Thursday, December 19, 2024

ಚಾಮರಾಜನಗರದ ಬಿಳಿಗಿರಿಬನದಲ್ಲಿ ಕಹಿಜೇನು..!

ಚಾಮರಾಜನಗರ :  ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ನೇರಳೆ ಹೂವು ಬಿಡುವ ಕಾಲದಲ್ಲಿ ಕಹಿ ಜೇನು ಸಿಗಲಿದೆ. ಸ್ವಲ್ಪ ಸಿಹಿ-ಹೆಚ್ಚು ತೊಗರಿನ ರುಚಿ ಇರುವ ಜೇನುತುಪ್ಪದ ಸೀಸನ್ ಬಂದಿದ್ದು, ನೂರಾರು ಮಂದಿ ಕಹಿ ಜೇನನ್ನು ಸವಿಯುತ್ತಿದ್ದಾರೆ. ಬಿಳಿಗಿರಿರಂಗನ ಬೆಟ್ಟದಲ್ಲಿ ಹೆಜ್ಜೇನು, ತುಡುವೆ, ಕೋಲು, ನೆಸರೆ ಹಾಗೂ ನೇರಳೆ ಎಂಬಿತ್ಯಾದಿ ತರಹೇವಾರಿ ಜೇನು ಸಿಗಲಿದೆ. ನೇರಳೆ ಹೂಗಳಿಂದ ಮಕರಂದ ಹೀರುವ ನೇರಳೆ ಜೇನು ಕಹಿರುಚಿ ಕೊಡುವುದು ವಿಶೇಷವಾಗಿದೆ.‌

ನೇರಳೆ, ಕೋಲು, ನೆಸರೆ ಜೇನು ತುಪ್ಪ ಸಿಗುವುದು ಅತ್ಯಲ್ಪ. ಆದ್ದರಿಂದ ಅಡವಿ ನೇರಳೆ ಜೇನಿಗೆ ಬಲು ಬೇಡಿಕೆ ಇದೆ. ಇದರಲ್ಲಿ ರೋಗ ನಿರೋಧಕ ಗುಣಗಳು ಬಹಳಷ್ಟಿದೆ. ಮಧುಮೇಹಿಗಳು ಇದನ್ನು ಕೊಂಡೊಯ್ಯತ್ತಾರೆ.‌ ನೇರಳೆ ಜೇನು ಸೀಸನ್​ಗಷ್ಟೇ ಬರಲಿದ್ದು, ಅಡವಿ ತುಪ್ಪದ ಗುಣಮಟ್ಟವೂ ಉತ್ತಮವಾಗಿದೆ.

ಒಟ್ಟಿನಲ್ಲಿ ಸಿಹಿ ಎಂದರಷ್ಟೇ ಜೇನು ಎನ್ನುವವರಿಗೆ ಈ‌ ನೇರಳೆ ಕಹಿ ಜೇನು ಹೊಸ ರುಚಿ ನೀಡಲಿದೆ. ಜೊತೆಗೆ ಉತ್ತಮ ಆರೋಗ್ಯವನ್ನು ನೀಡುವ ತಪೋ ನೆಲೆಯಾಗಿದೆ.ಬಿಳಿಗಿರಿ ರಂಗಪ್ಪನ ಆರ್ಶಿವಾದದ ಜೊತೆ ಆರೋಗ್ಯ ಹಾಗೂ ಪ್ರಕೃತಿಯ ಸೌಂದರ್ಯವನ್ನು ಮನ ತುಂಬಿಕೊಳ್ಳುವ ಅವಕಾಶವಂತೂ ಯಾರೂ ಮೀಸ್ ಮಾಡಿಕೊಳ್ಳುವಂತ್ತಿಲ್ಲ.

ಶ್ರೀನಿವಾಸ್ ನಾಯಕ, ಪವರ್ ಟಿವಿ, ಚಾಮರಾಜನಗರ

RELATED ARTICLES

Related Articles

TRENDING ARTICLES