Wednesday, January 22, 2025

ದಿಗ್ಗಿ ದಂಪತಿಯ ಅನಂತ ಫ್ಯಾಮಿಲಿ ಎಮೋಷನ್ ಡ್ರಾಮಾ

ಕುಟುಂಬಗಳಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲದೆ ಹೋಗ್ತಿರೋ ಈ ಕಾಲದಲ್ಲಿ ಅದ್ರ ಮೌಲ್ಯವನ್ನು ಅರ್ಥೈಸೋಕೆ ಅಂತ ತಿಮ್ಮಯ್ಯ ಮತ್ತು ಅವ್ರ ಮೊಮ್ಮಗ ಬರ್ತಿದ್ದಾರೆ. ರಿಲೀಸ್ ಡೇಟ್ ಕೂಡ ಫಿಕ್ಸ್ ಆಗಿದ್ದು, ಅನಂತ್​ನಾಗ್ ಜೊತೆ ದಿಗಂತ್ ದಂಪತಿ ಎಮೋಷನಲ್ ಡ್ರಾಮಾ ಹೊತ್ತು ಸಾಗಿದ್ದಾರೆ. ಇಷ್ಟಕ್ಕೂ ಟ್ರೈಲರ್ ಹೇಗಿದೆ..? ಟೀಂ ಹೇಳಿದ್ದೇನು ಅಂತೀರಾ..? ನೀವೇ ಓದಿ.

  • ತಿಮ್ಮಯ್ಯ ಟ್ರೈಲರ್​ನಲ್ಲಿದೆ ಟೀಸರ್​ನ ಮೀರಿದ ಕಂಟೆಂಟ್..!
  • ಅನಂತ್​ನಾಗ್ ಆಸ್ತಿಗೆ ದೂದ್​ಪೇಡಾ ದಿಗಂತ್ ಗಾಳ..?
  • ಕೌಟುಂಬಿಕ ಮೌಲ್ಯಗಳ ನೆಲೆಗಟ್ಟಿನಲ್ಲಿ ತಿಮ್ಮಯ್ಯ ಕಥಾನಕ

ಎವರ್ ಗ್ರೀನ್ ಹೀರೋ ಅನಂತ್​ನಾಗ್ ಸಿನಿಯಾನದ ಮತ್ತೊಂದು ವಿನೂತನ ಪ್ರಯತ್ನ ಹಾಗೂ ಪ್ರಯೋಗ ತಿಮ್ಮಯ್ಯ & ತಿಮ್ಮಯ್ಯ ಸಿನಿಮಾ. ಟೀಸರ್ ನೋಡಿ ಪಕ್ಕಾ ಫನ್ ಎಂಟರ್​ಟೈನರ್ ಅಂದುಕೊಂಡಿದ್ದವ್ರಿಗೆ, ಅದನ್ನ ಮೀರಿದ ಬೇರೇನೋ ಕಂಟೆಂಟ್ ಇದೆ ಅನ್ನೋದನ್ನ ಟ್ರೈಲರ್​ನಿಂದ ಮನದಟ್ಟು ಮಾಡಿದೆ ಚಿತ್ರತಂಡ.

ಹೌದು.. ರೀಸೆಂಟ್ ಆಗಿ ಟ್ರೈಲರ್ ಲಾಂಚ್ ಮಾಡೋದ್ರ ಮೂಲಕ ಮಾಧ್ಯಮಗಳ ಮೂಲಕ ತಮ್ಮ ಸಿನಿಮಾ ಶೂಟಿಂಗ್ ಅನುಭವಗಳನ್ನು ಹಂಚಿಕೊಂಡ ಹಿರಿಯನಟ ಡಾ. ಅನಂತ್​ನಾಗ್, ಇಂತಹ ಸ್ಕ್ರಿಪ್ಟ್​ಗೆ ನೋ ಅನ್ನೋಕೆ ಆಗಲಿಲ್ಲ. ನನ್ನ ಜೀವಮಾನದಲ್ಲೇ ಇಂತಹ ಒಳ್ಳೆಯ ಕಥೆ ನಾ ಮಾಡಿಲ್ಲ ಅಂದ್ರು. ನಿರ್ದೇಶಕ ಸಂಜಯ್ ಶರ್ಮಾ ಹಾಗೂ ಅವ್ರ ಸಹೋದರ ರಾಜೇಶ್ ಶರ್ಮಾ, ಸಂಜಯ್ ಶರ್ಮಾರ ಪತ್ನಿ ವಿನೀತ್​ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ರು.

ಇದು ಅನಂತ್​ನಾಗ್ ಹಾಗೂ ದಿಗಂತ್ ತಾತ- ಮೊಮ್ಮಗನಾಗಿ ನಟಿಸಿರೋ ಸಿನಿಮಾ. ಇಲ್ಲಿ ಮನರಂಜನೆ ಜೊತೆ ಫ್ಯಾಮಿಲಿ ಎಮೋಷನ್ಸ್ ಇದೆ. ಸಂಬಂಧಗಳ ಮೌಲ್ಯಗಳನ್ನು ಅರ್ಥೈಸೋ ಭಾವನಾತ್ಮಕ ಅಲೆಗಳಿವೆ. ಕುಟುಂಬದಲ್ಲಿ ನಡೆಯೋ ಸಣ್ಣಪುಟ್ಟ ತಪ್ಪುಗಳು ದೊಡ್ಡದಾದಾಗ ಏನೆಲ್ಲಾ ಆಗುತ್ತೆ ಅನ್ನೋದ್ರ ಹಿಂಟ್ ನೀಡಲಾಗಿದೆ.

ಮುಂಬೈನಲ್ಲಿ ಆ್ಯಡ್ ಫಿಲಂಸ್ ಹಾಗೂ ಡಾಕ್ಯುಮೆಂಟರಿಗಳನ್ನ ಮಾಡಿಕೊಂಡಿದ್ದ ಕನ್ನಡ ಮೂಲದ ಡೈರೆಕ್ಟರ್ ಸಂಜಯ್ ಶಮಅರ್ ಇದಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ನಾಯಕಿಯಾಗಿ ಶುಭ್ರ ಅಯ್ಯಪ್ಪ ಬಣ್ಣ ಹಚ್ಚಿದ್ದು, ಐಂದ್ರಿತಾ ರೇ ಕೂಡ ಸ್ಪೆಷಲ್ ಅಪಿಯರೆನ್ಸ್ ನೀಡಿರೋದು ವಿಶೇಷ. ಅಲ್ಲಿಗೆ ದಿಗಂತ್- ಅನಂತ್​ನಾಗ್ ಕಾಂಬೋಗೆ ಌಂಡಿ ಕೂಡ ಸೇರಿಕೊಂಡಿರೋದು ಚಿತ್ರ ಹಿಟ್ ಆಗೋ ಮನ್ಸೂಚನೆ ನೀಡಿದೆ.

ಟೀಸರ್​ನಿಂದ ಎಲ್ಲರ ಮನ ಗೆದ್ದಿದ್ದ ತಿಮ್ಮಯ್ಯ & ತಿಮ್ಮಯ್ಯ ತಂಡ, ಅದಾದ ಬಳಿಕ ಅನೂಪ್ ಸೀಳಿನ್ ಸಂಗೀತ ಸಂಯೋಜನೆಯ ಹಾಡುಗಳಿಂದ ವ್ಹಾವ್ ಫೀಲ್ ಕೊಟ್ಟಿದ್ರು. ಕೊಡಗಿನ ವಿಂಟೇಜ್ ಮನೆಯಲ್ಲಿ ಸೆರೆಹಿಡಯಲಾದ ಬಹುತೇಕ ಭಾಗಗಳು ನೊಡುಗರ ಕಣ್ಮನ ತಣಿಸಲಿವೆ. ಒಟ್ಟಾರೆ ಟ್ರೈಲರ್ ಕೂಡ ಸಂಥಿಂಗ್ ಸ್ಪೆಷಲ್ ಅನಿಸಿದ್ದು, ಇದೇ ಡಿಸೆಂಬರ್ 2ಕ್ಕೆ ಅಸಲಿ ಕಹಾನಿ ದೊಡ್ಡ ಪರದೆ ಮೇಲೆ ಅನಾವರಣಗೊಳ್ಳಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES