Friday, November 8, 2024

ಮೆಟ್ರೋ 3ನೇ ಹಂತಕ್ಕೆ ಸರ್ಕಾರ ಸಮ್ಮತಿ

ಬೆಂಗಳೂರು : ಮೆಟ್ರೋ ಬೇಡಿಕೆ ದಿನೇ ದಿನೇ ಹೆಚ್ಚಾಗ್ತಿದೆ.ಈಗಾಗಲೇ ಎರಡು ಹಂತಗಳಿಗೆ ಗ್ರೀನ್ ಸಿಗ್ನಲ್ ನೀಡಿರೋ ಸರ್ಕಾರ ಮೂರನೇ ಹಂತ ಕಾಮಗಾರಿಗೆ ಮುಂದಾಗಿದೆ. ಸರ್ಕಾರದಿಂದ ಅನುಮತಿ ಸಿಕ್ಕ ಹಿನ್ನೆಲೆಯಲ್ಲಿ, ಪ್ರಾಜೆಕ್ಟ್ ಡೀಟೆಲ್ಸ್ ರಿಪೋರ್ಟ್ ನ್ನ ಕೇಂದ್ರ ಸರ್ಕಾರಕ್ಕೂ ಸಲ್ಲಿಕೆ ಮಾಡಲಾಗಿದೆ.‌ BMRCL ಪ್ರಸ್ತಾವನೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.‌ ಹೀಗಾಗಿ ಕೇಂದ್ರದ ಮಿನಿಸ್ಟ್ರಿ ಆಫ್ ಹೌಸಿಂಗ್ ಅಫೇರ್ಸ್ ಗೆ ರಿಪೋರ್ಟ್ ಕಳುಹಿಸಲಾಗಿದೆ.‌ ಈ ಪ್ರಸ್ತಾವನೆಗೆ ಕೇಂದ್ರ ಸರ್ಕಾರವೂ ಕೆಲವೇ ದಿನಗಳಲ್ಲಿ ಅನುಮತಿ ನೀಡಲಿದ್ದು ಬಳಿಕ ಮೆಟ್ರೋ ಮೂರನೇ ಹಂತದ ಮೆಟ್ರೋ ಕಾಮಗಾರಿಯನ್ನ ಕೈಗೆತ್ತಿಗೊಳ್ಳಲಿದೆ.‌

ಒಟ್ಟು 44.65 ಕಿ.ಮೀ. ಉದ್ದದ ಮೆಟ್ರೊ 3ನೇ ಹಂತ
ಮೂರನೇ ಹಂತದಲ್ಲಿವೆ 2 ಕಾರಿಡಾರ್‌ಗಳು
1ನೇ ಕಾರಿಡಾರ್ ಜೆ.ಪಿ.ನಗರ 4th ಫೇಸ್‌ನಿಂದ – ಹೆಬ್ಬಾಳಕ್ಕೆ 32 ಕಿ.ಮೀ.
ಡಾ.ರಾಜ್‌ಕುಮಾರ್ ಸಮಾಧಿ, ಯಶವಂತಪುರ, ನ್ಯೂ ಬಿಇಎಲ್ ಸರ್ಕಲ್, ಹೆಬ್ಬಾಳ
1ನೇ ಕಾರಿಡಾರ್‌ನಲ್ಲಿ ಮೈಸೂರು ರಸ್ತೆಯಲ್ಲಿ ಇಂಟರ್‌ಚೇಂಜ್ ನಿಲ್ದಾಣ
2ನೇ ಕಾರಿಡಾರ್ ಮಾಗಡಿ ರಸ್ತೆಯಿಂದ- ಕಡಬಗೆರೆಯವರೆಗೆ 12 ಕಿ.ಮೀ.
KHB ಕಾಲೋನಿ, ಸುಂಕದಕಟ್ಟೆ, ಬ್ಯಾಡರಹಳ್ಳಿ, ಕಡಬಗೆರೆಗೆ ಒಟ್ಟು 9 ನಿಲ್ದಾಣ
ಮೆಟ್ರೋ ಮೂರನೇ ಹಂತದ ಒಟ್ಟು ಕಾಮಗಾರಿ ವೆಚ್ಚ 13 ರಿಂದ 16 ಸಾವಿರ ಕೋಟಿ
2028ಕ್ಕೆ ಮೂರನೇ ಹಂತ ಕಂಪ್ಲೀಟ್ ಮಾಡುವ ಗುರಿ
ನಿತ್ಯ 6.35 ಲಕ್ಷ ಜನ ಪ್ರಯಾಣಿಸುವ ನಿರೀಕ್ಷೆ
ಮೆಟ್ರೋ ಮೂರನೇ ಹಂತದಲ್ಲಿ ಸುರಂಗ ಮಾರ್ಗವಿಲ್ಲ

ಮೆಟ್ರೋ ಮೂರನೇ ಹಂತದ ಆರಂಭಕ್ಕೆ ಎಲ್ಲಾ ತಯಾರಿಗಳು ನಡೆಯುತ್ತಿದ್ದು ಸರ್ವೆ ಕಾರ್ಯ ಆರಂಭವಾಗಿದೆ.‌ ಮೆಟ್ರೋ ಮಾರ್ಗದ ಅಲೈನ್ಮೆಂಟ್ ನಲ್ಲಿ ಖಾಲಿಜಾಗ, ಸರ್ಕಾರಿ ಜಾಗ ಗಮನಿಸಿ ಭೂಸ್ವಾಧಿನಕ್ಕೂ ತಯಾರಿ ಮಾಡಲಾಗುತ್ತಿದೆ.‌ ಜೊತೆಗೆ ಮೆಟ್ರೋ ಸಾಗುವ ಮಾರ್ಗದಲ್ಲಿ ಜಲಮಂಡಳಿ, ಬೆಸ್ಕಾಂ ಲೈನ್ ಇದ್ಯಾ ಎಂಬುದ‌ನ್ನ ಚೆಕ್ ಮಾಡುವುದರ ಜೊತೆಗೆ ಟ್ರಾಫಿಕ್ ಸರ್ವೆ ಮಾಡಿ ನಿತ್ಯ ಪ್ರಯಾಣಿಕರು ಸಂಚರಿಸಬಹುದಾದ ರೈಡರ್ ಶಿಫ್ ಅಂದಾಜು ಮಾಡಲಾಗ್ತಾಯಿದೆ.

ಒಟ್ನಲ್ಲಿ ಟ್ರಾಫಿಕ್ ನಗರ ಬೆಂಗಳೂರಿನ ಜನರ ಅವಶ್ಯಕತೆಗೆ ತಕ್ಕಂತೆ ಮೆಟ್ರೊ ಸಂಚಾರ ಮಾಡಲು ಸಿದ್ದವಾಗ್ತಾಯಿದ್ದು, ನಿರೀಕ್ಷೆಗೂ ಮೊದಲೇ ಮೆಟ್ರೋ ಮೂರನೇ ಹಂತ ಆರಂಭವಾಗ್ತಾಯಿರೋದು ಖುಷಿಯ ವಿಚಾರ.

ಕೃಷ್ಣಮೂರ್ತಿ ಪವರ್ ಟಿವಿ ಬೆಂಗಳೂರು

RELATED ARTICLES

Related Articles

TRENDING ARTICLES