ಹಂಪಿ : ವಿದೇಶಿ ಕನ್ಯೆ ಜೊತೆಗೆ ಹಂಪಿ ಯುವಕ ಸಪ್ತಪದಿ ತುಳಿದಿದ್ದಾನೆ. ವಿಶ್ವವಿಖ್ಯಾತ ಹಂಪಿಯ ವಿರೂಪಾಕ್ಷೇಶ್ವರನ ಸನ್ನಿಧಿಯಲ್ಲಿ ಅದ್ದೂರಿ ವಿವಾಹ ನಡೆದಿದೆ. ಬೆಲ್ಜಿಯಂ ಕನ್ಯೆ ಕೆಮಿಲ್ ಎಂಬಾಕೆಯನ್ನು ಅನಂತರಾಜು ವಿವಾಹವಾಗಿದ್ದಾನೆ.
ಆಟೋ ಚಾಲಕನಾಗಿ ಕೆಲಸ ಮಾಡಿತ್ತಿರೋ ಅನಂತರಾಜು ಕೆಮಿಲ್ ನಾಲ್ಕೈದು ವರ್ಷಗಳಿಂದ ಪ್ರೀತಿಸುತ್ತಿದ್ದು, ಇದೀಗ ಹಸೆಮಣೆ ಏರಿದ್ದಾರೆ. ಸೋಷಿಯಲ್ ವರ್ಕರ್ ಆಗಿ ಕೆಲಸ ಮಾಡ್ತಿರೋ ಬೆಲ್ಜಿಯಂ ಕನ್ಯೆ ಕೆಮಿಲ್ ಮತ್ತು ಆಕೆಯ ಕುಟುಂಬ ನಾಲ್ಕೈದು ವರ್ಷಗಳ ಹಿಂದೆ ಹಂಪಿ ವೀಕ್ಷಣೆಗೆ ಬಂದಿದ್ರು. ಆ ಸಂದರ್ಭದಲ್ಲಿ ಅನಂತರಾಜುವಿನ ಪ್ರಮಾಣಿಕತೆಗೆ ಮನಸೋತ ಕೆಮಿಲ್ ಪ್ರೀಯಲ್ಲಿ ಬಲೆಯಲ್ಲಿ ಬಿದ್ದಿದ್ದಾಳೆ.
ಕೆಮಿಲ್ ಜೀಪ್ ಫಿಲಿಪ್ಪೆ ದಂಪತಿಗಳ ತೃತೀಯ ಪುತ್ರಿ ಆಗಿದ್ದು, ಅನಂತರಾಜು ಹಂಪಿಯ ಜನತಾ ಪ್ಲಾಟ್ನ ರೇಣುಕಮ್ಮ ಮತ್ತು ಅಂಜಿನಪ್ಪ ಅವರ ಜೇಷ್ಠ ಪುತ್ರನಾಗಿದ್ದಾನೆ. ಇವರ ಪ್ರೀತಿಗೆ ಮನೆಯವರು ಒಪ್ಪಿಗೆ ಸೂಚಿಸಿದ್ದಾರೆ. ಈ ಜೋಡಿಯ ವಿವಾಹವನ್ನು 3 ವರ್ಷಗಳ ಹಿಂದೆಯೇ ನಡೆಸಲು ಯೋಜಿಸಲಾಗಿತ್ತು. ಆದರೆ ಕೊರೋನಾ ಕಾರಣದಿಂದ ಮದುವೆಯನ್ನು ಮುಂದೂಡಲಾಗಿತ್ತು. ಇದೀಗ ಇವರು ವಿವಾಹವಾಗಿ ನವ ಜೀವನಕ್ಕೆ ಕಾಲಿಟ್ಟಿದ್ದಾರೆ.