Thursday, January 23, 2025

IPLನಿಂದ ಮನೀಷ್ ಪಾಂಡೆ​ ಔಟ್​​​

ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್​ಗಾಗಿ ಎಲ್ಲಾ ತಂಡಗಳು ಭರದ ಸಿದ್ಧತೆಯಲ್ಲಿದೆ. ಈಗಾಗಲೇ 10 ತಂಡಗಳು ಕೆಲ ಆಟಗಾರರನ್ನು ಕೈ ಬಿಟ್ಟು, ಮಿನಿ ಹರಾಜಿಗಾಗಿ ಭರ್ಜರಿ ಪ್ಲ್ಯಾನ್​ಗಳನ್ನು ರೂಪಿಸುತ್ತಿದೆ. ವಿಶೇಷ ಎಂದರೆ ಹೀಗೆ ಬಿಡುಗಡೆ ಮಾಡಿದ ಆಟಗಾರರ ಪಟ್ಟಿಯಲ್ಲಿ ಸ್ಟಾರ್​ಆಟಗಾರರ ದಂಡೇ ಇದೆ. ಅದರಲ್ಲೂ ಲಕ್ನೋ ಸೂಪರ್ ಜೈಂಟ್ಸ್ ತಂಡವು ಕರ್ನಾಟಕದ ಆಟಗಾರ ಮನೀಷ್ ಪಾಂಡೆಯನ್ನು ತಂಡದಿಂದ ಕೈ ಬಿಟ್ಟಿದೆ.

ಈ ಬಗ್ಗೆ ಮಾತನಾಡಿದ ಪಾಂಡೆ, ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ತನ್ನನ್ನು ತಂಡದಿಂದ ಬಿಡುಗಡೆ ಮಾಡುವ ಬಗ್ಗೆ ಒಮ್ಮೆಯೂ ತಿಳಿಸಿರಲಿಲ್ಲ ಎಂದಿದ್ದಾರೆ. ನನಗೆ ಈ ಬಗ್ಗೆ ಯಾವುದೇ ಕರೆ ಬಂದಿಲ್ಲ. ಫ್ರಾಂಚೈಸಿ ಪಟ್ಟಿ ಬಿಡುಗಡೆ ಮಾಡಿದಾಗಲೇ ನನಗೆ ಈ ವಿಷಯ ತಿಳಿಯಿತು. ಅವರು ನನ್ನನ್ನು ಬಿಡುಗಡೆ ಮಾಡಲು ಬಯಸಿದ್ದರು ಎಂದು ನಾನು ಅರ್ಥಮಾಡಿಕೊಂಡಿದ್ದೇನೆ ಎಂದು ಮನೀಷ್ ಪಾಂಡೆ ತಿಳಿಸಿದ್ದಾರೆ. ನನ್ನನ್ನು ಬಿಡುಗಡೆ ಮಾಡಿದ್ದರಿಂದ ಅವರಿಗೆ ಸ್ಪಲ್ಪ ಹಣ ಉಳಿದಿದೆ. ಆದರೆ ನಾನು ವಿಕೆಟ್​ನಲ್ಲಿ ಹೆಚ್ಚು ಸಮಯ ಕಳೆಯಲು ಬಯಸುವ ಆಟಗಾರ. ಒಮ್ಮೆ ನಾನು ಸೆಟ್ ಆದರೆ ದೊಡ್ಡ ಸ್ಕೋರ್‌ಗಳನ್ನು ಎದುರು ನೋಡುತ್ತೇನೆ ಎಂದು ಪಾಂಡೆ ತಿಳಿಸಿದರು.

2021 ರಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡವು ಮನೀಷ್ ಪಾಂಡೆಯನ್ನು ಕೈಬಿಟ್ಟಿತ್ತು. ಹೀಗಾಗಿ ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ಪಾಂಡೆಯನ್ನು 4.6 ಕೋಟಿಗೆ ಖರೀದಿಸಿತ್ತು. ಆದರೆ 6 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಪಾಂಡೆ ಕಲೆಹಾಕಿದ್ದು ಕೇವಲ 88 ರನ್​ ಮಾತ್ರ. ಹೀಗಾಗಿ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ತಂಡವು ಮನೀಷ್ ಪಾಂಡೆಯನ್ನು ಒಂದೇ ವರ್ಷದೊಳಗೆ ರಿಲೀಸ್ ಮಾಡಿದೆ.

RELATED ARTICLES

Related Articles

TRENDING ARTICLES