Saturday, January 18, 2025

ನ್ಯೂಜಿಲೆಂಡ್ ಬಸ್ ಡ್ರೈವರ್​ಗೆ ಹಾರ್ದಿಕ್ ಗಿಫ್ಟ್​​​

ಟೀಮ್ ಇಂಡಿಯಾದ ಬ್ಯಾಕಪ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದರು.

ಖಾಯಂ ನಾಯಕ ರೋಹಿತ್ ಶರ್ಮಾ ಹಾಗೂ ಉಪ ನಾಯಕ ಕೆಎಲ್ ರಾಹುಲ್ ಕಿವೀಸ್ ಪ್ರವಾಸದಿಂದ ಹೊರಗಿರುವ ಕಾರಣ ಪಾಂಡ್ಯಗೆ ಟಿ20 ನಾಯಕತ್ವ ನೀಡಲಾಯಿತು. ಹಾರ್ದಿಕ್​ ನೇತೃತ್ವದಲ್ಲಿ ಭಾರತ ಟಿ20 ಸರಣಿಯನ್ನು 1-0 ಅಂತರದಿಂದ ವಶಪಡಿಸಿಕೊಂಡಿತು. ಹಾರ್ದಿಕ್​ಗೆ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಅವರು ಟಿ20 ಸರಣಿ ಮುಗಿದ ಬಳಿಕ ತವರಿಗೆ ಮರಳಿದ್ದಾರೆ.

ಆದರೆ, ಭಾರತಕ್ಕೆ ಹಿಂತಿರುಗುವ ಮುನ್ನ ಹಾರ್ದಿಕ್ ಮಾಡಿದ ಒಂದು ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ನ್ಯೂಜಿಲೆಂಡ್​ನಲ್ಲಿ ಇವರು ಮಾಡಿದ ಕೆಲಸ ಎಲ್ಲರ ಮನ ಗೆದ್ದಿದೆ. ಹಾರ್ದಿಕ್ ಪಾಂಡ್ಯ ಅವರು ಟಿ20 ಸರಣಿ ಮುಗಿಸಿ ಭಾರತಕ್ಕೆ ಹಿಂತಿರುಗುವ ಮುನ್ನ ನ್ಯೂಜಿಲೆಂಡ್​ನಲ್ಲಿ ಭಾರತದ ಕ್ರಿಕೆಟ್ ತಂಡದ ಬಸ್ ಚಾಲಕನಿಗೆ ತಮ್ಮ ಟೀಮ್ ಇಂಡಿಯಾ ಜೆರ್ಸಿ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಷ್ಟೇ ಅಲ್ಲದೆ ಈ ಜೆರ್ಸಿ ಮೇಲೆ ತಮ್ಮ ಆಟೊಗ್ರಾಫ್ ಬರೆದು ಮರೆಯಲಾದ ಉಡುಗೊರೆ ನೀಡಿದ್ದಾರೆ. ಈ ಸುದ್ದಿ ನ್ಯೂಜಿಲೆಂಡ್ ಮತ್ತು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ನೀಡಿದೆ.

RELATED ARTICLES

Related Articles

TRENDING ARTICLES