ಮಂಗಳೂರು : ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಬಂಧಿತ ಶಾರೀಕ್ ಹಿಂದೂ ದೇಗುಲಗಳನ್ನೇ ಸ್ಫೋಟಿಸಲು ಸಂಚು ರೂಪಿಸಿದ್ದ ಎಂಬ ಭಯಾನಕ ಮಾಹಿತಿ ಬಹಿರಂಗವಾಗಿದೆ. ಹೌದು.. ಹಿಂದೂ ಯುವಕನಂತೆ ಸೊಂಟಕ್ಕೆ ಕೇಸರಿ ಶಾಲು ಕಟ್ಟಿಕೊಳ್ಳುತ್ತಿದ್ದ ಶಾರೀಕ್, ಹಿಂದೂ ದೇವಸ್ಥಾನಗಳಲ್ಲಿ ವಿಧ್ವಂಸಕ ಕೃತ್ಯಕ್ಕೆ ಪ್ಲ್ಯಾನ್ ಮಾಡ್ಕೊಂಡಿದ್ದ. ದೇಗುಲಗಳಿಗೆ ಹೋದ್ರೆ ಪಕ್ಕಾ ಹಿಂದುವಿನಂತೆ ಪೂಜೆ-ಪುನಸ್ಕಾರ ಮಾಡ್ತಿದ್ದ. ಭಕ್ತನಂತೆ ಪೋಸ್ ಕೊಟ್ರೂ.. ಮಾಡ್ತಿದ್ದು ಮಾತ್ರ ಬ್ಲಾಸ್ಟ್ಗೆ ಪ್ಲ್ಯಾನ್..!
ಧರ್ಮದಂಗಲ್‌ಗೆ ಪ್ರತೀಕಾರವಾಗಿ ಶಾರೀಕ್ ಕರಾವಳಿ ದೇಗುಲಗಳನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಎನ್ನಲಾಗಿದೆ. ಕದ್ರಿ ಮಂಜುನಾಥಸ್ವಾಮಿ ದೇಗುಲ ಟಾರ್ಗೆಟ್ ಮಾಡಿದ್ದ ಶಾರೀಕ್, ಲಕ್ಷ ದೀಪೋತ್ಸವದ ವೇಳೆಯಲ್ಲಿ ಬಾಂಬ್ ಸ್ಫೋಟಿಸುವ ಸಂಚು ರೂಪಿಸಿದ್ನಂತೆ. ಮಂಗಳೂರಿನ ದೇಗುಲಗಳ ಸ್ಪೋಟಕ್ಕೆ ಸ್ಕೆಚ್ ಹಾಕಿದ್ದು, ಶಾರೀಕ್ ಹಾಕಿಕೊಂಡಿದ್ದ ಶಿವನ ಡಿಪಿಯಿಂದ ಸಂಚಿನ ಗುಟ್ಟು ಬಟಾಬಯಲಾಗಿದೆ.
ಅಲ್ಲದೆ, ಈತ ಮಂಗಳೂರಿನ ಗಾಂಧಿನಗರದಲ್ಲಿರುವ RSS ಕಚೇರಿ ಸಂಘನಿಕೇತನವನ್ನು ಸ್ಟೋಟಿಸಲು ಸಂಚು ರೂಪಿಸಿದ್ದನಂತೆ. ಇದಕ್ಕೆ ಪುಷ್ಠಿ ಎಂಬಂತೆ ಆತ ಮೈಸೂರಿನಿಂದ ಮಂಗಳೂರು ತಲುಪುವಷ್ಟರಲ್ಲೇ ಎರಡೆರಡು ಬಾರಿ ಮಣ್ಣಗುಡ್ಡ ಗಾಂಧಿನಗರ ಹಾಗೂ ಸಂಘನಿಕೇತನದ ವಿವರಗಳನ್ನು ಸರ್ಚ್ ಮಾಡಿ ನೋಡಿದ್ದಾನಂತೆ.
ಯಾಕೆ ಈ ಉಗ್ರಗಾಮಿ ಸಂಘಟನೆಗಳಿಗೆ ಕರ್ನಾಟಕದ ಮೇಲೆ ದ್ವೇಷ..? ಮಂಗಳೂರಿನ ಹಿಂದೂಗಳ ಮೇಲೆ ದ್ವೇಷವಾ..? ಈ ಪ್ರಶ್ನೆಗೂ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್, ಡಾರ್ಕ್ ವೆಬ್ ಪೋಸ್ಟ್ನಲ್ಲೇ ಉತ್ತರ ಕೊಟ್ಟಿದೆ. ರಾಜ್ಯದಲ್ಲಿ ಗುಂಪು ಹತ್ಯೆ, ದಬ್ಬಾಳಿಕೆಯ ಕಾನೂನುಗಳು ಮತ್ತು ಶಾಸನಗಳನ್ನು ರೂಪಿಸಲಾಗುತ್ತಿದೆ. ಇಸ್ಲಾಮ್ ಧರ್ಮದಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ಯುದ್ದ ಸಾರಲಾಗಿದೆ. ಆ ಯುದ್ಧಕ್ಕೆ ಪ್ರತಿಯಾಗಿ ಈ ದಾಳಿ ನಡೆಸುತ್ತಿರುವುದಾಗಿ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಹೇಳಿಕೊಂಡಿದೆ. ನಿಮ್ಮ ಸಂತೋಷವು ಅಲ್ಪಕಾಲಿಕವಾಗಿರುತ್ತದೆ ಮತ್ತು ನಿಮ್ಮ ದಬ್ಬಾಳಿಕೆಯ ಫಲವನ್ನು ನೀವು ಅನುಭವಿಸುತ್ತೀರಿ ಅಂತಾ IRC ಬೊಬ್ಬೆ ಹಾಕಿದೆ.
ಬಾಂಬ್ ಸ್ಫೋಟ ನಡೆದಿದ್ದ ನ.19ರಂದು ಬೆಳಗ್ಗಿನಿಂದ ಮಧ್ಯಾಹ್ನದ ವರೆಗೂ ಸಿಎಂ ಬೊಮ್ಮಾಯಿ ಮಣ್ಣಗುಡ್ಡ ಬಳಿಯಲ್ಲೇ ಇದ್ದರು. ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಅನಾವರಣ ನೆಪದಲ್ಲಿ 25 ಸಾವಿರಕ್ಕೂ ಹೆಚ್ಚು ಜನರನ್ನು ಸೇರಿಸಿ ಕಾರ್ಯಕ್ರಮ ನಡೆಸಲಾಗಿತ್ತು. ಅದೇ ಸಂದರ್ಭದಲ್ಲಿ ಉಗ್ರ ಶಾರೀಕ್ ಮಣ್ಣಗುಡ್ಡದ ಲೊಕೇಶನ್ ಟ್ರೇಸ್ ಮಾಡಿದ್ದಾನೆ. ಅದೇ ದಿನ ಮಣ್ಣಗುಡ್ಡ ಬಳಿಯ ಸಂಘನಿಕೇತನದಲ್ಲಿ ಕನ್ನಡ ಶಾಲೆಗಳ ಮಕ್ಕಳ ಹಬ್ಬ ಕಾರ್ಯಕ್ರಮ ಮಾಡಲಾಗಿತ್ತು. ಹತ್ತು ಸಾವಿರಕ್ಕೂ ಹೆಚ್ಚು ಮಕ್ಕಳು ಅಲ್ಲಿ ಸೇರಿದ್ದರು. ಇವರೆಡೂ ಕಾರ್ಯಕ್ರಮ ಮಣ್ಣಗುಡ್ಡ- ಗಾಂಧಿನಗರ ಆಸುಪಾಸಿನಲ್ಲಿ ನಡೆದಿದ್ದು, ಇದೇ ಜಾಗವನ್ನು ಉಗ್ರ ಶಾರೀಕ್ ಹಿಟ್ ಲಿಸ್ಟ್ ಮಾಡಿಕೊಂಡಿದ್ದನೇ ಅನ್ನುವ ಅನುಮಾನ ಎದ್ದಿದೆ.ಅಲ್ಲದೆ, ಪ್ರಮುಖ ಜನನಿಬಿಡ ಪ್ರದೇಶಗಳೇ ಇವನ ಟಾರ್ಗೆಟ್ ಆಗಿತ್ತು ಎನ್ನಲಾಗಿದೆ.
ಗಿರಿಧರ್ ಶೆಟ್ಟಿ ಪವರ್ ಟಿವಿ ಮಂಗಳೂರು