Monday, December 23, 2024

ಪುನೀತ್​ ಅಮರರಾದ್ರೂ ನೆನಪು ಮಾತ್ರ ಅಜರಾಮರ

ಮಂಡ್ಯ : ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ತಮ್ಮ ಸಿನಿಮಾಗಳ ಮೂಲಕ ಮಾತ್ರವಲ್ಲ ಅವರ ಸಮಾಜಮುಖಿ ಕೆಲಸಗಳಿಂದಲೂ ಸಹ ಜನಮಾನಸದಲ್ಲಿ ಜೀವಂತವಾಗಿದ್ದಾರೆ. ಪುನೀತ್ ರಾಜ್‍ಕುಮಾರ್ ಅವರಿಗೆ ನಮನ ಸಲ್ಲಿಸುವ ನಿಟ್ಟಿನಲ್ಲಿ ಮಂಡ್ಯ ಜಿಲ್ಲೆಯ ಪಾಂಡವಪುರದ ಕ್ರೀಡಾಂಗಣದಲ್ಲಿ ಶುಕ್ರವಾರದಿಂದ ಮೂರು ದಿನಗಳ ಪುನೀತೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಶಿವರಾಜ್ ಕುಮಾರ್, ಅಶ್ವಿನಿ ಪುನೀತ್ ಸೇರಿದಂತೆ ಇಡೀ ರಾಜ್ ಕುಟುಂಬಸ್ಥರು‌ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ನಟ ನಿಖಿಲ್ ಕುಮಾರಸ್ವಾಮಿ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ.1 ಸಾವಿರ ವಿದ್ಯಾರ್ಥಿನಿಯರು ಏಕ ಕಾಲದಲ್ಲಿ ನಾಡಗೀತೆ ಜೊತೆಗೆ ಅಪ್ಪು ಚಿತ್ರಗಳನ್ನು ಹಾಡಲಿದ್ದಾರೆ. ಈ ವೇಳೆ ಶಿವರಾಜ್ ಕುಮಾರ್ ನಟನೆಯ ಬಹು ನಿರೀಕ್ಷಿತ ವೇದ ಚಿತ್ರದ ಗಿಲಕ್ಕೋ ಎಂಬ ಸಾಂಗ್ ಸಹ ಬಿಡುಗಡೆಯಾಗಲಿದೆ.

ಒಟ್ಟಾರೆ ಕರುನಾಡಿನ ಜನರ ಆರಾಧ್ಯ ದೈವವಾಗಿರುವ ಪುನೀತ್ ರಾಜ್‍ಕುಮಾರ್ ಅವರಿಗೆ​​ ಪುನೀತೋತ್ಸವ ಮೂಲಕ ನಮನ ಸಲ್ಲಿಸಲು ಪಾಂಡವಪುರ ಸಿದ್ಧವಾಗಿದೆ.

ಬಾಲಕೃಷ್ಣ ಜೀಗುಂಡಿಪಟ್ಟಣ, ಪವರ್ ಟಿವಿ, ಮಂಡ್ಯ.

RELATED ARTICLES

Related Articles

TRENDING ARTICLES