Monday, December 23, 2024

‘ಲಾಸ್ ಏಂಜಲ್ಸ್ ಟೈಮ್ಸ್’ ಮುಖಪುಟದಲ್ಲಿ ರಾಜಮೌಳಿ..!

ವಿಶ್ವ ಸಿನಿದುನಿಯಾದಲ್ಲಿ ಸೌತ್ ಸಿನಿಮಾಗಳ ತಾಕತ್ತು ಪ್ರದರ್ಶನ ಮಾಡಿದ ಮಹಾನ್ ಮಾಂತ್ರಿಕ ರಾಜಮೌಳಿ. ಇವ್ರ ಸಿನಿಮಾಗಳು ಮಾಡಿದ ಮೋಡಿಯ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸದ್ಯ ತ್ರಿಬಲ್ ಆರ್ ಸಿನಿಮಾ ಹೈದ್ರಾಬಾದ್​ನಿಂದ ಆಸ್ಕರ್ ಅಂಗಳದವರೆಗೂ ಸೌಂಡ್ ಮಾಡಿದೆ. ಅದೇ ಕಾರಣದಿಂದ ಅಮೆರಿಕಾ ನ್ಯೂಸ್​ ಪೇಪರ್​​ನ ಫ್ರಂಟ್​ಪೇಜ್​ನಲ್ಲಿ ರಾರಾಜಿಸ್ತಿದ್ದಾರೆ ರಾಜಮೌಳಿ.

  • ಹಾಲಿವುಡ್ ಮೇಕರ್ಸ್​ ಹುಬ್ಬೇರಿಸಿದ ತ್ರಿಬಲ್ ಆರ್ ಡೈರೆಕ್ಟರ್
  • ರಾಮ್ ಚರಣ್ ಮತ್ತು Jr NTR ಟಾಲಿವುಡ್ ಮೆಗಾಸ್ಟಾರ್ಸ್​
  • ಜಕ್ಕನ್ನನ ಹಾಲಿವುಡ್ ಪದಾರ್ಪಣೆಗೆ ಹಾದಿ ಮತ್ತಷ್ಟು ಸುಲಭ

ರಾಜಮೌಳಿ.. ಪ್ರೈಡ್ ಆಫ್ ಇಂಡಿಯನ್ ಸಿನಿಮಾ. ಬಾಹುಬಲಿ ಹಾಗೂ ತ್ರಿಬಲ್ ಆರ್ ಸಿನಿಮಾಗಳಿಂದ ಇವ್ರು ನಮ್ಮ ಭಾರತೀಯ ಚಿತ್ರಗಳಿಗೆ ಅಂತಾರಾಷ್ಟ್ರೀಯ ಮನ್ನಣೆ ತಂದುಕೊಟ್ಟರು. ಕಥೆಯನ್ನ ಪ್ರೆಸೆಂಟ್ ಮಾಡೋ ವಿಧಾನ, ಪಾತ್ರಗಳ ಸೃಷ್ಟಿಸುವಿಕೆ, ಮೇಕಿಂಗ್ ಹೀಗೆ ಎಲ್ಲಾ ವಿಭಾಗಗಳಲ್ಲಿ ಟ್ರೆಂಡ್​ಸೆಟ್ ಮಾಡಿದ್ರು. ಅದೇ ಕಾರಣಕ್ಕೆ ವಿಶ್ವ ಸಿನಿದುನಿಯಾದಲ್ಲಿ ರಾಜಮೌಳಿ ಟಾಕ್ ಅಫ್ ದಿ ಟೌನ್ ಆಗಿದ್ದಾರೆ.

ಅದ್ರಲ್ಲೂ ಅವ್ರ ರೀಸೆಂಟ್ ರಿಲೀಸ್ ತ್ರಿಬಲ್ ಆರ್ ಸಿನಿಮಾ ವಿಶ್ವದ ಮೂಲೆ ಮೂಲೆಗಳಿಗೆ ತಲುಪಿದೆ. ಭಾಷೆ ಬಾರದವರಿಗೂ ವ್ಹಾವ್ ಫೀಲ್ ಕೊಟ್ಟಿದೆ. ನಾಟು ನಾಟು ಸಾಂಗ್ ಆಸ್ಕರ್ ರೇಸ್​ಗೆ ಆಯ್ಕೆಯಾಗಿ, ಜೂನಿಯರ್ ಎನ್​ಟಿಆರ್ ಹಾಗೂ ರಾಮ್​ಚರಣ್ ತೇಜಾ ಕೂಡ ಸದ್ದು ಮಾಡಿದ್ದಾರೆ.

ಎಂ ಎಂ ಕೀರವಾಣಿ ಸಂಗೀತ ಸಂಯೋಜನೆಯ ನಾಟು ನಾಟು ಸಾಂಗ್ ವಿಚಾರ ಅಮೆರಿಕಾದ ಮ್ಯೂಸಿಕ್ ಮ್ಯಾಹಜಿನ್​ವೊಂದು ವರದಿ ಮಾಡಿದ್ದ ಸುದ್ದಿಯನ್ನ ನಾವೇ ನಮ್ಮ ಫಿಲ್ಮಿ ಪವರ್​ನಲ್ಲಿ ಬಿತ್ತರಿಸಿದ್ವಿ. ಇದೀಗ ಅಮೆರಿಕಾದ ಪ್ರತಿಷ್ಟಿತ ದಿನಪತ್ರಿಕೆ ಲಾಸ್ ಏಂಜಲ್ಸ್ ಟೈಮ್ಸ್​ನ ಮುಖ ಪುಟದಲ್ಲಿ ರಾಜಮೌಳಿ ಫೋಟೋ ಹಾಗೂ ಅವ್ರ ಕುರಿತ ಲೇಖನ ಪ್ರಕಟವಾಗಿದೆ. ಇದು ನಿಜಕ್ಕೂ ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡೋ ವಿಷಯವೂ ಹೌದು.

ನವೆಂಬರ್ 25ರ ಲಾಸ್ ಏಂಜಲ್ಸ್ ಟೈಮ್ಸ್​ ಎಡಿಷನ್​ನಲ್ಲಿ ರಾಜಮೌಳಿ ಸುದ್ದಿ ಪ್ರಕಟವಾಗಿದ್ದು, ಇಂಡಿಯಾದ ಖ್ಯಾತ ಆ್ಯಕ್ಷನ್ ಫಿಲ್ಮ್ ಮೇಕರ್ ಅಂತ ನಮೂದಿಸಲಾಗಿದೆ. ತ್ರಿಬಲ್ ಆರ್ ಸಿನಿಮಾನ ಟಾಲಿವುಡ್ ಎಪಿಕ್ ಎಂದಿರೋ ಪತ್ರಿಕೆ, ರಾಮ್ ಚರಣ್ ತೇಜಾ ಹಾಗೂ ಜೂನಿಯರ್ ಎನ್​ಟಿಆರ್ ಇಬ್ಬರೂ ಟಾಲಿವುಡ್​ನ ಮೆಗಾಸ್ಟಾರ್ಸ್​ ಎಂದಿದೆ.

ರಾಜಮೌಳಿ ನಿರ್ದೇಶನದ ಮತ್ತೆರಡು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳಾದ ಬಾಹುಬಲಿ ಹಾಗೂ ಬಾಹುಬಲಿ-2 ಬಗ್ಗೆಯೂ ಬರೆದಿರೋ ಲಾಸ್ ಏಂಜಲ್ಸ್ ಟೈಮ್ಸ್, ನಮ್ಮವ್ರನ್ನ ಈ ಪಾಟಿ ಹಾಡಿ ಹೊಗಳಿರೋದು ಖುಷಿಯ ವಿಚಾರ. ಇದು ರಾಜಮೌಳಿಯ ಹಾಲಿವುಡ್ ಎಂಟ್ರಿಗೆ ಸುಲಭ ದಾರಿಯಾಗಲಿದ್ದು, ಪ್ರಸ್ತುತ ಮೌಳಿ ಇತ್ತೀಚೆಗೆ ಹಾಲಿವುಡ್​ನಲ್ಲೇ ಬೀಡುಬಿಟ್ಟಿದ್ದಾರೆ. ಮತ್ತೊಂದೆಡೆ ಪ್ರಿನ್ಸ್ ಮಹೇಶ್ ಬಾಬು ಜೊತೆ 800 ಕೋಟಿ ಮೆಗಾ ಪ್ರಾಜೆಕ್ಟ್​ಗೆ ಯೋಜನೆ ರೂಪಿಸ್ತಿದ್ದಾರೆ.

ಒಟ್ಟಾರೆ ನಮ್ಮ ಸೌತ್ ಸಿನಿಮಾಗಳು ಒಂದು ಕಾಲದಲ್ಲಿ ಬಾಲಿವುಡ್ ಲೆವೆಲ್​ಗೆ ರೀಚ್ ಆಗೋದು ಕೂಡ ಕಷ್ಟ ಅನಿಸ್ತಿತ್ತು. ಇಂದು ನಮ್ಮವ್ರ ತಾಕತ್ತನ್ನ ಇಡೀ ವಿಶ್ವವೇ ಕೊಂಡಾಡ್ತಿರೋದು ನಮ್ಮವ್ರ ಪ್ರಾಮಾಣಿಕ ಪ್ರಯತ್ನಕ್ಕೆ ಹಿಡಿದ ಕೈಗನ್ನಡಿ ಅಂದ್ರೆ ತಪ್ಪಾಗಲ್ಲ. ಈ ಜೈತ್ರಯಾತ್ರೆ ಹೀಗೆಯೇ ಮುಂದುವರೆಯಲಿ ಅನ್ನೋದು ಸಿನಿಪ್ರಿಯರ ಆಶಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES