Wednesday, January 22, 2025

BJP ವಿರುದ್ಧ ‘ಕೈ’ ವ್ಯಂಗ್ಯ ಪೋಸ್ಟ್​​​​

ರಾಜ್ಯದಲ್ಲಿ ಚುನಾವಣಾ ಚಟುವಟಿಕೆಗಳು ಗರಿಗೆದರಿದೆ. ಪ್ರತಿಯೊಂದು ರಾಜಕೀಯ ಪಕ್ಷಗಳು ಮತ ಸೆಳೆಯಲು ವಿಭಿನ್ನ ಪ್ರಯತ್ನ ಮಾಡ್ತಿವೆ. ರಾಜ್ಯ BJP ಸರ್ಕಾರದ ವಿರುದ್ಧ ಕಾಂಗ್ರೆಸ್​ ಮತ್ತೊಂದು ವಿಭಿನ್ನ ಅಭಿಯಾನ ಆರಂಭಿಸಿದೆ.

ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತ್ತೆ 40% ಕಮಿಷನ್ ಸದ್ದು ಮಾಡ್ತಿದೆ. ಫೇಸ್​ಬುಕ್ 40% ಸರ್ಕಾರ ಎಂದು ಪೇಜ್ ರಚನೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ರೀತಿಯಲ್ಲಿ ಅಭಿಯಾನ ಆರಂಭಿಸಿದೆ. ಈ ಪೇಜ್​​​​ಗೆ ಲಕ್ಷಾಂತರ ಫಾಲೋವರ್ಸ್ ಸಹ ಇದ್ದಾರೆ. 40% ಸರ್ಕಾರ ಫೇಸ್​ಬುಕ್ ಪೇಜ್​ನಲ್ಲಿ ಕಾಂಗ್ರೆಸ್ ಹೆಲ್ಪ್​ಲೈನ್ ನಂಬರ್ ಸಹ ಹಾಕಲಾಗಿದೆ.

40% ಕಮಿಷನ್ ರೋಡಲ್ಲಿ ಯಮಗುಂಡಿಗಳ ದರ್ಬಾರ್ ನಡೆಯುತ್ತಿದ್ದು, ​ಯಾಮಾರಿ ಬಿದ್ರೆ ಮುಗೀತು ಜೀವನ ಬಂಡಿ ಎಂದು ಪೋಸ್ಟರ್ ಹಾಕಿ ಕಾಂಗ್ರೆಸ್​​​​​ ಸರ್ಕಾರದ ವಿರುದ್ಧ ಸಮರಕ್ಕೆ ನಿಂತಿದೆ. ಸಿಎಂ ಬೊಮ್ಮಾಯಿ ಅವರನ್ನು ಯಮನಂತೆ ಪೋಸ್ಟರ್​​​ ರಚಿಸಿ ಶೇರ್​​​ ಮಾಡಿದೆ. ವಿವಿಧ ಸಿನಿಮಾಗಳ ಹೆಸರಿನ ಮೂಲಕ ಸಿಎಂ ಹಾಗೂ ಸಚಿವರನ್ನು ಲೇವಡಿ ಮಾಡಲಾಗಿದೆ. ಸಿಎಂ ಹಾಗೂ ಸಚಿವ ಅಶ್ವತ್ಥ್​ ನಾರಾಯಣ್​​​ರನ್ನು ಕಿಲಾಡಿ ಜೋಡಿ, ಸಚಿವ ಸೋಮಣ್ಣರನ್ನು ಸರ್ವರ್ ಸೋಮಣ್ಣ ಎಂದು ಪೋಸ್ಟ್​​​ ಹಾಕಿ ವ್ಯಂಗ್ಯವಾಡಿದೆ.

RELATED ARTICLES

Related Articles

TRENDING ARTICLES