Wednesday, January 22, 2025

‘ಕಾಂಗ್ರೆಸ್​​ ಮೇಲೆ ಗೋಮಾತೆಯ ಶಾಪವಿದೆ : ಪ್ರಮೋದ್​​ ಮುತಾಲಿಕ್​​​

ಚಾಮರಾಜನಗರ : ಇಂದು ಗೋಮಾತೆ ಶಾಪದಿಂದ ಕಾಂಗ್ರೆಸ್ ಕಸದಬುಟ್ಟಿ ಸೇರಿದೆ. ಕಳೆದ 75 ವರ್ಷಗಳಿಂದ ಗೋ ಹತ್ಯೆಗೆ ಬೆಂಬಲಿಸಿದ ಪರಿಣಾಮ AC ರೂಂಗಳಲ್ಲಿ ಕುಳಿತವರು ಇಂದು ಬೀದಿಗಿಳಿದಿದ್ದಾರೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್​​ ಮುತಾಲಿಕ್​​​ ಹೇಳಿದ್ದಾರೆ.

ಚಾಮರಾಜನಗರದಲ್ಲಿ ನಡೆದ ಅಜಾದ್ ಹಿಂದೂ ಸೇನೆ ಸಂಘಟನೆಯ ಕಾರ್ಯಾಲಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಕಾಂಗ್ರೆಸ್​​​ನವರು ಮಳೆ, ಬಿಸಿಲು ಎನ್ನದೇ ರಸ್ತೆಯಲ್ಲಿ ನಡೆಯುತ್ತಿರುವುದು ಗೋಮಾತೆಯ ಶಾಪವಾಗಿದೆ ಎಂದು ಹೇಳಿದರು.

ಗೋರಕ್ಷಕರ ಮೇಲೆಯೇ ಕೇಸ್​​ಗಳು ದಾಖಲಾಗುತ್ತಿದೆ. ನನ್ನ ವಿರುದ್ದ ಗೋರಕ್ಷಣೆ ಸಂಬಂಧ 17 ಪ್ರಕರಣ ಸೇರಿ ಒಟ್ಟು 107 ಕೇಸ್ ಹಾಕಿದ್ದಾರೆ. ಸಾವಿರ ಕೇಸ್ ದಾಖಲಿಸಿದರೂ ನಾನು ಹಿಂದೂ ಧರ್ಮ ರಕ್ಷಣೆಯಿಂದ ಹಿಂದೆ ಸರಿಯುವುದಿಲ್ಲ. ಈ ಹಿಂದೂ ದೇಶದಲ್ಲಿ ಹಿಂದೂಗಳು ಸಂಘಟಿತರಾಗಿ ಹಿಂದೂ ಧರ್ಮದ ಉಳಿವು ಮತ್ತು ಗೋಮಾತೆ ರಕ್ಷಣೆಗೆ ಹೋರಾಡಬೇಕು. ಹೋರಾಡದಿದ್ದರೆ ಹಿಂದೂ ಧರ್ಮಕ್ಕೆ ಆಪಾಯವಾಗಲಿದೆ ಎಂದು ಎಚ್ಚರಿಸಿದರು.

RELATED ARTICLES

Related Articles

TRENDING ARTICLES