Monday, December 23, 2024

ಡಾ.ಕೆ.ಸುಧಾಕರ್ ರಾಜೀನಾಮೆ ಕೊಡಬೇಕು : ವಿ.ಎಸ್. ಉಗ್ರಪ್ಪ

ಚಿಕ್ಕಬಳ್ಳಾಪುರ : ನರ್ಸಿಂಗ್ ಕಾಲೇಜುಗಳ ಮಾಸ್ ಕಾಪಿ ಪ್ರಕರಣ ಕುರಿತು ಸ್ಫೋಟಕ ವರದಿ ಬಿತ್ತರಿಸಿದ ಪವರ್​ ಟಿವಿಗೆ ಕಾಂಗ್ರೆಸ್ ನಾಯಕ ವಿ.ಎಸ್. ಉಗ್ರಪ್ಪ ಅಭಿನಂದಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೈತಿಕ ಹೊಣೆ ಹೊತ್ತು ಸಕಲ ಕಲಾ ವಲ್ಲಭ ಡಾ.ಕೆ.ಸುಧಾಕರ್ ರಾಜೀನಾಮೆ ಕೊಡಬೇಕು. ಮಾಸ್ ಕಾಪಿ ಪ್ರಕರಣದಲ್ಲಿ ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆದಿರುವ ಸಾಧ್ಯತೆ ಇದೆ. ಯಾವ ಮುಖ ಹೊತ್ತು ಮಂತ್ರಿಯಾಗಿ ಮುಂದುವರೆಯುತ್ತೀರಿ ಸುಧಾಕರ್. ಅಧಿಕಾರದಲ್ಲಿದ್ದರೆ ಸಾಕ್ಷ್ಯಗಳ ನಾಶ ಮಾಡುವ ಸಾಧ್ಯತೆ ಇರೋದ್ರಿಂದ ಕೂಡಲೇ ರಾಜೀನಾಮೆ ಕೊಡಬೇಕು. ಕಾನೂನುಬದ್ಧವಾಗಿ ಸುಧಾಕರ್ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು, RSS ನವರಿಗೆ, BJP, ಪ್ರಧಾನಿ, ಸಿಎಂಗೆ ಮೌಲ್ಯಗಳು, ಬದ್ದತೆಗಳಿದ್ದರೆ ರಾಜೀನಾಮೆ ತಗೋಬೇಕು. ಪ್ರಕರಣ ಗಂಭೀರ ಸ್ವರೂಪವಾಗಿದ್ದು, ನ್ಯಾಯಾಂಗ ತನಿಖೆಗೆ ಒತ್ತಾಯ ಮಾಡುತ್ತೇನೆ ಎಂದು ಆಗ್ರಹಿಸಿದ್ದಾರೆ.

RELATED ARTICLES

Related Articles

TRENDING ARTICLES