Sunday, May 19, 2024

‘ಚಿಲುಮೆ’ಯಲ್ಲಿ ಚಿಮ್ಮಿದ ಹಣದ ಹೊಳೆ..!

ಬೆಂಗಳೂರು : ಯಸ್.. ಸದ್ಯ ರಾಜ್ಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿರುವ ಚಿಲುಮೆ ಸಂಸ್ಥೆಯಿಂದ ಮತದಾರರ ಮಾಹಿತಿ ಕಳುವು ಪ್ರಕರಣದ ಕಿಂಗ್ ಪಿನ್ ರವಿಕುಮಾರ್ ಬಂಧನವಾದ ಬಳಿಕ ಪೊಲೀಸರಿಗೆ ಭಯಾನಕ ಸತ್ಯಗಳು ತಿಳಿಯುತ್ತೇವೆ. ಸತತ ಮೂರು ದಿನಗಳಿಂದ ರವಿಕುಮಾರ ಗೆ ಡ್ರೀಲ್ ಮಾಡ್ತಿರುವ ಪೊಲೀಸರ ಮುಂದೆ ಅಸಲಿ ಸತ್ಯಗಳನ್ನು ಬಾಯ್ಬಿಟ್ಟಿದ್ದಾನಂತೆ.

ರವಿಕುಮಾರ್ ನನ್ನು ವಿಚಾರಣೆ ಮಾಡ್ತಿದಾಗ 2018 ರಿಂದ ಚಿಲುಮೆ ಸಂಸ್ಥೆ ಮಾಹಿತಿ ಸಂಗ್ರಹಣೆ ಮಾಡ್ತಿದೆ ಅಂತಾ ತಿಳಿದು ಬಂದಿದೆ. ಅದಲ್ಲದೇ ಸರಿ ಸುಮಾರು ಚಿಲುಮೆ ಸಂಸ್ಥೆಯಲ್ಲಿ 300ಕ್ಕೂ ಅಧಿಕ ಸಿಬ್ಬಂದಿ ಕೆಲಸ ಮಾಡ್ತಿದ್ರಂತೆ. ಅವರಿಗೆಲ್ಲಾ ಯಾವ ರೀತಿ ಸಂಬಳ ಕೊಡ್ತಿದ್ದ ಅನ್ನೋದು ಪೊಲೀಸರಿಗೆ ಅನುಮಾನ ಶುರುವಾದ ಬೆನ್ನಲ್ಲೇ ಚಿಲುಮೆ ಸಂಸ್ಥೆ ಅಕೌಂಟ್ ನೋಡ್ಕೊಂತಿದ್ದ ಕೆಂಪೇಗೌಡನ ತೀವ್ರ ವಿಚಾರಣೆ ಮಾಡಿದಾಗ ಅಸಲಿ ಸತ್ಯ ಬಾಯ್ಬಿಟ್ಟಿದ್ದಾನಂತೆ.

ಇನ್ನೂ ಚಿಲುಮೆ ಸಂಸ್ಥೆಯ ಮುಖ್ಯಸ್ಥ ಅಕೌಂಟ್ ಡಿಟೈಲ್ಸ್ ಕಲೆಕ್ಟ್ ಮಾಡಿದ ಪೊಲೀಸರಿಗೆ ಸಿಕ್ಕಿದು ಕೇವಲ 2 ಲಕ್ಷ ಅಂತೆ.. ಹಾಗಾದ್ರೇ ಚಿಲುಮೆ ಸಂಸ್ಥೆ ಕೆಲಸ ಮಾಡ್ತಿದ 300ಕ್ಕೂ ಅಧಿಕ ಜನರಿಗೆ ಯಾವ ರೀತಿ ಪೇಮೆಂಟ್ ಮಾಡ್ತಿದ್ರು ಅನ್ನೋದರ ಕಂಪ್ಲೀಟ್ ಡಿಟೈಲ್ಸ್ ಸಿಕ್ಕಿದೆ.. ಎಲ್ಲಾ ಸಿಬ್ಬಂದಿಗೆ ಹಾರ್ಡ್‌ ಕ್ಯಾಶ್ ಮೂಲಕ‌ ಸಂಬಳ ಕೊಡ್ತಿದ್ದನಂತೆ. ಹಾಗಾದ್ರೆ ತಿಂಗಳಿಗೆ 300 ಜನ ಸಿಬ್ಬಂದಿಗೆ 30-40 ಲಕ್ಷ ಸಂಬಳ ನೀಡ್ತಾ ಇದ್ದ. ಅದು ಒಂದನೆಯ ತಾರೀಕೇ ಅವರಿಗೆ ಸಂಬಳ ಹಾಕ್ತಿದ್ದನಂತೆ.ಹಾಗಾಗಿ ಪೊಲೀಸರಿಗೆ ಸಾಕಷ್ಟು ಅನುಮಾನ ಶುರುವಾಗಿದೆ.

ಇನ್ನೂ ವಿಚಾರಣೆಯಲ್ಲಿ ವರ್ಷಕ್ಕೆ ಎರಡು- ಎರಡೂವರೆ ಕೋಟಿ ಟ್ರಾಂಜಾಕ್ಷನ್ ನಡೆಸಿರೋದು ಪತ್ತೆಯಾಗಿದ್ದು.ಇಷ್ಟೊಂದು ಎಲ್ಲಾ ಟ್ರಾಂಜಾಕ್ಷನ್ ಮಾಡಲು ಹೇಗೆ ಸಾಧ್ಯ ಅಂತಾ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ವಿಚಾರಣೆ ಮಾಡಲು ಮುಂದಾದಾಗ ರವಿಕುಮಾರ್ ತುಟಿ ಬಿಚ್ಚದೇ ಸೈಲೆಂಟಾಗಿದ್ದಾನೆ ಅಂತೆ. ಹಾಗಾದ್ರೆ ಚಿಲುಮೆ ಸಂಸ್ಥೆ ಮುಖ್ಯಸ್ಥ ರವಿಕುಮಾರ್ ಬ್ಲಾಕ್ ಆ್ಯಂಡ್ ವೈಟ್ ದಂಧೆ ನಡೆಸಿರುವ ಅನುಮಾನ ಪೊಲೀಸರಿಗೆ ಶುರುವಾಗಿದೆ.

ಅಶ್ವಥ್ ಎಸ್.ಎನ್. ಕ್ರೈಂ ಬ್ಯೂರೋ ಪವರ್ ಟಿವಿ

RELATED ARTICLES

Related Articles

TRENDING ARTICLES