ಯಶಸ್ವಿ ಶುಭಕಾರ್ಯಕ್ಕೆ ಚಿತ್ರರಂಗ, ರಾಜಕೀಯ ಗಣ್ಯರು ಸಾಕ್ಷಿಯಾಗ್ತಿದ್ದು, ಹೊಸ ಬಾಳಿಗೆ ಕಾಲಿಡ್ತಿರೋ ನೂತನ ದಂಪತಿಗೆ ಶುಭಾಶಯ ಕೋರುತ್ತಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES