Monday, December 23, 2024

ನರ್ಸಿಂಗ್​​ ಕಾಲೇಜ್​​​ನ ನಕಲಿ ದಂಧೆ ಬಟಾಬಯಲು

ವೈದ್ಯೋ ನಾರಾಯಣ ಹರಿ ಎನ್ನುತಾರೆ. ಆದರೆ ಇತ್ತೀಗೆ ಇವರುಗಳು ಯಮಕಿಂಕರರಂತೆ ಭಾಸವಾಗ್ತಿದ್ದಾರೆ. ಚೆನ್ನಾಗಿ ಓದಿ ವಿಷಯ ಅರಿತು, ರೋಗಿಗಳ ಶುಶ್ರೂಷೆ ಮಾಡಬೇಕಿದ್ದ ನರ್ಸಿಂಗ್​​ ಸ್ಟೂಡೆಂಟ್ಸ್​​, ನಕಲಿ ಮಾರ್ಗದ ಮೂಲಕ ಪದವಿ ಪಡೆಯಲು ಮುಂದಾಗಿದ್ದಾರೆ.

ಬೆಂಗಳೂರು ನರ್ಸಿಂಗ್ ಕಾಲೇಜ್​ಗಳಲ್ಲಿ ಕಾಪಿ ಕರ್ಮಕಾಂಡ ಬಹಿರಂಗವಾಗಿದ್ದು, ನರ್ಸಿಂಗ್​​ ವಿದ್ಯಾರ್ಥಿಗಳು ಅಂಜಿಕೆ, ಅಳುಕಿಲ್ಲದೇ ನಕಲಿ ಮಾಡಲು ಮುಂದಾಗಿದ್ದಾರೆ. ನರ್ಸಿಂಗ್ ಕಾಲೇಜ್​​​​ಗೆ ದಾಳಿ ನಡೆಸಿದ ನಮ್ಮ ಪವರ್​​​ ಟಿವಿ SIT ತಂಡ ಅಲ್ಲಿನ ಅಕ್ರಮವನ್ನು ಬಯಲಿಗೆಳೆದಿದೆ.

ಯಲಹಂಕದ ಎಸ್​​​ಬಿ ಕಾಲೇಜ್ ಆಫ್ ಮ್ಯಾನೇಜ್​ಮೆಂಟ್ ಸ್ಟಡೀಸ್​​​​ನಲ್ಲಿಗೆ ತೆರಳಿದ ನಮ್ಮ ತಂಡಕ್ಕೆ ಇಲ್ಲಿ ನಡೆಯುವ ಎಕ್ಸಾಮ್​​​​ ಗೋಲ್​​ಮಾಲ್​​​ ಕಂಡಿದೆ. ಕಾಪಿ ಹೊಡೆಯುತ್ತಾ ರೆಡ್ ಹ್ಯಾಂಡ್ ಆಗಿ ವಿದ್ಯಾರ್ಥಿಗಳು ಸಿಕ್ಕಿಬಿದ್ದಿದ್ದಾರೆ. ತಮ್ಮ ಕರ್ಮಕಾಂಡ ಬಯಲಾಗುತ್ತಲೇ ಕಾಲೇಜು ಆಡಳಿತ ಮಂಡಳಿ ಆಮಿಷಕ್ಕೆ ಮುಂದಾಗಿದೆ.

RELATED ARTICLES

Related Articles

TRENDING ARTICLES