Monday, December 23, 2024

ಒಂದೊಂದೇ ಜಿಲ್ಲೆಗೆ ವ್ಯಾಪಿಸ್ತಿದೆ ಶಾರೀಕ್​ನ ‘ಉಗ್ರ’ಜಾಲ..!

ಆ ಮಹಾ ಅನಾಹುತ ನಡೆದಿದ್ರೆ ಭಾರೀ ಸಾವು-ನೋವು ಸಂಭಿಸ್ತಿತ್ತು. ಆದ್ರೆ, ಕುಕ್ಕರ್‌ ಹೊಗೆ ಬಿಟ್ಟು ಸುಮ್ಮನಾಗಿತ್ತು. ಅದು ಅಂದುಕೊಂಡಂತೆ ಆಗಿದ್ರೆ, ಒಂದು ಬಸ್‌ನಷ್ಟು ಜನ ಸತ್ತು ಬೀಳ್ತಿದ್ರು. ಹೌದು, ಶಾರೀಕ್‌ ಅನ್ನೋ ಉಗ್ರನ ಬಂಡವಾಳ ಬಯಲಾಗಿದ್ದು, ಆ ಕುಕ್ಕರ್‌ ಬ್ಲಾಸ್ಟ್‌ನಿಂದಲೇ..ಇದೀಗ, ಬಗೆದಷ್ಟು ಬಯಲಾಗ್ತಿದೆ ಭಯೋತ್ಪಾದಕರ ಜಾಲ.

ಕೇವಲ ಮಂಗಳೂರಿಗಷ್ಟೇ ಸೀಮಿತವಾಗಿಲ್ಲ ಶಾರೀಕ್‌ನ ಪ್ಲ್ಯಾನ್‌.. ಮಂಗಳೂರು, ಮೈಸೂರು ಮಾತ್ರವಲ್ಲ. ಬೆಂಗಳೂರಿನಲ್ಲೂ ಉಗ್ರನ ಹೆಜ್ಜೆ ಗುರುತು ಮೂಡಿದೆ.. ಬೆಂಗಳೂರಿನ ಎಸ್‌ಎಲ್‌ಎಸ್‌ ಅಪಾರ್ಟ್‌ಮೆಂಟ್‌ನ ಸಂಬಂಧಿಕರ ಮನೆಯಲ್ಲಿದ್ದ..ಇದೇ ಕಾರಣಕ್ಕೆ ಎನ್‌ಐಎ ತಂಡ ಆತನ ಸಂಬಂಧಿಕರನ್ನು ವಿಚಾರಣೆ ಮಾಡಿದೆ.. ಮಾರ್ಚ್‌ ಹಾಗು ಏಪ್ರಿಲ್‌ನಲ್ಲಿ ಈ ಉಗ್ರ ವಾಸವಿದ್ದ ಬಗ್ಗೆ ಮಾಹಿತಿ ಕಲೆ ಹಾಕ್ತಿದೆ ಭಯೋತ್ಪಾದಕ ನಿಗ್ರಹ ದಳ..ಅಷ್ಟೇ ಅಲ್ಲ, ಉಗ್ರ ಮತೀನ್‌ ಜೊತೆಯೂ ಫ್ಲ್ಯಾಟ್‌ಗೆ ಬಂದಿದ್ದನಂತೆ ಶಾರೀಕ್‌..
ಹಾಗಾದ್ರೆ, ಬೆಂಗಳೂರಲ್ಲೂ ವಿಧ್ವಂಸಕ ಕೃತ್ಯಕ್ಕೆ ಪ್ಲ್ಯಾನ್​ ಮಾಡಿದ್ನಾ ಶಾರೀಕ್‌..? ಬೆಂಗಳೂರಲ್ಲಿದ್ದುಕೊಂಡೇ ಮಂಗಳೂರು ಸ್ಫೋಟಕ್ಕೆ ಸ್ಕೆಚ್ ಹಾಕಿದ್ನಾ ಮಹಾ ಉಗ್ರ.

ಬೆಚ್ಚಿ ಬೀಳಿಸುತ್ತೆ ಕುಕ್ಕರ್‌ ಉಗ್ರನ ಸ್ಫೋಟಕ ರಹಸ್ಯಗಳು. ಹಿಂದೂ ಯುವಕನಂತೆ ವೇಷಭೂಷಣ, ಅರ್ಚಕನಂತೆ ಪೂಜೆ ಪುನಸ್ಕಾರ. ಸೊಂಟಕ್ಕೆ ಕೇಸರಿ ಶಾಲು, ಬೆಳಗ್ಗೆ ಎದ್ರೆ ಗಂಟೆ ಬಾರಿಸಿ ಶಿವಪೂಜೆ. ಹೀಗೆ, ಮಾಡಿಕೊಂಡೇ ದೇವಾಲಯದಲ್ಲಿ ವಿಧ್ವಂಸಕ ಕೃತ್ಯವೆಸಗಲು ಮಹಾ ಸ್ಕೆಚ್‌ ಹಾಕಿದ್ದ ಈ ಉಗ್ರ. ಅದಕ್ಕಾಗಿ ಟಾರ್ಗೆಟ್‌ 6 ಪ್ಲ್ಯಾನ್‌ ಮಾಡಿದ್ದು. ಹಾಗಾದ್ರೆ, ಆ ಟಾರ್ಗೆಟ್‌ 6 ಯಾವುದು ಗೊತ್ತಾ..?

ದೇವಸ್ಥಾನಕ್ಕೆ ನುಗ್ಗಲು ಹಿಂದೂ ವೇಷ ಧರಿಸುತ್ತಿದ್ದ ಮುಸ್ಲಿಂ ಉಗ್ರ. ಹಿಂದೂ ದೇವಾಲಯಗಳೇ ಈತನ ಮೈನ್‌ ಟಾರ್ಗೆಟ್‌. ಕದ್ರಿ ಮಂಜುನಾಥ ದೇವಸ್ಥಾನ ಟಾರ್ಗೆಟ್ ಮಾಡಿದ್ದ ಶಾರೀಕ್. ಜೊತೆಗೆ, ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯ,ಮಂಗಳೂರಿನ ಮಂಗಳಾದೇವಿ ಸನ್ನಿಧಿಯಲ್ಲೂ ರಕ್ತದೋಕುಳಿಗೆ ಪ್ಲ್ಯಾನ್‌ ಮಾಡಿದ್ದ. ದೇವಾಲಯಗಳು ಅಷ್ಟೆ ಅಲ್ಲ ಜನನಿಬಿಡ ಪ್ರದೇಶದಲ್ಲೂ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ

ಮಂಗಳೂರಿನ ಸೆಂಟ್ರಲ್‌ ರೈಲು ನಿಲ್ದಾಣ, KSRTC ಬಸ್‌ ನಿಲ್ದಾಣದ ಮೇಲೂ ಕೆಂಗಣ್ಣು ಬೀರಿದ್ದ. RSS ಕಚೇರಿ ಸಂಘ ನಿಕೇತದ ಮೇಲಿನ ದಾಳಿಗೂ ನೀಲ ನಕ್ಷೆ ರೆಡಿ ಮಾಡಿದ್ದ ಉಗ್ರ ಶಾರೀಕ್‌. ಹೀಗೆ, ಒಂದೇ ದಾಳಿಗೆ ನೂರಾರು ಜನರ ಬಲಿ ಪಡೆಯಲು ಹೊಂಚು ಹಾಕಿದ್ದ ರಕ್ತಪಿಪಾಸು ಶಾರೀಕ್‌.

ಇಷ್ಟೆಲ್ಲಾ ಘಟನೆ ಮಧ್ಯೆ ಕುಕ್ಕರ್‌ ಪ್ಲ್ಯಾನ್‌ ಮಾಡಿದ್ದು ನಾವೇ ಅಂತ ಹೊಣೆ ಹೊತ್ತುಕೊಂಡಿದೆ ಐಆರ್‌ಸಿ ಸಂಘಟನೆ. ಅಂದಹಾಗೆ ಐಆರ್‌ಸಿ ಸಂಘಟನೆ ಇಸ್ಲಾಮಿಕ್‌ ರೆಸಿಸ್ಟನ್ಸ್‌ ಕೌನ್ಸಿಲ್ಸ್‌ ಅಂತ. ಅಷ್ಟೇ ಅಲ್ಲ, IRC ಸಂಘಟನೆ ಪೋಸ್ಟ್‌ನಲ್ಲಿದೆ ಟಾರ್ಗೆಟ್ ಕದ್ರಿ ವಿಚಾರ. ಈ ಡಾರ್ಕ್‌ ವೆಬ್‌ನಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಹೆಸರು ಉಲ್ಲೇಖಿಸಿ ಎಚ್ಚರಿಕೆ ನೀಡಲಾಗಿದೆ.

ಅಷ್ಟೇ ಅಲ್ಲ,ನಮ್ಮ ಟಾರ್ಗೆಟ್‌ ಕದ್ರಿ ಆಗಿತ್ತು..ಆದ್ರೆ, ಮಾರ್ಗ ಮಧ್ಯೆ ಬ್ಲಾಸ್ಟ್‌ ಆಗಿದೆ. ಆದ್ರೂ ಇದನ್ನು ನಾವು ಯಶಸ್ಸು ಅಂತಾನೇ ಪರಿಗಣಿಸಿದ್ದೇವೆ. ಯಶಸ್ಸು ಯಾಕಂದ್ರೆ ನಿಮ್ಮ ಇಂಟೆನಿಜೆನ್ಸ್‌ ವಿಫಲವಾಗಿದೆ ಎಂದಿದೆ IRC. ಆದ್ರೆ, ಸದ್ಯ ಈ ಡಾರ್ಕ್‌ ವೆಬ್‌ ಪೋಸ್ಟ್‌ ಬಗ್ಗೆಯೂ ಸಾಕಷ್ಟು ಅನುಮಾನ ಎದ್ದಿದ್ದು, ಇದ್ರ ಬಗ್ಗೆ ತನಿಖೆ ಕೂಡ ನಡೆದಿದೆ.

RELATED ARTICLES

Related Articles

TRENDING ARTICLES