Wednesday, January 22, 2025

ಗೋವಾ ಫಿಲ್ಮ್ ಫೆಸ್ಟ್​ನಲ್ಲಿ ಕನ್ನಡದ ‘ರೇಮೊ’ ಪ್ರೀಮಿಯರ್

ಗೂಗ್ಲಿ ನಂತ್ರ ಗೂಗ್ಲಿ-2 ಬರಲೇ ಇಲ್ಲ ಅನ್ನೋ ಕೊರಗಿತ್ತು. ಅದನ್ನ ರೇಮೊ ಮೂಲಕ ನೀಗಿಸಿದ್ದಾರೆ ಸ್ಟೈಲಿಶ್ ಡೈರೆಕ್ಟರ್ ಪವನ್ ಒಡೆಯರ್. ಕ್ರೇಜಿ ಸ್ಕ್ರಿಪ್ಟ್, ಬ್ರಿಲಿಯೆಂಟ್ ಪರ್ಫಾಮೆನ್ಸ್​​ನಿಂದ ಟಾಕ್ ಕ್ರಿಯೇಟ್ ಮಾಡಿದೆ ರೇಮೊ. ಹಾಗಾದ್ರೆ ರೇಮೊ ಸ್ಟೋರಿಲೈನ್ ಏನು..? ಇಶಾನ್- ಆಶಿಕಾ ಪ್ರೇಮ್ ಕಹಾನಿ ಹೇಗಿದೆ..? ಸಿಆರ್ ಮನೋಹರ್ ಪ್ರೊಡಕ್ಷನ್ ವ್ಯಾಲ್ಯೂಸ್ ಎಂಥದ್ದು ಅನ್ನೋದ್ರ ಜೊತೆ ಸೆಲೆಬ್ರೇಷನ್ ಝಲಕ್ ಇಲ್ಲಿದೆ. ನೀವೇ ಓದಿ.

  • ಮಿಲ್ಕಿಬಾಯ್ ಪರ್ಫಾಮೆನ್ಸ್​ಗೆ ಪ್ರೇಕ್ಷಕನ ಮಾರ್ಕ್ಸ್ ಎಷ್ಟು..?

ಕನ್ನಡದ ಸಿನಿಮಾಗಳು ಇತ್ತೀಚೆಗೆ ನ್ಯಾಷನಲ್, ಇಂಟರ್​ನ್ಯಾಷನಲ್ ಲೆವೆಲ್​ನಲ್ಲಿ ಸ್ಟ್ಯಾಂಡರ್ಡ್ಸ್ ಸೆಟ್ ಮಾಡ್ತಿವೆ. ಅಂತಹ ಬೆಸ್ಟ್ ಸಿನಿಮಾಗಳ ಸಾಲಿಗೆ ಇಂದು ರಾಜ್ಯಾದ್ಯಂತ ಗ್ರ್ಯಾಂಡ್ ರಿಲೀಸ್ ಆಗಿರೋ ರೇಮೊ ಕೂಡ ಸೇರಿಕೊಳ್ತಿದೆ. ಕಾರಣ ಚಿತ್ರದ ಕಥೆ, ಪಾತ್ರಗಳು, ಅವುಗಳ ಪರ್ಫಾಮೆನ್ಸ್, ಮೇಕಿಂಗ್ ಹಾಗೂ ಮ್ಯೂಸಿಕ್.

ನ್ಯಾಷನಲ್ ಅವಾರ್ಡ್​ ಪಡೆದ ಪವನ್ ಒಡೆಯರ್ ನಿರ್ದೇಶನದ ಸಿನಿಮಾ ಇದಾಗಿದ್ದು, ಆಸ್ಕರ್ ಜ್ಯೂರಿ ಕಮಿಟಿಯಲ್ಲೂ ಅವರಿದ್ದ ಕಾರಣ, ರೇಮೊ ಸಿನಿಮಾ ಸಲೀಸಾಗಿ ಗೋವಾ ಫಿಲ್ಮ್ ಫೆಸ್ಟಿವಲ್​ಗೆ ಆಯ್ಕೆ ಆಗಿತ್ತು. ಅಲ್ಲಿ ಪ್ರೀಮಿಯರ್ ಆಗಿರೋದು ನಿಜಕ್ಕೂ ಹೆಮ್ಮೆಯ ವಿಷಯ. ಬಹುಶಃ ಕನ್ನಡದ ಯಾವ ಸಿನಿಮಾ ಕೂಡ ಹೀಗೆ ರಿಲೀಸ್​ಗೂ ಒಂದು ದಿನ ಮುನ್ನ ಗೋವಾದಲ್ಲಿ ಪ್ರೀಮಿಯರ್ ಆಗಿಲ್ಲ. ಇದೀಗ ರೇಮೊ ಹೊಸ ದಾಖಲೆ ಬರೆದಿದೆ.

ಇಷ್ಟಕ್ಕೂ ಪೂರಿ ಜಗನ್ನಾಥ್ ಇಂಟ್ರಡ್ಯೂಸ್ ಮಾಡಿದ ಸ್ಯಾಂಡಲ್​ವುಡ್ ಮಿಲ್ಕಿಬಾಯ್ ಇಶಾನ್ ಮ್ಯೂಸಿಕಲ್ ಲವ್ ಸ್ಟೋರಿ ಹೇಗಿದೆ ಅಂತೀರಾ..? ಎಳೆ ಎಳೆಯಾಗಿ ಇಂದಿನ ರಿವ್ಯೂ ರಿಪೋರ್ಟ್​ನಲ್ಲಿ ಬಿಚ್ಚಿಡ್ತೀವಿ ನೋಡ್ಕೊಂಡ್ ಬನ್ನಿ.

ಚಿತ್ರ: ರೇಮೊ

ನಿರ್ದೇಶನ: ಪವನ್ ಒಡೆಯರ್

ನಿರ್ಮಾಣ: ಸಿಆರ್ ಮನೋಹರ್

ಸಂಗೀತ: ಅರ್ಜುನ್ ಜನ್ಯ

ಸಿನಿಮಾಟೋಗ್ರಫಿ: ವೈದಿ ಎಸ್

ತಾರಾಗಣ: ಇಶಾನ್, ಆಶಿಕಾ ರಂಗನಾಥ್, ಶರತ್ ಕುಮಾರ್, ಅಚ್ಯುತ್ ಕುಮಾರ್, ರಾಜೇಶ್ ನಟರಂಗ, ಮಧುಬಾಲಾ ಮುಂತಾದವರು.

ರೇಮೊ ಸ್ಟೋರಿಲೈನ್

ರಾಕ್​ಸ್ಟಾರ್ ರೇಮೋ.. ಮಹಾಲಕ್ಷ್ಮೀ ಗ್ರೂಫ್ ಆಫ್ ಕಂಪನೀಸ್​ನ ಚೇರ್ಮನ್ ಶ್ರೀದೇಶ್​ಪಾಂಡೆ ಮಗ ರೇವಂತ್. ಇವ್ರೇ ಚಿತ್ರದ ಕಥಾನಾಯಕ. ತಾಯಿ ಸತ್ತ ಬಳಿಕ ಟ್ರೀಟ್​ಮೆಂಟ್ ಕೊಡ್ತಿದ್ದ ಡಾಕ್ಟರ್​ನೇ ಮದ್ವೆ ಆದ್ರು ಅನ್ನೋ ಕಾರಣಕ್ಕೆ ಅಪ್ಪನನ್ನ ನಾಯಿಯಂತೆ ಕಾಣೋ ನಾಯಕ. ಫಾರಿನ್ ಲೈವ್ ಮ್ಯೂಸಿಕ್ ಕನ್ಸರ್ಟ್ಸ್​ಗೆ ಕ್ಲಾಸಿಕಲ್ ಸಿಂಗರ್​ನ ಅನ್ವೇಷಣೆಯಲ್ಲಿ ಸಿಗೋ ನಾಯಕಿ ಮೋಹನಾ. ವಿದೇಶಗಳಲ್ಲಿ ಲೈವ್ ಶೋಸ್ ಮಾಡಿ ಬರೋ ಅಷ್ಟರಲ್ಲಿ ರೇವಂತ್- ಮೋಹನ ಮಧ್ಯೆ ಲವ್. ಆದ್ರೆ ರೇವಂತ್ ರಾಕ್​ಸ್ಟಾರ್ ಆಗೋ ಕಾಯಕದ ಹಿಂದಿನ ಅಸಲಿ ಸೂತ್ರದಾರ ಅವ್ರ ತಂದೆ ಶ್ರೀ ಅನ್ನೋದು ತಡವಾಗಿ ಅರ್ಥೈಸಿಕೊಳ್ಳೋ ನಾಯಕ.

ಮೊದಲಾರ್ಧ ಯೂತ್​ಫುಲ್ ಎಂಟರ್​ಟೈನಿಂಗ್ ಎಲಿಮೆಂಟ್ಸ್​​ನಿಂದ ಕಿಕ್ ಕೊಟ್ರೆ, ದ್ವತಿಯಾರ್ಧ ಫ್ಯಾಮಿಲಿ ಎಮೋಷನ್ಸ್ ಹಾಗೂ ಸೆಂಟಿಮೆಂಟ್ಸ್​ನಿಂದ ಇಂಪ್ರೆಸ್ ಮಾಡುತ್ತೆ. ತಂದೆಯ ನಿಧನದ ಬಳಿಕ ಕಂಪನಿಯ ಜವಾಬ್ದಾರಿ ಹೊರುವ ನಾಯಕ, ನಾಯಕಿಗೆ ಕೊಟ್ಟ ಪ್ರಾಮಿಸ್ ಬ್ರೇಕ್ ಮಾಡ್ತಾನೆ. ದ್ವೇಷ ಸಾಧಿಸೋಕೆ ಅಂತ ಮೋಹನಾ ಕೂಡ ಸಿಂಗಿಂಗ್ ಸೆನ್ಸೇಷನ್ ಆಗಿ ಬೆಳೆಯುತ್ತಾಳೆ. ಕೊನೆಗೆ ಇವರಿಬ್ಬರೂ ಒಂದಾಗ್ತಾರಾ ಇಲ್ವಾ ಅನ್ನೋದೇ ಚಿತ್ರದ ಹೂರಣ.

  • ರೇಮೊ ಆರ್ಟಿಸ್ಟ್ ಪರ್ಫಾಮೆನ್ಸ್
  • ರಾಕ್​ಸ್ಟಾರ್ ರೇಮೊ ರೋಲ್​ನಲ್ಲಿ ಹುಬ್ಬೇರಿಸಿದ ಇಶಾನ್..!
  • ಭವಿಷ್ಯದ ಸೂಪರ್ ಸ್ಟಾರ್ ಆಗೋ ಲಕ್ಷಣ ತೋರಿದ ಪ್ರತಿಭೆ

ತಾನು ಮಾಡಿದ್ದೇ ಸರಿ. ತಾನು ಹಾಡಿದ್ದೇ ಹಾಡು. ನಾನೊಬ್ಬ ಸಾಮಾನ್ಯ ರೇವಂತ್ ಅಲ್ಲ. ರಾಕ್​ಸ್ಟಾರ್ ರೇಮೊ ಅಂತ ಮ್ಯೂಸಿಕ್, ಸೆಕ್ಸ್, ಡ್ರಿಂಕ್ಸ್ ಹಾಗೂ ಡ್ರಗ್ಸ್​ ಗುಂಗಲ್ಲಿರೋ ನಾಯಕನಟನ ಪಾತ್ರವನ್ನು ಬಹಳ ಅದ್ಭುತವಾಗಿ ನಿಭಾಯಿಸಿದ್ದಾರೆ ಇಶಾನ್. ಎರಡನೇ ಸಿನಿಮಾ ಆದ್ರೂ, ನಟನೆಯಲ್ಲಿ ಪಕ್ವತೆ ಇದೆ. ಮೊದಲಾರ್ಧ ಜವಾಬ್ದಾರಿ ಇಲ್ಲದ ರಾಕ್​ಸ್ಟಾರ್ ರೇಮೊ ಆಗಿದ್ದ ಇಶಾನ್, ಸೆಕೆಂಡ್ ಹಾಫ್​ನಲ್ಲಿ ಜವಾಬ್ದಾರಿಯುತ ಮಗ, ಪ್ರೇಮಿಯಾಗಿ ಮಾಡಿದ ತಪ್ಪುಗಳನ್ನ ತಿದ್ದಿಕೊಳ್ಳೋ ರೇವಂತ್ ಆಗ್ತಾರೆ ನಾಯಕ. ಈ ಎರಡೂ ಶೇಡ್​ಗಳನ್ನ ಬಹಳ ಸೊಗಸಾಗಿ ನಿಭಾಯಿಸಿದ್ದು, ಭವಿಷ್ಯದ ಸೂಪರ್ ಸ್ಟಾರ್ ಆಗೋ ಮನ್ಸೂಚನೆ ನೀಡಿದ್ದಾರೆ.

ಆಶಿಕಾ ರಂಗನಾಥ್ ಕ್ಲಾಸಿಕಲ್ ಸಿಂಗರ್ ಮೋಹನಾ ಪಾತ್ರ ಪೋಷಿಸಿದ್ದು, ಆಕೆಯ ವೃತ್ತಿ ಜೀವನದ ಮಹತ್ವದ ಸಿನಿಮಾ ಅನಿಸಿದೆ ಈ ರೇಮೊ. ಹಾವ, ಭಾವ, ಆಂಗಿಕ ಭಾಷೆ ಜೊತೆ ಅಸಹಾಯಕ ಸನ್ನಿವೇಶಗಳು, ಎಮೋಷನಲ್ ಮೊಮೆಂಟ್ಸ್​ನಲ್ಲಿ ಮನೋಜ್ಞ ಅಭಿನಯ ನೀಡಿದ್ದಾರೆ. ಅಗ್ರೆಸ್ಸೀವ್ ಸೀಕ್ವೆನ್ಸ್​ನ ಬಹಳ ಚೆನ್ನಾಗಿ ಎಕ್ಸಿಕ್ಯೂಟ್ ಮಾಡೋ ಮೂಲಕ ವ್ಹಾವ್ ಫೀಲ್ ಕೊಟ್ಟಿದ್ದಾರೆ ಚೆಲುವೆ ಆಶಿಕಾ.

ಇನ್ನು ನಾಯಕನಟನ ತಂದೆ ಪಾತ್ರದಲ್ಲಿ ಶರತ್ ಕುಮಾರ್, ಚಿತ್ರಕ್ಕೆ ಟ್ವಿಸ್ಟ್ ಕೊಡೋ ಪಾತ್ರದಲ್ಲಿ ಮಧುಬಾಲಾ, ನಾಯಕಿ ಅಚ್ಯುತ್ ಕುಮಾರ್,  ರಾಜೇಶ್ ನಟರಂಗ ಸೇರಿದಂತೆ ಎಲ್ಲರೂ ಅವರವರ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ರೇಮೊ ಪ್ಲಸ್ ಪಾಯಿಂಟ್ಸ್

ಪವನ್ ಒಡೆಯರ್ ಕಥೆ & ನಿರ್ದೇಶನ

ಇಶಾನ್- ಆಶಿಕಾ ಕೆಮಿಸ್ಟ್ರಿ & ನಟನೆ

ವೆಸ್ಟ್ರನ್ & ಕ್ಲಾಸಿಕಲ್ ಮ್ಯೂಸಿಕ್ ಥೀಮ್

ರಿಚ್ ಲೊಕೇಷನ್ಸ್ & ವೈದಿ ಕ್ಯಾಮೆರಾ ಕೈಚಳಕ

ಮಧುಬಾಲಾ, ಅಚ್ಯುತ್ ಅಭಿನಯ

ಪ್ರೊಡಕ್ಷನ್ ವ್ಯಾಲ್ಯೂಸ್

ರೇಮೊ ಮೈನಸ್ ಪಾಯಿಂಟ್ಸ್

ಲೆಂಥ್​ವೈಸ್ ಸಿನಿಮಾ ಕೊಂಚ ಲ್ಯಾಗ್ ಅನಿಸುತ್ತೆ ಅನ್ನೋದು ಬಿಟ್ರೆ, ಎಲ್ಲೂ ಬೋರ್ ಹೊಡಿಸದಂತೆ ಕಥೆಯನ್ನ ಹೆಣೆಯಲಾಗಿದೆ. ನಿರೀಕ್ಷೆ ಇಟ್ಟುಕೊಳ್ಳದೆ ಹೋದವ್ರಿಗೂ ಒಂದೊಳ್ಳೆ ಸಿನಿಮಾ ನೋಡಿದ ಫೀಲ್ ತರಿಸುತ್ತೆ ರೇಮೊ. ನ್ಯೂನ್ಯತೆಗಳನ್ನ ಹುಡುಕೋದು ಕಷ್ಟ ಅನಿಸಿದ್ರೂ, ಹಾಸ್ಯದ ಟಚ್ ಕೊಂಚ ನೀಡಬಹುದಿತ್ತು. ಉಳಿದಂತೆ ಎಲ್ಲವೂ ಪರ್ಫೆಕ್ಟ್.

ರೇಮೊಗೆ ಪವರ್ ಟಿವಿ ರೇಟಿಂಗ್: 4/5

ರೇಮೊ ಫೈನಲ್ ಸ್ಟೇಟ್​ಮೆಂಟ್

ಕೊರೋನಾಗೂ ಮುನ್ನ ಸೆಟ್ಟೇರಿದ ರೇಮೊ, ಲೇಟ್ ಆದ್ರೂ ಸಖತ್ ಲೇಟೆಸ್ಟ್ ಆಗಿ ಥಿಯೇಟರ್​ಗೆ ಲಗ್ಗೆ ಇಟ್ಟಿದೆ. ಗೂಗ್ಲಿ, ರಣವಿಕ್ರಮ ಚಿತ್ರಗಳು ಖ್ಯಾತಿಯ ಡೈರೆಕ್ಟರ್ ಪವನ್ ಒಡೆಯರ್, ತಮ್ಮ ಸಿನಿಮಾ ಜರ್ನಿಯ ಅಷ್ಟೂ ಅನುಭವಗಳನ್ನು ಈ ಸಿನಿಮಾ ಮೇಲೆ ಪ್ರಯೋಗಿಸಿದ್ದಾರೆ. ಒಂದೊಳ್ಳೆ ಬಾಲಿವುಡ್ ಸಿನಿಮಾ ನೋಡಿದ ಅನುಭವ ನೀಡೋ ರೇಮೊ ಕನ್ನಡ ಚಿತ್ರರಂಗದ ಮಟ್ಟಿಗೆ ಮೇಕಿಂಗ್​ನಲ್ಲಿ ಟ್ರೆಂಡ್​ ಸೆಟ್ ಮೂವಿ ಅನ್ನಬಹುದು.

ಯೂತ್ ಹಾಗೂ ಫ್ಯಾಮಿಲಿ ಆಡಿಯೆನ್ಸ್ ಇಬ್ಬರನ್ನೂ ಗಮನದಲ್ಲಿಟ್ಕೊಂಡು ಒಡೆಯರ್ ಬ್ರಿಲಿಯೆಂಟ್ ಸ್ಕ್ರಿಪ್ಟ್​​ನ ಬ್ಲೆಂಡ್ ಮಾಡಿದ್ದಾರೆ. ಸಿಆರ್ ಮನೋಹರ್ ತಮ್ಮ ಕುಟುಂಬದ ಕುಡಿಯ ಸಿನಿಮಾ ಆದ್ದರಿಂದ ಒಂದೊಂದು ಫ್ರೇಮ್ ಕೂಡ ಬಹಳ ರಿಚ್ ಆಗಿ ಮೂಡಿಬರುವಂತೆ ನಿರ್ಮಿಸಿದ್ದಾರೆ.

ಪ್ರತಿಯೊಬ್ಬ ಯಶಸ್ವೀ ಪುರುಷನ ಹಿಂದೆ ಒಬ್ಬ ಮಹಿಳೆ ಇರ್ತಾಳೆ ಅನ್ನೋದು ಎಷ್ಟು ಸತ್ಯವೋ, ಮಹಿಳೆಯ ಸಕ್ಸಸ್ ಹಿಂದೆಯೂ ಒಬ್ಬ ಪುರುಷ ಇರ್ತಾನೆ ಅನ್ನೋದು ಅಷ್ಟೇ ಸತ್ಯ ಅನ್ನೋದನ್ನ ಕ್ಲೈಮ್ಯಾಕ್ಸ್ ಮೂಲಕ ತೋರಿಸಿದ್ದಾರೆ. ಒಟ್ಟಾರೆ ಈ ವೀಕೆಂಡ್ ಸಿನಿಮಾ ನೋಡಲು ಬಯಸೋರಿಗೆ ರೇಮೊ ಬೆಸ್ಟ್ ಚಾಯ್ಸ್ ಆಗಲಿದ್ದು, ಪಕ್ಕಾ ಪೈಸಾ ವಸೂಲ್ ಸಿನಿಮಾ ಅನಿಸಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES