Wednesday, January 22, 2025

ಭಾರತ-ಬಾಂಗ್ಲಾದೇಶ ಸರಣಿಯಿಂದ ಜಡೇಜಾ ಔಟ್​

ಭಾರತ-ಬಾಂಗ್ಲಾದೇಶ್ ನಡುವಣ ಏಕದಿನ ಹಾಗೂ ಟೆಸ್ಟ್ ಸರಣಿಯಿಂದ ಟೀಮ್ ಇಂಡಿಯಾದ ಆಲ್​ರೌಂಡರ್ ರವೀಂದ್ರ ಜಡೇಜಾ ಹೊರಬಿದ್ದಿದ್ದಾರೆ. ಕಳೆದ ಏಷ್ಯಾಕಪ್​ ವೇಳೆ ಗಾಯಗೊಂಡಿದ್ದ ಜಡೇಜಾ ಮೊಣಕಾಲಿನ ಕಾಲಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಹೀಗಾಗಿ ಟಿ20 ವಿಶ್ವಕಪ್​ನಲ್ಲಿ ಕಾಣಿಸಿಕೊಂಡಿರಲಿಲ್ಲ.

ಇದಾಗ್ಯೂ ಬಾಂಗ್ಲಾ ವಿರುದ್ಧದ ಸರಣಿಯ ಮೂಲಕ ಜಡ್ಡು ಕಂಬ್ಯಾಕ್ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ಸಂಪೂರ್ಣ ಫಿಟ್​ ಆಗದ ಕಾರಣ ಅವರನ್ನು ಏಕದಿನ ತಂಡದ ಆಯ್ಕೆಗೆ ಪರಿಗಣಿಸಿರಲಿಲ್ಲ. ಇದೀಗ ಟೆಸ್ಟ್ ಸರಣಿಯಿಂದಲೂ ರವೀಂದ್ರ ಜಡೇಜಾ ಹೊರಬಿದ್ದಿದ್ದಾರೆ. ಅಲ್ಲದೆ ಅವರ ಬದಲಿಗೆ ಉತ್ತರ ಪ್ರದೇಶದ ಆಟಗಾರ ಸೌರಭ್ ಕುಮಾರ್​ ಆಯ್ಕೆಯಾಗಲಿದ್ದಾರೆ. ಹಾಗೆಯೇ ಹೆಚ್ಚುವರಿ ಆಟಗಾರನ ಸ್ಥಾನದಲ್ಲಿ ಸೂರ್ಯಕುಮಾರ್ ಯಾದವ್​ಗೂ ಅವಕಾಶ ಸಿಗುವ ಸಾಧ್ಯತೆಯಿದೆ.

ಜಡೇಜಾ ಅವರು ಸಂಪೂರ್ಣ ಗುಣಮುಖರಾಗಿಲ್ಲ. ಹೀಗಾಗಿ ಟೆಸ್ಟ್ ಸರಣಿ ವೇಳೆಗೆ ಅವರು ಕಂಬ್ಯಾಕ್ ಮಾಡುವುದು ಅನುಮಾನ. ಅಲ್ಲದೆ ಮತ್ತಷ್ಟು ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರ ತಂಡ ಸಲಹೆ ನೀಡಿದೆ. ಹೀಗಾಗಿ ಟೆಸ್ಟ್ ತಂಡದ ಆಯ್ಕೆಗೂ ನಾವು ಜಡೇಜಾ ಅವರನ್ನು ಪರಿಗಣಿಸುತ್ತಿಲ್ಲ ಎಂದು ಆಯ್ಕೆ ಸಮಿತಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES