Sunday, December 22, 2024

ಕಾಂತಾರ ತುಳು ಟ್ರೈಲರ್​ ರಿಲೀಸ್​​

ಬಹುನಿರೀಕ್ಷಿತ ಕಾಂತಾರ ಸಿನಿಮಾ ತುಳು ಟ್ರೈಲರ್ ಬಿಡುಗಡೆಯಾಗಿದ್ದು, ಒಂದೇ ಗಂಟೆಗೆ ಲಕ್ಷಗಟ್ಟಲೆ ವ್ಯೂಸ್​ ಪಡೆದುಕೊಂಡಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.

ಹೊಂಬಾಳೆ ಫಿಲ್ಮ್ಸ್​ ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಬಿಡುಗಡೆ ಮಾಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಿಷಬ್​ ಶೆಟ್ಟಿ ಬರೆದು ನಿದೇಶಿಸಿ ನಟಿಸಿರುವ ಕಾಂತಾರ ಸಿನಿಮಾ ಈಗಾಗಲೇ ಹಿಂದಿ,ಮಲಯಾಳಂ,ತೆಲುಗು,ತಮಿಳು ಭಾಷೆಗಳಲ್ಲಿ ರಿಲೀಸ್​ ಆಗಿದೆ.
ಇನ್ನು, ತುಳುನಾಡಿನ ಕಥೆಯನ್ನೇ ಒಳಗೊಂಡಿದ್ದರೂ ತುಳು ಭಾಷೆಯಲ್ಲಿ ಸಿನಿಮಾ ಟ್ರೈಲರ್ ತಡವಾಗಿ ರಿಲೀಸ್​ ಆಗಿದೆ. ವಿಶೇಷವಾಗಿ ಕರಾವಳಿ ಮಂದಿಗೆ ಕಾಂತಾರ ತುಳು ವರ್ಷನ್​ ಬಗ್ಗೆ ಭಾರೀ ಕುತೂಹಲ ಇತ್ತು ಆದರೆ ಇದೀಗ ಟ್ರೈಲರ್​ ರಿಲೀಸ್​ ಆಗಿದ್ದು, ಭರ್ಜರಿಯಾಗಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

RELATED ARTICLES

Related Articles

TRENDING ARTICLES