Wednesday, January 22, 2025

ವೈದ್ಯೆ ಜೊತೆ ಪಾಪಿ ಅಫ್ತಾಬ್​​ ಪ್ರೇಮದಾಟ

ನವದೆಹಲಿ :ಪ್ರೇಯಸಿ ಶ್ರದ್ಧಾ ವಾಕರ್​ ಅನ್ನು ಹತ್ಯೆ ಮಾಡಿ, ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಜ್​ನಲ್ಲಿಟ್ಟು, ಅಫ್ತಾಬ್ ವೈದ್ಯೆ ಜತೆ ಅದೇ ಮನೆಯಲ್ಲಿ ಡೇಟಿಂಗ್ ಮಾಡುತ್ತಿದ್ದ ಎನ್ನುವ ವಿಚಾರ ಬೆಳಕಿಗೆ ಬಂದಿದೆ.

ಈ ಹಿಂದೆ ಈ ವಿಚಾರ ತಿಳಿದಿತ್ತಾದರೂ ಆತ ಡೇಟಿಂಗ್ ಮಾಡುತ್ತಿದ್ದ ಯುವತಿ ವೃತ್ತಿಯಲ್ಲಿ ವೈದ್ಯೆ ಎಂದು ತಿಳಿದಿರಲಿಲ್ಲ. ಶ್ರದ್ಧಾಳನ್ನು ಕೊಂದ ಬಳಿಕ ಅಫ್ತಾಬ್ ತನ್ನ ಫ್ಲಾಟ್‌ಗೆ ಕರೆತಂದ ಯುವತಿ ವೃತ್ತಿಯಲ್ಲಿ ವೈದ್ಯೆ, ಪೊಲೀಸರು ಆಕೆಯನ್ನು ಪತ್ತೆ ಮಾಡಿದ್ದಾರೆ. ಇಲ್ಲಿ ನೋಡಬೇಕಾದ ದೊಡ್ಡ ವಿಷಯವೆಂದರೆ ಶ್ರದ್ಧಾ ದೇಹದ ಭಾಗಗಳು ಫ್ರಿಜ್‌ನಲ್ಲಿ ಇರುವಾಗಲೇ ಹುಡುಗಿಯನ್ನು ಆತ ಫ್ಲಾಟ್‌ಗೆ ಕರೆತಂದಿದ್ದ. ಅಫ್ತಾಬ್​ಗೆ ತಾನು ಕೊಲೆ ಮಾಡಿರುವ ಕುರಿತು ಯಾವುದೇ ತಪ್ಪಿತಸ್ಥ ಭಾವನೆಯೂ ಇರಲಿಲ್ಲ ಎಂಬುದು ತೋರುತ್ತದೆ.

ಅಫ್ತಾಬ್ ಪೂನವಾಲಾ ಅವರ ಪಾಲಿಗ್ರಾಫ್ ಪರೀಕ್ಷೆ ನಡೆದಿದ್ದು, ಇದೀಗ ನಾರ್ಕೋ ಪರೀಕ್ಷೆ ಕೂಡ ನಡೆಯಲಿದೆ. ಪೂನಾವಾಲಾ ಮೊಬೈಲ್ ಡೇಟಿಂಗ್ ಅಪ್ಲಿಕೇಷನ್ ಬಂಬಲ್ ಮೂಲಕ ಮಹಿಳೆಯನ್ನು ಭೇಟಿಯಾಗಿದ್ದ, ಅದೇ ಆನ್​ಲೈನ್ ಪ್ಲಾಟ್​ಫಾರ್ಮ್ ಮೂಲಕ ಈ ಮೊದಲು ಶ್ರದ್ಧಾಳನ್ನು ಕೂಡ ಭೇಟಿಯಾಗಿದ್ದ. ಇದೀಗ ಅಫ್ತಾಬ್​ ಜತೆ ಇದ್ದ ಮಹಿಳೆಯು ಮನೋವೈದ್ಯೆ ಎಂಬುದು ತಿಳಿದುಬಂದಿದೆ.

RELATED ARTICLES

Related Articles

TRENDING ARTICLES