Monday, December 23, 2024

ಕುಕ್ಕರ್​ ಬಾಂಬ್​ ಬ್ಲಾಸ್ಟ್ ಪ್ರಕರಣ : NIAಗೆ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ

ಮಂಗಳೂರು : ಕುಕ್ಕರ್​ ಬಾಂಬ್​ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉಗ್ರ ಶಾರೀಕ್ ಬಂಧನ ಮಾಡಲಾಗಿತ್ತು. ತೀವ್ರ ವಿಚಾರಣೆ ನಡೆಸಿದಾಗ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.

ಒಂದು ವೇಳೆ ಆಟೋದಲ್ಲಿ ಕುಕ್ಕರ್ ಬ್ಲಾಸ್ಟ್ ಆಗದೇ ಇದ್ದಿದ್ರೆ ಮಂಗಳೂರಿನ ಪ್ರಸಿದ್ಧ ದೇಗುಲಗಳು, ಬಸ್ ನಿಲ್ದಾಣ ಹಾಗೂ ಆರ್​​ಎಸ್​ಎಸ್​ ಕಚೇರಿ ಶಾರೀಕ್​ನ ಟಾರ್ಗೆಟ್ ಆಗಿತ್ತು ಎನ್ನುವ ಆಘಾತಕಾರಿ ಅಂಶಗಳು ಪೊಲೀಸ್ ತನಿಖೆ ವೇಳೆ ಹೊರಬಂದಿವೆ.ಇದರಿಂದ ಇಡೀ ಮಂಗಳೂರು ಮಾತ್ರವಲ್ಲ ಕರ್ನಾಟಕವೇ ಬೆಚ್ಚಿಬಿದ್ದಿದೆ.

ಉಗ್ರ ಶಾರೀಕ್ ವಿರುದ್ಧ UAPA ಕಾಯ್ದೆ ಅನ್ವಯ ಕೇಸ್​ ದಾಖಲು ಮಾಡಲಾಗಿದ್ದು , ಪ್ರಕರಣದ ತೀವ್ರತೆ ಹೆಚ್ಚಾಗುತ್ತಿದ್ದಂತೆ ರಾಜ್ಯ ಸರ್ಕಾರ NIAಗೆ ಕೇಸ್ ವರ್ಗಾವಣೆ ಮಾಡಲಾಗಿದ್ದು, ಇಂದು NIA ಅಧಿಕಾರಿಗಳು ಶಾರೀಕ್ ನ ತೀವ್ರ ವಿಚಾರಣೆ ಒಳಪಡಿಸಿದ್ದಾರೆ.

RELATED ARTICLES

Related Articles

TRENDING ARTICLES