Sunday, December 22, 2024

ಅಪ್ಪು ಫ್ಯಾನ್ ಬಾಂಡ್ ರವಿ ಆಗಮನಕ್ಕೆ ಮುಹೂರ್ತ ಫಿಕ್ಸ್

ಡಾರ್ಲಿಂಗ್ ಪ್ರಭಾಸ್ ಜೊತೆ ತೊಡೆತಟ್ಟಿ ನಿಂತಿರೋ ಕನ್ನಡದ ಉಡಾಳ್ ಬಾಬು, ಕರ್ನಾಟಕರತ್ನ ಅಪ್ಪು ಅಭಿಮಾನಿಯಾಗಿ ಬೆಳ್ಳಿತೆರೆ ಮೇಲೆ ಬ್ಯಾಂಗ್​ ಮಾಡೋಕೆ ಬರ್ತಿದ್ದಾರೆ. ಯೆಸ್.. ಮೋಸ್ಟ್ ಎಕ್ಸ್​ಪೆಕ್ಟೆಡ್ ಬಾಂಡ್ ರವಿ ಮೂವಿ ರಿಲೀಸ್ ಡೇಟ್​ ಫೈನಲ್ ಆಗಿದೆ. ಇಷ್ಟಕ್ಕೂ ಚಿತ್ರದ ಹೈಲೈಟ್ಸ್ ಏನು..? ರಿಲೀಸ್ ಯಾವಾಗ ಅನ್ನೋದಕ್ಕೆ ಉತ್ತರ ನೀವೇ ಓದಿ.

  • ಡಿ- 9ರಿಂದ ಬಿಗ್​ಸ್ಕ್ರೀನ್​ನಲ್ಲಿ ಪ್ರಮೋದ್ ಮಾಸ್ ಖದರ್..!
  • ಟೀಸರ್ ಮತ್ತು ಸಾಂಗ್ಸ್​ನಿಂದ ಸದ್ದು ಮಾಡ್ತಿದೆ ಬಾಂಡ್ ರವಿ
  • ಮಾಸ್ ಡೈಲಾಗ್ಸ್.. ಜಬರ್ದಸ್ತ್ ಮೇಕಿಂಗ್.. ಕಿಲ್ಲಿಂಗ್ ಸೀನ್ಸ್

ಯೆಸ್.. ಸಿಂಗಲ್ ಟೀಸರ್​ನಿಂದ ಹಲ್​ಚಲ್ ಎಬ್ಬಿಸಿದ್ದ ಬಾಂಡ್​ರವಿ ಚಿತ್ರದ ರಿಲೀಸ್ ಡೇಟ್ ಫೈನಲ್ ಆಗಿದೆ. ಡಿಸೆಂಬರ್ 9ರಂದು ಬಾಂಡ್​ರವಿ ವರ್ಲ್ಡ್​ವೈಡ್ ರಿಲೀಸ್​ ಆಗ್ತಿದ್ದು, ಈ ಚಿತ್ರದಿಂದ ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಮಾಸ್ ಹೀರೋ ಉಗಮ ಆಗ್ತಿದೆ.

ರತ್ನನ್ ಪ್ರಪಂಚ ಚಿತ್ರದಲ್ಲೇ ಡಾಲಿಯ ಎದುರು ತನ್ನ ನಟನಾ ಗಮ್ಮತ್ತು ತೋರಿದ್ದ ಉಡಾಳ್ ಬಾಬು ಅಲಿಯಾಸ್ ಪ್ರಮೋದ್, ಈ ಚಿತ್ರದ ಅಸಲಿ ಬಾಂಡ್ ರವಿ. ಹೌದು.. ಅಪ್ಪಟ ಅಪ್ಪು ಅಭಿಮಾನಿಯಾಗಿ ಕಾಣಸಿಗಲಿರೋ ನಾಯಕನಟ, ಜೈಲಲ್ಲಿ ರೌಡಿಗಳಿಗೆ ಮಣ್ಣಿ ಮುಕ್ಕಿಸೋ ಮಾಸ್ ಎಲಿಮೆಂಟ್ಸ್ ಇಂಪ್ರೆಸ್ಸೀವ್ ಅನಿಸಿವೆ.

ಪ್ರಜ್ವಲ್ ನಿರ್ದೇಶನದ ಹಾಗೂ ನರಸಿಂಹಮೂರ್ತಿ ವಿ ನಿರ್ಮಾಣದ ಬಾಂಡ್​ರವಿ, ಪಂಚ್ ಡೈಲಾಗ್ಸ್, ಮಾಸ್ ಫೈಟ್ಸ್ ಹಾಗೂ ಅದ್ಭುತ ಮೇಕಿಂಗ್​ನಿಂದ ಮ್ಯಾಜಿಕ್ ಮಾಡೋ ಮನ್ಸೂಚನೆ ನೀಡಿದೆ. ಸದ್ಯ ಡಾರ್ಲಿಂಗ್ ಪ್ರಭಾಸ್ ಎದುರು ಸಲಾರ್​ನಲ್ಲಿ ನಟಿಸೋಕೆ ಅವಕಾಶ ಗಿಟ್ಟಿಸಿಕೊಂಡಿರೋ ಪ್ರಮೋದ್, ಈ ಚಿತ್ರದಿಂದ ಇಂಡಸ್ಟ್ರಿಗೆ ಅಸೆಟ್ ಆಗೋ ಭರವಸೆ ಕೊಡಲಿದ್ದಾರೆ.

ಜಯಂತ್ ಕಾಯ್ಕಿಣಿ, ವಿ ನಾಗೇಂದ್ರ ಪ್ರಸಾದ್ ಹಾಗೂ ಚಿನ್ಮಯ್ ಬಾವಿಕೆರೆ ಸಾಹಿತ್ಯದ ಹಾಡುಗಳು ಚಿತ್ರಕ್ಕೆ ಪ್ಲಸ್ ಆಗಿವೆ. ಮೆಲೋಡಿ ಕಿಂಗ್ ಮನೋಮೂರ್ತಿ ಈ ಸಿನಿಮಾಗೆ ಮ್ಯೂಸಿಕ್ ಕಂಪೋಸ್ ಮಾಡಿರೋದು ವಿಶೇಷ. ಕೆ ಎಸ್ ಚಂದ್ರಶೇಖತ್ ಸಿನಿಮಾಟೋಗ್ರಫಿ, ವಿಕ್ರಮ್ ಮಾಸ್ಟರ್ ಹಾಗೂ ಡಿಫರೆಂಟ್ ಡ್ಯಾನಿ ಸ್ಟಂಟ್ಸ್ ಚಿತ್ರಕ್ಕಿದೆ. ಮುಂಬೈನಲ್ಲಿ ಸೆಟಲ್ ಆಗಿರೋ ಕನ್ನಡತಿ ಕಾಜಲ್ ಕುಂದರ್ ಇಲ್ಲಿ ಪ್ರಮೋದ್​ಗೆ ಜೋಡಿ.

ಮಜಾ ಮಜಾ ಸಾಂಗ್ ಸಖತ್ ಮಜಭೂತಾಗಿದೆ. ಜೈಲ್​ನಲ್ಲಿ ಖೈದಿಗಳ ಜೊತೆ ಸ್ಟೆಪ್ ಹಾಕೋ ಈ ಹಾಡು, ಯೂತ್​ಗೆ ಮಜಾ ಅನಿಸಲಿದೆ. ಚೌಕ ಚಿತ್ರದಲ್ಲಿನ ಅಲ್ಲಾಡ್ಸ್ ಅಲ್ಲಾಡ್ಸ್ ಸಾಂಗ್​ನ ನೆನಪಿಸ್ತಿರೋ ಈ ಹಾಡು ಬಾಂಡ್​ರವಿ ಡ್ಯಾನ್ಸ್ ಧಮಾಕ ಪರಿಚಯಿಸಿದೆ. ಒಟ್ಟಾರೆ ಡಿಸೆಂಬರ್ 9ಕ್ಕೆ ಪ್ರಮೋದ್ ಪರ್ಫಾಮೆನ್ಸ್ ತೆರೆ ಮೇಲೆ ಮೂಡಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES