Monday, January 13, 2025

ಕರಿಕೋಟು ಧರಿಸಿ ಯುದ್ಧಕಾಂಡಕ್ಕೆ ಎಂಟ್ರಿ ಕೊಟ್ಟ ಅಜಯ್

ಯುದ್ಧಕಾಂಡ ಅಂದಾಕ್ಷಣ ಕ್ರೇಜಿಸ್ಟಾರ್ ರವಿಚಂದ್ರನ್ ನೆನಪಾಗ್ತಿದ್ರು. ಇದೀಗ ಅದ್ರ ಮುಂದುವರಿದ ಚಾಪ್ಟರ್ ಕಿಕ್​ಸ್ಟಾರ್ಟ್​ ಆಗ್ತಿದೆ. ಆದ್ರೆ ಈ ಬಾರಿ ಕನಸುಗಾರ ರವಿಮಾಮ ಬದಲಿಗೆ ಕೃಷ್ಣ ಅಜಯ್​ರಾವ್ ಕರಿಕೋಟು ಧರಿಸಿ, ಕೋರ್ಟ್​ನತ್ತ ಬರಲಿದ್ದಾರೆ. ಇಷ್ಟಕ್ಕೂ ಏನಿದ್ರ ಅಸಲಿ ಮ್ಯಾಟರ್ ಅನ್ನೋದಕ್ಕೆ ಈ ಸ್ಪೆಷಲ್ ಡಿಟೈಲ್ಡ್ ಸ್ಟೋರಿ ಒಮ್ಮೆ ನೋಡಿಬಿಡಿ.

  • ಅಂದು ಕ್ರೇಜಿಸ್ಟಾರ್.. ಇಂದು ಅಜಯ್ ರಾವ್ ಚಾಪ್ಟರ್-2

ಇದು ಯುದ್ಧಕಾಂಡ ಚಿತ್ರದ ಟೈಟಲ್ ಟೀಸರ್ ಝಲಕ್. ನಟ ಅಜಯ್ ರಾವ್ ತಮ್ಮ ಹೋಮ್ ಬ್ಯಾನರ್​ನಡಿ ನಿರ್ಮಾಣ ಮಾಡೋದ್ರ ಜೊತೆಗೆ ಲೀಡ್ ರೋಲ್​ನಲ್ಲಿ ಬಣ್ಣ ಹಚ್ಚಿರೋ ಸಿನಿಮಾ. ಪವನ್ ಭಟ್ ನಿರ್ದೇಶನದ ಈ ಸಿನಿಮಾದ ಟೈಟಲ್ ಟೀಸರ್ ರೀಸೆಂಟ್ ಆಗಿ ಲಾಂಚ್ ಮಾಡಲಾಯ್ತು.

ಸಾಮಾನ್ಯವಾಗಿ ಯುದ್ಧಕಾಂಡ ಚಿತ್ರದ ಟೈಟಲ್ ಕೇಳ್ತಿದ್ದಂತೆ ಕ್ರೇಜಿಸ್ಟಾರ್ ರವಿಚಂದ್ರನ್ ನೆನಪಾಗ್ತಾರೆ. ಕಾರಣ 80ರ ದಶಕದ ಆ ಸಿನಿಮಾ 1989ರಲ್ಲಿ ಅತಿಹೆಚ್ಚು ಬಾಕ್ಸ್ ಆಫೀಸ್ ಗಳಿಸಿದ ಚಿತ್ರ ಅನಿಸಿಕೊಂಡಿತ್ತು. ಅಷ್ಟೇ ಅಲ್ಲ, ಕೋರ್ಟ್​ ಡ್ರಾಮಾದಲ್ಲಿ ರವಿಚಂದ್ರನ್ ಕರಿ ಕೋಟು ಧರಿಸಿ, ಎಲ್ಲರ ಹುಬ್ಬೇರಿಸಿದ್ರು.

ಕೆವಿ ರಾಜು ನಿರ್ದೇಶನದ ಈ ಚಿತ್ರದಲ್ಲಿ ಕ್ರೇಜಿಸ್ಟಾರ್ ಎದುರು ಡೈನಾಮಿಕ್ ಹೀರೋ ದೇವರಾಜ್ ಘರ್ಜಿಸಿದ್ರು. ಇನ್ನು ಭಾರತಿ ವಿಷ್ಣುವರ್ಧನ್, ಪೂನಂ, ಶ್ರೀನಿವಾಸ ಮೂರ್ತಿ ಸೇರಿದಂತೆ ದೊಡ್ಡ ತಾರಾಗಣವಿತ್ತು. ಹಂಸಲೇಖ ಸಂಗೀತ ಸಂಯೋಜನೆಯ ಹಾಡುಗಳು ಇಂದಿಗೂ ಎವರ್​ಗ್ರೀನ್ ಅನಿಸುತ್ತೆ. ಅದ್ರಲ್ಲೂ ಸೋಲೇ ಇಲ್ಲ ಸಾಂಗ್ ಸಖತ್ ಹಮ್ಮಿಂಗ್ ಟ್ಯೂನ್ & ಸಾಹಿತ್ಯದಿಂದ ಕೂಡಿದ ಗೀತೆ.

ಯುದ್ಧಕಾಂಡ ಟೈಟಲ್ ಟೀಸರ್ ಲಾಂಚ್ ಫಂಕ್ಷನ್​ಗೆ ಮಗಳು ಹಾಗೂ ಪತ್ನಿ ಸ್ವಪ್ನ ಸಮೇತ ನಾಯಕನಟ ಅಜಯ್ ರಾವ್ ಬಂದಿದ್ದು ವಿಶೇಷ. ಅದ್ರಲ್ಲೂ ವಕೀಲರು ಧರಿಸೋ ಕರಿ ಕೋಟನ್ನ ಧರಿಸಿಯೇ ಕ್ಯಾಮೆರಾಗಳ ಮುಂದೆ ಬಂದಿದ್ದು ಇಂಟರೆಸ್ಟಿಂಗ್ ಅನಿಸಿತು. ಇನ್ನು ಪ್ರತಿಯೊಬ್ಬರೂ ಇಂತಹ ಅಣ್ಣ ಅಥ್ವಾ ತಮ್ಮ ನಮಗೂ ಇರಬೇಕು ಅನ್ನೋ ಫೀಲ್ ಬರೋ ರಿವೆಲ್ಯೂಷನ್ ರೋಲ್ ಅಂತ ಚಿತ್ರ ಹಾಗೂ ಪಾತ್ರದ ಬಗ್ಗೆ ಮುಕ್ತವಾಗಿ ಮಾತನಾಡಿದ್ರು ಅಜಯ್.

ನೈಜ ಘಟನೆ ಆಧಾರಿತ ಸಿನಿಮಾ ಇದಾಗದಿದ್ದರೂ, ಕಾಲ್ಪನಿಕವಾಗಿಯೇ ಬರೆದ ಕಥೆಯ ಅಂಶಗಳಂತೆ ಸಮಾಜದಲ್ಲಿ ಸಾಕಷ್ಟು ಘಟನೆಗಳು ನಡೀತಿವೆ. ನ್ಯಾಯ ಅನ್ನೋದು ಸರಿಯಾದ ಸಮಯಕ್ಕೆ ಸಿಗಬೇಕು ಅನ್ನೋದು ಈ ಚಿತ್ರದ ಉದ್ದೇಶವಾಗಿದೆ. ನಿಶ್ವಿಕಾ ನಾಯ್ಡು & ಮೇಘನಾ ಈ ಚಿತ್ರದ ನಾಯಕಿಯರು ಅಲ್ಲ ಎಂದಿರೋ ಅಜಯ್ ರಾವ್, ಸದ್ಯದಲ್ಲೇ ನಾಯಕಿ ಹೆಸರು ರಿವೀಲ್ ಮಾಡಲಿದ್ದಾರಂತೆ.

ಟೀಸರ್​ನಿಂದ ಸಿನಿಮಾದ ಇಂಟೆನ್ಸಿಟಿ ಅರ್ಥೈಸಿರೋ ಚಿತ್ರತಂಡ, ಡಿಸೆಂಬರ್ ಎರಡನೇ ವಾರದ ಬಳಿಕ ಶೂಟಿಂಗ್ ಸೆಟ್​ಗೆ ಲಗ್ಗೆ ಇಡಲಿದೆಯಂತೆ. ಮಾರ್ಚ್​ನಲ್ಲಿ ಸರ್​ಪ್ರೈಸಿಂಗ್ ಮ್ಯಾಟರ್ ರಿವೀಲ್ ಮಾಡೋ ಯೋಜನೆಯಲ್ಲಿರೋ ಚಿತ್ರತಂಡ, ದೊಡ್ಡ ಮಟ್ಟದಲ್ಲಿ ಕಂಟೆಂಟ್​ನ ಪ್ರೆಸೆಂಟ್ ಮಾಡಲಿದೆಯಂತೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES