Sunday, December 22, 2024

ಸ್ವಾತಂತ್ರ್ಯ ಪೂರ್ವ ಗಣೇಶೋತ್ಸವಕ್ಕಿಂದು 93 ನೇ ವರ್ಷದ ಸಂಭ್ರಮ.

ತುಮಕೂರು : ಸ್ವಾತಂತ್ರ್ಯ ಹೋರಾಟಕ್ಕೆ ದೇಶಭಕ್ತ ಜನರನ್ನು ಸಂಘಟಿಸಲು ಬಾಲಗಂಗಾಧರ ತಿಲಕರು ಕರೆಕೊಟ್ಟ ಸಾರ್ವಜನಿಕ ಗಣೇಶೋತ್ಸವ ಆಚರಣೆ ತಿಪಟೂರಿನಲ್ಲಿಕಳೆದ ಒಂಬತ್ತು ದಶಕದಿಂದ ಅನೂಚಾನವಾಗಿ ನಡೆದು ಬಂದಿದ್ದು, ಇಲ್ಲಿನ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಪ್ರತೀವರ್ಷ ಪ್ರತಿಷ್ಠಾಪಿಸುವ ಗಣೇಶ ರಾಜ್ಯಾದ್ಯಂತ ಹೆಸರುವಾಸಿಯಾಗಿದೆ.

ತಿಪಟೂರಿನ ಕೊಬ್ಬರಿ ಎಣ್ಣೆ ಖರೀದಿಸಲು ಬೆಂಗಳೂರಿನಿಂದ ಬರುತ್ತಿದ್ದ ತಿಮ್ಮಪ್ಪ ಎಂಬುವರು 1929ರಲ್ಲಿನಗರದ ದಿವಾನ್‌ ನರಸಿಂಹಯ್ಯಂಗಾರ್‌ ಛತ್ರದಲ್ಲಿ ಪ್ರತಿಷ್ಠಾಪಿಸಿದ ಶ್ರೀ ಸತ್ಯಗಣಪತಿ ಮೂರ್ತಿಯನ್ನು ಜನಪ್ರಿಯಗೊಳಿಸುವಲ್ಲಿ ತಿಪಟೂರಿನ ಎಂ ಎಸ್‌ ಶಿವನಂಜಪ್ಪ ಸೇರಿದಂತೆ ಹಲವರು ಶ್ರಮಿಸಿದ್ದಾರೆ.

ಇನ್ನೂ ಇದೇ ಮಾರ್ಗದಲ್ಲಿ 93 ನೇ ವರ್ಷದ ಗಣೇಶೋತ್ಸವವನ್ನು ತಿಪಟೂರಿನ ಜನತೆ ಸಂಭ್ರಮದಿಂದ ಆಚರಿಸಿದ್ರು ದಾರಿಯುದ್ದಕ್ಕೂ ವಿವಿಧ ಕಲಾ ತಂಡಗಳು ಸಾಗಿ ಬಂದಿದ್ದು, ಮುಸ್ಲಿಂ ಮೊಹಲ್ಲಾದಲ್ಲಿ ಮುಸ್ಲಿಂ ಬಾಂಧವರು ಗಣೇಶನಿಗೆ ಹೂ ಅರ್ಪಿಸಿ ಸಂಭ್ರಮದಿಂದ ಸ್ವಾಗತಿಸಿ ಗಣೇಶೋತ್ಸವ ಒಂದು ಭಾವೈಕ್ಯತೆಯ ಸಂದೇಶ ಎಂಬುದನ್ನು ಸಾರಿದರು.

RELATED ARTICLES

Related Articles

TRENDING ARTICLES