Sunday, December 22, 2024

ಮಲಯಾಳಿಗಳಿಗೂ ಗೊತ್ತಾಯ್ತು ಶೆಟ್ರ ಗತ್ತು & ಗಮ್ಮತ್ತು

ದೈವದ ವಿರುದ್ಧ ಕೋರ್ಟ್​ಗೆ ಹೋದ್ರೆ ಏನಾಗುತ್ತೆ ಅನ್ನೋದನ್ನ ಕಾಂತಾರ ಚಿತ್ರದಲ್ಲಿ ದೊಡ್ಡ ಪರದೆ ಮೇಲೆ ನೋಡಿದ್ವಿ. ಇದೀಗ ಅದೇ ಚಿತ್ರದ ಹಾಡೊಂದರ ಟ್ಯೂನ್ ವಿಚಾರ ಪ್ರಕರಣ ಕೋರ್ಟ್​ನಲ್ಲಿತ್ತು. ಮಲಯಾಳಂ ಮಂದಿಗೆ ಕೋರ್ಟ್​ನಲ್ಲಿ ಹಿನ್ನಡೆಯಾಗಿದ್ದು, ಕಾಂತಾರ ಟೀಂಗೆ ಫೇವರ್ ಆಗಿ ತೀರ್ಪು ಬಂದಿದೆ. ಅಷ್ಟೇ ಅಲ್ಲ, ಓಟಿಟಿಗೆ ಬಂದ್ರೂ ಟಾಕ್ ಆಫ್ ದಿ ಟೌನ್ ಆಗಿರೋ ಕಾಂತಾರ ನ್ಯೂ ಅಪ್ಡೇಟ್ಸ್ ನೀವೇ ಓದಿ.

  • ‘ವರಾಹ ರೂಪಂ’ ಬಳಕೆಗೆ ಕೇರಳ ಕೋರ್ಟ್​ ಅನುಮತಿ

ಜಗಮೆಚ್ಚಿದ ಕಾಂತಾರ ಚಿತ್ರ ಯಶಸ್ವೀ 50 ದಿನ ಪೂರೈಸಿದೆ. 400 ಕೋಟಿ ಭಾರೀ ಬ್ಯುಸಿನೆಸ್ ಮಾಡಿದ ಬಳಿಕವೂ ಓಟಿಟಿಯಲ್ಲಿ ಸಹ ಧೂಳೆಬ್ಬಿಸ್ತಿದೆ. ಅಮೆಜಾನ್ ಪ್ರೈಮ್​ನಲ್ಲಿ ಕೂಡ ಸಾಕಷ್ಟು ಮಂದಿ ಸಿನಿಮಾ ನೋಡೋ ಮೂಲಕ ವೀವ್ಸ್ ಸಂಖ್ಯೆ ರೇಸ್ ಕಾರ್​ನ ಮೀಟರ್​ನಂತೆ ಓಡ್ತಿದೆ. ಇದೀಗ ಕೃತಿಚೌರ್ಯ ಕೇಸ್ ಎದುರಿಸುತ್ತಿದ್ದ ವರಾಹ ರೂಪಂ ಹಾಡಿನ ವಿವಾದ ಸುಖಾಂತ್ಯವಾಗಿದೆ.

ಯೆಸ್.. ಹೊಂಬಾಳೆ ಫಿಲಂಸ್​ಗೆ ಈ ವಿಚಾರದಲ್ಲಿ ಗೆಲುವು ಸಿಕ್ಕಿದ್ದು, ಥೈಕ್ಕುಡಂ ಬ್ರಿಡ್ಜ್ ಟೀಂನ ಅರ್ಜಿಯನ್ನು ಕೇರಳದ ಕೋಝಿಕ್ಕೋಡ್ ಜಿಲ್ಲಾ ನ್ಯಾಯಾಲಯ ವಜಾಗೊಳಿಸಿದೆ. ಅಲ್ಲದೆ ವರಾಹ ರೂಪಂ ಹಾಡು ಬಳಕೆಗೆ ಚಿತ್ರತಂಡಕ್ಕೆ ಅನುಮತಿ ಕೂಡ ನೀಡಿದೆ. ಹಾಡಿಗೆ ನೀಡಿದ್ದ ತಡೆಯಾಜ್ಞೆ ತೆರವು ಆಗಿದೆ ಆದ್ರೂ, ಚಿತ್ರತಂಡ ಇನ್ನೂ ಆ ಹಾಡನ್ನ ಬಳಸುವಂತಿಲ್ಲ. ಕಾರಣ ಪಾಲಕ್ಕಾಡ್ ನ್ಯಾಯಾಲಯದಲ್ಲಿನ ಅರ್ಜಿ ಇನ್ನೂ ವಿಚಾರಣೆ ಹಂತದಲ್ಲಿದೆ.

  • ತುಳು ಭಾಷೆಯಲ್ಲೂ ಕಾಂತಾರದ ಸೊಬಗು & ಸೊಗಡು
  • ದೈವನರ್ತಕ ನಾಗ್ ಹಾಡಿದ್ದ ರೆಬೆಲ್ ಸಾಂಗ್ ರಿಲೀಸ್..!

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರೋ ಕಾಂತಾರ ಹತ್ತು ಹಲವು ವಿಶೇಷತೆಗಳಿಂದ ವಿಶ್ವದ ಗಮನ ಸೆಳೆದಿದೆ. ಡಿವೈನ್ ಬ್ಲಾಕ್ ಬಸ್ಟರ್​ ಆಗಿ ಕಾಡ್ಗಿಚ್ಚಿನಂತೆ ಎಲ್ಲೆಡೆ ಹಬ್ಬಿದೆ. ಕನ್ನಡ ರಿಲೀಸ್ ಬಳಿಕ ಪಕ್ಕದ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂಗೂ ಡಬ್ ಆಗಿ ರಿಲೀಸ್ ಆದ ಕಾಂತಾರ, ಇದೀಗ ಲೇಟ್ ಆದ್ರೂ ಲೇಟೆಸ್ಟ್ ಆಗಿ ತುಳು ಭಾಷೆಗೂ ಲಗ್ಗೆ ಇಟ್ಟಿದೆ.

ಕರಾವಳಿ ಮಣ್ಣಿನ ಸೊಗಡು, ಸೊಬಗಿನ ಕಥೆ ಇದಾದ್ದರಿಂದ ತುಳು ಭಾಷೆಗೆ ಡಬ್ ಆಗಿರೋದು ಕೋಸ್ಟಲ್​ವುಡ್​ ಮಂದಿಗೆ ಎಲ್ಲಿಲ್ಲದ ಖುಷಿ ಕೊಟ್ಟಿದೆ. ಪಂಚಭಾಷಾ ಚಿತ್ರವಾಗಿದ್ದ ಕಾಂತಾರ ಇದೀಗ ಆರು ಭಾಷೆಯ ಸಿನಿಮಾ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮತ್ತೊಂದು ವಿಶೇಷ ಅಂದ್ರೆ ಶಿವ ಅಂಡ್ ಗ್ಯಾಂಗ್​ನ ರೆಬೆಲ್ ಸಾಂಗ್ ರಿಲೀಸ್ ಆಗಿದೆ. ಸಿನಿಮಾ ಅರ್ಧ ಶತದಿನೋತ್ಸವ ಕಂಡ ಹಿನ್ನೆಲೆ ಈ ಹಾಡನ್ನ ಚಿತ್ರತಂಡ ಯೂಟ್ಯೂಬ್​ಗೆ ಹರಿಬಿಟ್ಟಿದೆ. ದೈವನರ್ತಕ ನಾಗರಾಜ್ ಪಾಣಾರ್ ಹಾಡಿರೋ ಈ ಹಾಡು, ಫಾರೆಸ್ಟ್ ಡಿಪಾರ್ಟ್​ಮೆಂಟ್​ ಮತ್ತು ಶಿವ ಗ್ಯಾಂಗ್​ ನಡುವಿನ ಟಗ್ ಆಫ್ ವಾರ್​ನಂತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES