Monday, December 23, 2024

3 ಕೋಟಿ ಅಫರ್​ ಸೀಕ್ರೆಟ್​

ಮೈಸೂರ್​ : ಪೋಕ್ಸೋ ಪ್ರಕರಣದಡಿಯಲ್ಲಿ ಜೈಲು ಪಾಲಾಗಿರುವ ಶಿವಮೂರ್ತಿಯ ರಕ್ಷಣೆಗೆ ತೆರೆಮರೆಯಲ್ಲಿ ಕಸರತ್ತು ನಡೆಯುತ್ತಿರುವ ಮಾಹಿತಿ ಬಯಲಾಗಿದೆ.

ರಾಜಕೀಯ ನಾಯಕನೋರ್ವ ನಮಗೆ 3 ಕೋಟಿ ಆಮಿಷ ಒಡ್ಡಿದ್ರು ಎಂದು ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕ ಪರಶು ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ನಾವು ಆಮಿಷಕ್ಕೆ ಬಗ್ಗಲ್ಲ ಎಂಬುವುದು ಅವರಿಗೂ ಗೊತ್ತಾಗಿದೆ.

ಆಮಿಷ ಒಡ್ಡಲು ಬಂದವರಿಗೆ ನಿಮ್ಮ ಮಕ್ಕಳಿಗೆ ಹೀಗೆ ಆಗಿದ್ರೆ ನೀವೇನು ಮಾಡುತ್ತಿದ್ದೀರಿ ಎಂಬ ಪ್ರಶ್ನೆಯನ್ನು ಕೇಳುತ್ತಿದ್ದೇನೆ. ಆದ್ರೆ ನಾಚಿಕೆ ಬಿಟ್ಟು ಅವರು ರಾಜಕೀಯ ನಾಯಕತ್ವ ನಿರ್ವಹಣೆ ಮಾಡುತ್ತಿರೋದು ನಾಚಿಕೆಗೇಡಿನ ಕೆಲಸ ಎಂದು ಛೀಮಾರಿ ಹಾಕಿದ್ದೇನೆ ಎಂದು ಹೇಳಿದರು. 15 ದಿನಗಳಲ್ಲಿ ಓರ್ವ ಮಹಿಳೆ ಮೂಲಕ ಆಫರ್ ನೀಡಲಾಗುತ್ತಿದೆ ಎಂದು ಒಡನಾಡಿ ಸಂಸ್ಥೆ ಮುಖ್ಯಸ್ಥ ಪರಶು ಆರೋಪ ಮಾಡಿದ್ದಾರೆ. ಆದ್ರೆ ಪರಶು ಆಮಿಷ ನೀಡಿದವರು ಯಾರು ಎಂಬುದನ್ನು ಬಿಟ್ಟುಕೊಟ್ಟಿಲ್ಲ.

RELATED ARTICLES

Related Articles

TRENDING ARTICLES