ಚಿಕ್ಕೋಡಿ : ಮಹಾರಾಷ್ಟ್ರ ಗಡಿ ಕುರಿತು ವಿವಾದ ಸೃಷ್ಟಿಸುತ್ತಿದ್ದು, ಇದಕ್ಕೆ ಮಹಾರಾಷ್ಟ್ರ ಕನ್ನಡಿಗರು ಪ್ರತ್ಯುತ್ತರ ನೀಡಿದ್ದಾರೆ.
ಉಮದಿ ಗ್ರಾಮದಲ್ಲಿ ಸಭೆ ಸೇರಿದ ಜತ್ತ ತಾಲೂಕು ನೀರಾವರಿ ಹೋರಾಟ ಸಮಿತಿ, ನಮಗೆ ನೀರು ಕೊಡಿ ಇಲ್ಲವಾದ್ರೆ ಕರ್ನಾಟಕಕ್ಕೆ ಹೋಗ್ತೇವೆ ಎಂದು ಹೇಳಿದ್ದಾರೆ. ಜತ್ತ ತಾಲೂಕಿನ 42 ಹಳ್ಳಿಗಳ ಜನರು ಒಕ್ಕೊರಲಿನಿಂದ ಈ ಘೋಷಣೆ ಮಾಡಿದ್ದಾರೆ. ಜತ್ತ, ಅಕ್ಕಲಕೋಟ, ಸೊಲ್ಲಾಪುರ ಕರ್ನಾಟಕ್ಕೆ ಸೇರಿದ್ದು ಅಂತ ಸಿಎಂ ಹೇಳಿದರು.
ಸಿಎಂ ಬೊಮ್ಮಾಯಿ ಮಾಸ್ಟರ್ ಸ್ಟ್ರೋಕ್‌ಗೆ ಮಹಾರಾಷ್ಟ್ರದಲ್ಲಿ ಸಂಚಲನ ಸೃಷ್ಟಿಯಾಗಿದ್ದು, 6 ದಶಕಗಳಿಂದ ನೀರಿನ ಸಮಸ್ಯೆಯಿಂದ ಕಂಗೆಟ್ಟಿರುವ ಜತ್ತ ತಾಲೂಕಿನ 42 ಗ್ರಾಮಗಳ ಜನರು ಈ ನಿರ್ಧಾರ ಮಾಡಿದ್ದಾರೆ. ನಿನ್ನೆ ತಡರಾತ್ರಿವರೆಗೂ ಜತ್ತ ತಾಲೂಕು ನೀರಾವರಿ ಸಂಘರ್ಷ ಸಮಿತಿ ಸಭೆ ನಡೆಸಿದ್ದು, 42 ಹಳ್ಳಿಗಳ ಪ್ರಮುಖರು ಸಭೆಯಲ್ಲಿ ಭಾಗಿಯಾಗಿದ್ರು. ಮಹಾರಾಷ್ಟ್ರ ಸರ್ಕಾರಕ್ಕೆ 8 ದಿನಗಳ ಗಡುವು ನೀಡಿದ ಹೋರಾಟಗಾರರು, 8 ದಿನಗಳೊಳಗೆ ಮಹಾರಾಷ್ಟ್ರ ಸಿಎಂ, ಡಿಸಿಎಂ, ಜಲಸಂಪನ್ಮೂಲ ಸಚಿವರು ಬರಬೇಕು ಎಂದು ಒತ್ತಾಯಸಿದ್ದಾರೆ.