Monday, December 23, 2024

ಜನಸಂಪರ್ಕ ಸಮಾವೇಶಕ್ಕೆ ಚಾಲನೆ ನೀಡಲಿರುವ ಸಿಎಂ

ಶಿವಮೊಗ್ಗ : ತೀರ್ಥಹಳ್ಳಿಗೆ ಸಿಎಂ ಭೇಟಿ ನೀಡಲಿದ್ದು, ಜನಸಂಪರ್ಕ ಸಮಾವೇಶಕ್ಕೆ ಚಾಲನೆಯನ್ನು ನೀಡಲಿದ್ದಾರೆ.

ಮಧ್ಯಾಹ್ನ 1ಗಂಟೆಗೆ ತೀರ್ಥಹಳ್ಳಿಗೆ ಆಗಮಿಸಲಿರುವ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆಯನ್ನು ನೀಡಲಿದ್ದಾರೆ. 618 ರೂ. ಕೋಟಿ ಮೊತ್ತದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಮಾಡಲಿದ್ದು, ತೀರ್ಥಹಳ್ಳಿಯ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಸಮಾವೇಶ ನಡೆಯಲಿದೆ.

344 ಕೋಟಿ ರೂ.ಬಹುಗ್ರಾಮ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ
110 ಕೋಟಿ ರೂ. ವೆಚ್ಚದ ಜಲ ಜೀವನ್‌ ಮಿಷನ್ ಕಾಮಗಾರಿ
107 ಕೋಟಿ ರೂ. ವೆಚ್ಚದ ವಿವಿಧ ಗ್ರಾಮೀಣ ರಸ್ತೆಗಳ ಅಭಿವೃದ್ಧಿ
10 ಕೋಟಿ ರೂ. ವೆಚ್ಚದ ಪ್ರಥಮ ದರ್ಜೆ ಕಾಲೇಜು ಕಟ್ಟಡ ಉದ್ಘಾಟನೆ
26 ಕೋಟಿ ರೂ. ಹೊಸಳ್ಳಿ – ತೂದೂರು ಸಂಪರ್ಕಿಸುವ ಸೇತುವೆ ಕಾಮಗಾರಿ
25 ಕೋಟಿ ರೂ. ಕೋಣಂದೂರು ಚತುಷ್ಪಥ ರಸ್ತೆ ಕಾಮಗಾರಿ
25 ಕೋಟಿ ರೂ. ಪಡುಬಿದ್ರೆ-ಚಿಕ್ಕಲಗೋಡು ರಸ್ತೆ ಕಾಮಗಾರಿ
24 ಕೋಟಿ ರೂ. ಸಂಪೆಕಟ್ಟೆ-ಕಾರ್ಗಡಿ ಸಂಪರ್ಕಿಸುವ ಬಿಲ್ಸಾಗರ್ ಸೇತುವೆ ಕಾಮಗಾರಿ
23 ಕೋಟಿ ರೂ. ಮಾವಿನಕಟ್ಟೆ-ಕಲ್ಮನೆ ರಸ್ತೆ ಕಾಮಗಾರಿ
15 ಕೋಟಿ ರೂ.ರೈತರ ಜಮೀನುಗಳಿಗೆ ತಡೆಗೋಡೆ ನಿರ್ಮಾಣ ಕಾಮಗಾರಿ
10 ಕೋಟಿ ರೂ. ತುಂಗಾ ಮೇಲ್ದಂಡೆ ಯೋಜನೆಯಡಿ ವಿವಿಧ ರಸ್ತೆಗಳ ಕಾಮಗಾರಿಗಳಿಗೆ ಚಾಲನೆಯನ್ನು ನೀಡಲಿದ್ದಾರೆ.

RELATED ARTICLES

Related Articles

TRENDING ARTICLES