Thursday, May 16, 2024

ರಿಲೀಸ್​ಗೂ ಮುನ್ನ ಪ್ರೀಮಿಯರ್​ನಿಂದ ಗಣಿ ಚಮಕ್..!

ಗಾಳಿಪಟ-2 ಚಿತ್ರದಲ್ಲಿ ತನ್ನ ಪ್ರೇಯಸಿ ಹಾಗೂ ಇಬ್ಬರು ಗೆಳೆಯರೊಟ್ಟಿಗೆ ಬಂದಿದ್ದ ಗಣಿ, ಈ ಬಾರಿ ಮೂರು ಮಂದಿ ಹೀರೋಯಿನ್ಸ್ ಜೊತೆ ಭರ್ಜರಿ ತ್ರಿಬಲ್ ರೈಡಿಂಗ್ ಹೊರಟಿದ್ದಾರೆ. ರಕ್ಷಿತಾ, ರಮ್ಯಾ, ರಾಧಿಕಾ ಪ್ರೇಮಲೋಕದಲ್ಲಿ ಗೋಲ್ಡನ್ ಸ್ಟಾರ್ ಜರ್ನಿ ಹೇಗಿತ್ತು..? ಪ್ರೇಕ್ಷಕ ಕೊಟ್ಟ ಮಾರ್ಕ್ಸ್ ಎಷ್ಟು ಅನ್ನೋದ್ರ ಜೊತೆಗೆ ಕಥೆ ಹೇಗಿದೆ..? ಮೇಕಿಂಗ್ ಮಜಾ ಕೊಡ್ತಾ ಅನ್ನೋದ್ರ ಡಿಟೈಲ್ಡ್ ರಿವ್ಯೂ ರಿಪೋರ್ಟ್​ ನೀವೇ ಓದಿ.

  • ತಾರೆಯರು ಮೆಚ್ಚಿದ ತ್ರಿಬಲ್ ರೈಡಿಂಗ್ ಎಂಟರ್​ಟೈನರ್

ಗಾಳಿಪಟ-2 ಬಳಿಕ ಗಣೇಶ್​ ನಟನೆಯ ಸಿನಿಮಾ ಇದು. ಹಾಗಾಗಿ ಸಹಜವಾಗಿಯೇ ನೋಡುಗರಲ್ಲಿ ಬಹುದೊಡ್ಡ ನಿರೀಕ್ಷೆ ಇತ್ತು. ಸಿನಿಮಾ ಅಫಿಶಿಯಲಿ ಥಿಯೇಟರ್​ಗೆ ಬರೋಕೂ ಮುನ್ನ ಸ್ಪೆಷಲ್ ಪ್ರೀಮಿಯರ್ ಶೋನಿಂದ ಗಮನ ಸೆಳೆಯಿತು. ಪಿವಿಆರ್ ಒರಾಯನ್​ನಲ್ಲಿ ನಡೆದ ಪ್ರೀಮಿಯರ್​ನಲ್ಲಿ ಗೋಲ್ಡನ್ ಸ್ಟಾರ್ ತ್ರಿಬಲ್ ರೈಡಿಂಗ್​ಗೆ ಚಿತ್ರರಂಗದ ತಾರೆಯರು ಬಹುಪರಾಕ್ ಹೇಳಿದ್ರು.

ಬೈಟ್: ಚೇತನ್, ನಟ

ಚಿತ್ರ: ತ್ರಿಬಲ್ ರೈಡಿಂಗ್

ನಿರ್ದೇಶನ: ಮಹೇಶ್ ಗೌಡ

ನಿರ್ಮಾಣ: ರಾಮ್ ಗೋಪಾಲ್

ಸಂಗೀತ: ಸಾಯಿ ಕಾರ್ತಿಕ್

ಸಿನಿಮಾಟೋಗ್ರಫಿ: ಜೈ ಆನಂದ್

ತಾರಾಗಣ: ಗಣೇಶ್, ಅದಿತಿ ಪ್ರಭುದೇವ, ರಚನಾ ಇಂದರ್, ಮೇಘ ಶೆಟ್ಟಿ, ರವಿಶಂಕರ್, ಶರತ್ ಲೋಹಿತಾಶ್ವ, ಸಾಧು ಕೋಕಿಲಾ, ಅಚ್ಯುತ್ ಕುಮಾರ್, ರಂಗಾಯಣ ರಘು, ಶೋಭರಾಜ್, ರವಿಶಂಕರ್ ಗೌಡ ಮುಂತಾದವರು.

ತ್ರಿಬಲ್ ರೈಡಿಂಗ್ ಕಥಾಹಂದರ

ನಾಯಕಿ ರಕ್ಷಿತಾ ಕೆಲಸ ಮಾಡೋ ಆಸ್ಪತ್ರೆಗೆ ವೈದ್ಯನಾಗಿ ಮಹೇಶ್ ಹೆಸ್ರಲ್ಲಿ ಬರೋ ನಾಯಕ ರಾಮ್. ಆಕೆಯನ್ನ ಪ್ರೀತಿಯ ಬಲೆಯಲ್ಲಿ ಬೀಳಿಸುತ್ತಾನೆ. ಆದ್ರೆ ಆಕೆಯನ್ನ ಲವ್ ಟ್ರ್ಯಾಕ್​ಗೆ ತರೋಕೆ ಸುಪಾರಿ ಕೊಡೋದೇ ಮತ್ತೊಬ್ಬ ನಾಯಕಿ ರಮ್ಯಾ. ನೀನು ರಕ್ಷಿತಾನ ಮನೆಯಿಂದ ಹೊರ ತಂದ್ರೆ ನಾನು ನಿನ್ನ ಲವ್ ಮಾಡ್ತೀನಿ ಅನ್ನೋ ರಮ್ಯಾಗಾಗಿ ರಾಮ್ ಸಾಕಷ್ಟು ರಿಸ್ಕ್ ಮಾಡ್ತಾನೆ. ಕೊನೆಗೆ ರಾಹುಲ್ ಜೊತೆ ರಮ್ಯಾ, ಪ್ರೇಮ್ ಜೊತೆ ರಕ್ಷಿತಾ ಸೆಟಲ್ ಆಗ್ತಾರೆ. ಆದ್ರೆ ರಮ್ಯಾ, ರಕ್ಷಿತಾರ ಪೋಷಕರು ರಾಮ್​ ಹಿಂದೆ ಬೀಳ್ತಾರೆ. ಅವ್ರಿಂದ ತಲೆ ಮರೆಸಿಕೊಳ್ಳೋಕೆ ವಕೀಲವೃತ್ತಿಯ ತಂದೆಯ ಸಲಹೆಯಂತೆ ಚಿಕ್ಕಮಗಳೂರಿಗೆ ಜೂಟ್ ಹೇಳ್ತಾನೆ ರಾಮ್. ಅಲ್ಲಿ ಕೂಡ ರಾಧಿಕಾ ಅನ್ನೋ ಹುಡ್ಗಿಯ ಪ್ರೇಮದಲ್ಲಿ ಸಿಲುಕಿಕೊಳ್ತಾನೆ. ಕೊನೆಗೆ ರಮ್ಯಾ, ರಕ್ಷಿತಾ ಪೇರೆಂಟ್ಸ್ ರಾಮ್​ನ ಏನು ಮಾಡ್ತಾರೆ..? ರಾಧಿಕಾ ಜೊತೆ ರಾಮ್​ಗೆ ಮದ್ವೆ ಆಗುತ್ತಾ ಇಲ್ವಾ ಅನ್ನೋದೇ ಚಿತ್ರದ ಒನ್​​ಲೈನ್ ಸ್ಟೋರಿ.

  • ತ್ರಿಬಲ್ ರೈಡಿಂಗ್ ಆರ್ಟಿಸ್ಟ್ ಪರ್ಫಾಮೆನ್ಸ್
  • ಕಾಮಿಡಿ & ಎಮೋಷನ್ಸ್​ಗೆ ಕಿಂಗ್ ಈ ಗೋಲ್ಡನ್ ಸ್ಟಾರ್
  • ಮೂವರು ಬ್ಯೂಟಿಗಳ ಬೊಂಬಾಟ್ ಆಟ.. ಪ್ರೀತಿ ಪಾಠ

ಎಂದಿನಂತೆ ಈ ಚಿತ್ರದಲ್ಲೂ ಗೋಲ್ಡನ್ ಸ್ಟಾರ್ ಗಣೇಶ್ ಶಿಳ್ಳೆ ಚಪ್ಪಾಳೆ ತರಿಸೋ ಅಂತಹ ಮನೋಜ್ಞ ಅಭಿನಯ ನೀಡಿದ್ದಾರೆ. ಕಾಮಿಡಿ ಟೈಂ ಜೊತೆ ಇವ್ರು ಎಮೋಷನ್ಸ್​ನ ಎಕ್ಸ್​ಪ್ರೆಸ್ ಮಾಡೋ ಪರಿ ನಿಜಕ್ಕೂ ಅತ್ಯದ್ಭುತ. ಕಿಂಗ್ ಆಫ್ ಎಕ್ಸ್​ಪ್ರೆಷನ್ಸ್ ಅನ್ನೋ ಬಿರುದು ಪಡೆದಿರೋ ಗಣಿಯೇ ಈ ಚಿತ್ರದ ಸೆಂಟರ್ ಆಫ್ ಅಟ್ರ್ಯಾಕ್ಷನ್. ಡಾಕ್ಟರ್ ಮಹೇಶ್ ಹಾಗೂ ರಾಮ್ ಅನ್ನೋ ಎರಡೂ ಶೇಡ್​ಗಳಲ್ಲಿ ಬಿಂದಾಸ್ ಪರ್ಫಾಮೆನ್ಸ್ ನೀಡಿದ್ದಾರೆ.

ರಕ್ಷಿತಾ ಆಗಿ ಮೇಘ ಶೆಟ್ಟಿ, ರಮ್ಯಾ ಪಾತ್ರದಲ್ಲಿ ಅದಿತಿ ಪ್ರಭುದೇವ ಹಾಗೂ ರಾಧಿಕಾ ರೋಲ್​ನಲ್ಲಿ ರಚನಾ ಇಂದರ್ ಸಿನಿಮಾಗೆ ಗ್ಲಾಮರ್ ಟಚ್ ನೀಡಿದ್ದಾರೆ. ಇವ್ರ ಪಾತ್ರಗಳು ಗಣಿಯ ಲವಲವಿಕೆಗೆ ಪೂರಕವಾಗಿದ್ದು, ಎಲ್ಲರೂ ನಿರೀಕ್ಷೆಗೆ ಮೀರಿ ಪರ್ಫಾರ್ಮ್​ ಮಾಡಿದ್ದಾರೆ. ಇನ್ನು ನಾಯಕನಟನ ತಂದೆ ಪಾತ್ರದಲ್ಲಿ ಅಚ್ಯುತ್, ನಾಯಕಿಯರ ತಂದೆಯ ಪಾತ್ರಗಳಿಗೆ ರಂಗಾಯಣ ರಘು, ಶರತ್ ಲೋಹಿತಾಶ್ವ ಜೀವ ತುಂಬಿದ್ದಾರೆ.

ಸಾಧು ಕೋಕಿಲಾ ಕಾಮಿಡಿ ಟ್ರ್ಯಾಕ್ ಜೊತೆ ಆರ್ಮುಗಂ ರವಿಶಂಕರ್ ಟ್ರ್ಯಾಕ್ ಕೂಡ ಮಜಭೂತಾಗಿದೆ. ರವಿಶಂಕರ್ ಗೌಡನ ರೋಲ್ ನೋಡುಗರಲ್ಲಿ ನಗು ತರಿಸಲಿದೆ.

ತ್ರಿಬಲ್ ರೈಡಿಂಗ್ ಪ್ಲಸ್ ಪಾಯಿಂಟ್ಸ್

  • ಗಣಿ ಗೋಲ್ಡನ್ ಪರ್ಫಾಮೆನ್ಸ್
  • ಅದಿತಿ, ರಚನಾ, ಮೇಘ ಗ್ಲಾಮರ್
  • ಮ್ಯೂಸಿಕ್, ಡ್ಯಾನ್ಸ್ & ಫೈಟ್ಸ್
  • ಕಣ್ಣು ಕೋರೈಸೋ ಲೊಕೇಷನ್ಸ್

ತ್ರಿಬಲ್ ರೈಡಿಂಗ್ ಮೈನಸ್ ಪಾಯಿಂಟ್ಸ್

  • ಸವಕಲು ಕಥೆ
  • ಮಜಾ ಕೊಡದ ಟ್ವಿಸ್ಟ್ ಅಂಡ್ ಟರ್ನ್​
  • ನಗು ತರಿಸದ ಸಾಧು ಕೋಕಿಲಾ ಕಾಮಿಡಿ
  • ಬಲಗಣ್ಣು ಕಿತ್ಕೊಂಡವ್ರ ಎಡಗಣ್ಣಿಗೆ ಮಾಸ್ಕ್ ಹಾಕಿಸಿರೋದು
  • ಕ್ವಾಲಿಟಿ ಇಲ್ಲದ ಸಿಜಿ ವರ್ಕ್​

ತ್ರಿಬಲ್ ರೈಡಿಂಗ್​ಗೆ ಪವರ್ ಟಿವಿ ರೇಟಿಂಗ್: 2.5/5

ತ್ರಿಬಲ್ ರೈಡಿಂಗ್ ಫೈನಲ್ ಸ್ಟೇಟ್​ಮೆಂಟ್

ನಿರ್ದೇಶಕರು ಮೇಕಿಂಗ್ ಮೇಲೆ ಹಾಕೋ ಎಫರ್ಟ್​ನ ಕಥೆಯ ಮೇಲೆ ಹಾಕಿದ್ದಿದ್ರೆ ಜನಮೆಚ್ಚೋ ಸಿನಿಮಾ ಮಾಡಬಹುದಿತ್ತು. ಗಣೇಶ್ ಅಂತಹ ದೊಡ್ಡ ಸ್ಟಾರ್, ಮೂವರು ನಟೀಮಣಿಯರು, ಸಾಲು ಸಾಲು ಹಿರಿಯ ಕಲಾವಿದರನ್ನ ಸಮರ್ಪಕವಾಗಿ ಬಳಸಿಕೊಳ್ಳೋದ್ರಲ್ಲಿ ವಿಫಲರಾಗಿದ್ದಾರೆ ಡೈರೆಕ್ಟರ್. ಒನ್ ಮ್ಯಾನ್ ಶೋನಂತೆ ಇಡೀ ಚಿತ್ರವನ್ನು ತನ್ನ ಮೂಲಕ ನೋಡುಗರನ್ನ ಹಿಡಿದು ಕೂರಿಸಿದ್ದಾರೆ ಗಣೇಶ್. ಡ್ಯಾನ್ಸ್, ಫೈಟ್ಸ್ ಹಾಗೂ ಸಾಂಗ್ಸ್ ಮನರಂಜನಾತ್ನಕವಾಗಿವೆ. ರಾಮ್​ಗೋಪಾಲ್ ಚೊಚ್ಚಲ ನಿರ್ಮಾಣದ ಸಿನಿಮಾ ಆದ್ದರಿಂದ ಮುಂದಿನ ದಿನಗಳಲ್ಲಿ ಕಥೆಯಲ್ಲಿ ಗಟ್ಟಿತನ ಇರೋ ಅಂತಹ ಸ್ಕ್ರಿಪ್ಟ್​ನ ಆರಿಸಿಕೊಳ್ಳಲು ಇದು ಪಾಠವಾಗಲಿದೆ. ಒಟ್ಟಾರೆ ಅತೀವ ನಿರೀಕ್ಷೆಗಳಿಲ್ಲದೆ ನೋಡೋದಾದ್ರೆ ಒಮ್ಮೆ ನೋಡಬಹುದಾದ ಸಿನಿಮಾ ಆಗಲಿದೆ ಈ ತ್ರಿಬಲ್ ರೈಡಿಂಗ್.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES