ಕಲಬುರಗಿ : ಅಂದು ನವೆಂಬರ್ 11ರ ರಾತ್ರಿ ಸುಮಾರು 10 ಗಂಟೆ. ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಕಿಣ್ಣಿ ತಾಂಡಾದ ನಿವಾಸಿ ಆನಂದ್ ಬೈಕ್ನಲ್ಲಿ ಮನೆಗೆ ತೆರಳ್ತಿದ್ದ. ಆದರೆ, ಅಲ್ಲೊಂದು ಯುವಕರ ಗುಂಪು ಆಟೋ ಚಾಲಕನೊಂದಿಗೆ ಜಗಳಕ್ಕೆ ಇಳಿದಿದ್ರು. ಇದನ್ನು ಕಂಡ ಆನಂದ್ ಆಟೋ ಚಾಲಕನ ಪರವಾಗಿ ಮಾತನಾಡಿ, ಜಗಳ ಬಿಡಿಸಲು ಮುಂದಾದ.. ಇಷ್ಟಕ್ಕೆ ರೊಚ್ಚಿಗೆದ್ದ ಪುಂಡರು, ಆನಂದ್ ಮೇಲೆ ಹಲ್ಲೆಗೆ ಮುಂದಾಗ್ತಾರೆ. ಎಚ್ಚೆತ್ತ ಆನಂದ್, ಭೀಮಸಿಂಗ್ಗೆ ಚಾಕುವಿನಿಂದ ಇರಿದ. ಸಿಟ್ಟಿಗೆದ್ದ ಪುಂಡರು ಅದೇ ಚಾಕುವನ್ನು ಕಸಿದು ಆನಂದ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಆಸ್ಪತ್ರೆಗೆ ಸಾಗಿಸುವಾಗ ಆನಂದ್ ಇಹಲೋಕ ತ್ಯಜಿಸಿದ್ದ.
ಕೊಲೆ ಕೇಸ್ ದಾಖಲಿಸಿಕೊಂಡ ಪೊಲೀಸರು ಭೀಮಸಿಂಗ್, ಸಚಿನ್, ಸೋನು ರಾಠೊಡ್, ವಾಹಬ್ ಪಟೇಲ್, ಗೌಡಪ್ಪ, ಅಮಿತ್ ಎಂಬುವವರನ್ನು ಬಂಧಿಸಿದ್ದಾರೆ. ದುರಂತ ಅಂದ್ರೆ ಇವರೆಲ್ಲರೂ ಕೊಲೆಯಾದ ಆನಂದ್ನ ಗ್ರಾಮದವರೇ ಆಗಿದ್ದಾರೆ. ಆನಂದ್ ಚಹ್ವಾಣ್ ಮತ್ತು ಭೀಮಸಿಂಗ್ ಕುಟುಂಬಗಳ ಮಧ್ಯೆ ನಾಲ್ಕೈದು ವರ್ಷಗಳಿಂದ ಜಾಗದ ವಿಚಾರಕ್ಕೆ ಗಲಾಟೆ ನಡೀತಿತ್ತು. ಆನಂದ್ ಚಹ್ವಾಣ್ ಮತ್ತು ಭೀಮಸಿಂಗ್ ಒಬ್ಬರ ಮೇಲೊಬ್ಬರು ಕತ್ತಿ ಮಸಿಯೋದಕ್ಕೆ ಮುಂದಾಗಿದ್ದರು. ಸಿಕ್ಕಿದ್ದೇ ಚಾನ್ಸ್ ಎಂದು ಕೊಂಡ ಭೀಮಸಿಂಗ್ ಆ್ಯಂಡ್ ಗ್ಯಾಂಗ್ ಆನಂದ್ನ ಕಥೆ ಮುಗಿಸಿದ್ರು.
ಎರಡು ಕುಟುಂಬಗಳ ಮಧ್ಯೆ ಏನೇ ಗಲಾಟೆಗಳಿದ್ರೂ ಮಾತಿನಲ್ಲಿ ಬಗೆಹರಿಸಬಹುದಿತ್ತು.ಇಲ್ಲಾ ಕಾನೂನು ಹೋರಾಟ ಮಾಡಬಹುದಿತ್ತು. ಆದರೆ, ದ್ವೇಷದಿಂದ ಕೊಲೆ ನಡೆದಿದ್ದು, ಆನಂದ್ ಪತ್ನಿ ಮತ್ತು ಇಬ್ಬರು ಮಕ್ಕಳು ಮಾತ್ರ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.
ಅನಿಲ್‌ಸ್ವಾಮಿ, ಪವರ್ ಟಿವಿ, ಕಲಬುರಗಿ