ಬೆಳಗಾವಿ : ಇತ್ತೀಚೆಗೆ ಯುವ ಜನತೆಯಲ್ಲಿ ಸೆಲ್ಫಿ ಗೀಳು ಅಧಿಕಗೊಂಡಿದೆ. ಆದರೆ ಅದು ಅವರ ಜೀವಕ್ಕೆ ಕುತ್ತು ತರ್ತಿದೆ. ಬೆಳಗಾವಿಯಿಂದ ಕಿತವಾಡ ಫಾಲ್ಸ್‌ಗೆ ಟ್ರಿಪ್‌ಗೆ ತೆರಳಿದ್ದ 40 ಯುವತಿಯರ ಪೈಕಿ ಸೆಲ್ಫಿ ಹುಚ್ಚಾಟಕ್ಕೆ ನಾಲ್ವರು ಯುವತಿಯರು ಬಲಿಯಾಗಿದ್ದಾರೆ. ಸೆಲ್ಪಿ ತೆಗೆದುಕೊಳ್ಳುವಾಗ ಜಾರಿ ಬಿದ್ದು, ನದಿ ಪಾಲಾಗಿದ್ದಾರೆ. ಬೆಳಗಾವಿಯ ಉಜ್ವಲ್ ನಗರ ಆಸೀಯಾ ಮುಜಾವರ್(17), ಅನಗೋಳದ ಕುದ್‌ಶೀಯಾ ಪಟೇಲ್ (20), ಝಟ್‌ಪಟ್ ಕಾಲೋನಿಯ ರುಕ್ಕಶಾರ್ ಭಿಸ್ತಿ(20), ತಸ್ಮಿಯಾ(20) ಮೃತ ಯುವತಿಯರು.
ಬಿಮ್ಸ್ ಆಸ್ಪತ್ರೆಗೆ ಶವಗಳನ್ನು ರವಾನಿಸಿದ್ದು, ಸುದ್ದಿ ತಿಳಿಯುತ್ತಿದ್ದಂತೆ ದಾವಿಸಿದ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.. ಮಾಜಿ ಶಾಸಕ ಪೀರೋಜ್ ಸೇಠ್ ನೊಂದ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ರು.ಹಲವು ಮುಸ್ಲಿಂ ಧರ್ಮಗುರುಗಳು ಕೂಡ ನೊಂದವರನ್ನು ಸಂತೈಸಿದರು.
ಸೆಲ್ಫಿ ಗೀಳು ನಾಲ್ವರು ವಿದ್ಯಾರ್ಥಿಗಳ ದುರಂತ ಸಾವಿಗೆ ಕಾರಣವಾಗಿದ್ದು, ವಿಪರ್ಯಾಸವೇ ಸರಿ. ಇನ್ನಾದ್ರೂ ಹದಿ ಹರೆಯದ ಯುವಕ ಯುವತಿಯರು ಅಪಾಯದ ಜಾಗದಲ್ಲಿ ಸೆಲ್ಫಿ ಹುಚ್ಚಾಟ ಬಿಡಲಿ ಎನ್ನುವುದು ನಮ್ಮ ಆಶಯ.
ಅಣ್ಣಪ್ಪ ಬಾರ್ಕಿ, ಪವರ್ ಟಿವಿ, ಬೆಳಗಾವಿ