Wednesday, January 22, 2025

ಗಣೇಶನ ಉತ್ಸವದಲ್ಲಿ ಲಕ್ಷಾಂತರ ಜನರು ಭಾಗಿ

ತುಮಕೂರು : ರಾಜ್ಯದ ಹಲವಾರು ಉತ್ಸವಗಳು ಒಂದು ತೂಕವಾದರೆ ತಿಪಟೂರಿನ ಗಣೇಶನ ಉತ್ಸವಕ್ಕೆ ತನ್ನದೇ ಆದ ತೂಕವನ್ನು ಹೊಂದಿದ್ದು, ಶ್ರೀ ಸತ್ಯಗಣಪತಿಯ 93ನೇ ವರ್ಷದ ವಿಸರ್ಜನಾಮಹೋತ್ಸವ ಇಂದು ಅತ್ಯಂತ ಅದ್ದೂರಿಯಾಗಿ ಆಚರಿಸಲಾಗುತ್ತಿದೆ.

ವಿಶ್ವದಾದ್ಯಂತ ಇರುವ ಕಲ್ಪತರು ನಾಡಿನ ಮನೆಮಕ್ಕಳು, ಗೆಳೆಯರು, ಹಿತೈಷಿಗಳು ಈ ಗಣೇಶನ ಉತ್ಸವದಲ್ಲಿ ಭಾಗಿಯಾಗಿದ್ದಾರೆ, ಲಕ್ಷಾಂತರ ಜನರು ಭಾಗವಹಿಸುವ ಈ ವಿಸರ್ಜನಾ ಮಹೋತ್ಸವಕ್ಕೆ ಈ ಬಾರಿ ಭರ್ಜರಿ ಮೆರುಗು ಬಂದಿದ್ದು, ಹೆಸರಿಗೆ ಗಣೇಶನ ಜಾತ್ರೆಯಾದರೆ ಈ ಜಾತ್ರೆಗೆ ಬರುವ ಸಹಸ್ರಾರು ಜನರಿಗೆ ಮನೆಯ ಅಂಕಾರಿಕ ವಸ್ತುಗಳಿಂದ ಹಿಡಿದು ಮಕ್ಕಳ ಆಟಿಕೆಗಳು, ತರಹೇವಾರಿ ಆಹಾರ ಪದಾರ್ಥಗಳು, ಕಡಲೆಪುರಿ, ಬತಾಸು, ಖಾರ, ಸೇರಿದಂತೆ, ವಿವಿಧ ಮನರಂಜನಾ ಕಾರ್ಯಕ್ರಮಗಳು, ಜನರನ್ನು ಮನಸೂರೆಗೊಳಿಸುತ್ತಿದ್ದು, ಸಿಡಿಮದ್ದು ಮತ್ತು ಡಿ.ಜೆ.ಯ ಸದ್ದು, ಯುವಕರನ್ನುಉಲ್ಲಾಸದಲ್ಲಿ ತೇಲುವಂತೆ ಮಾಡಿದೆ.

ಒಟ್ಟಿನಲ್ಲಿ ತಿಪಟೂರಿನ ಶ್ರೀ ಸತ್ಯಗಣಪತಿ ಮಹೋತ್ಸವ ಅದ್ದೂರಿಯಾಗಿ ಆಚರಣೆಯಾಗುತ್ತಿದ್ದು ಇಂದು ಸಂಜೆ ಗಣಪತಿ ವಿಸರ್ಜನೆ ಮಾಡುವ ಮೂಲಕ ಈ ವರ್ಷದ ಜಾತ್ರಾ ಮಹೋತ್ಸವಕ್ಕೆ ತೆರೆಬೀಳಲಿದೆ.

RELATED ARTICLES

Related Articles

TRENDING ARTICLES