Saturday, May 11, 2024

ಬಾಲಿವುಡ್ ಊರ್ವಶಿ ಜೊತೆ ಚಿರು ಬಾಸ್ ಮೆಗಾ ಪಾರ್ಟಿ

ಗಾಡ್ ಫಾದರ್ ಹಂಡ್ರೆಡ್ ಕ್ರೋರ್ ಕ್ಲಬ್ ಸೇರಿದ್ದೇ ತಡ, ಮೆಗಾಸ್ಟಾರ್ ಚಿರು ಫ್ಯಾನ್ಸ್​ ಸೆಲೆಬ್ರೇಷನ್ ಮುಗಿಲು ಮುಟ್ಟಿದೆ. ಚಿರು ಸಿನಿಮೋತ್ಸಾಹ ಮತ್ತಷ್ಟು ಹೆಚ್ಚಿದೆ. ಎರಡೆರಡು ಸಿನಿಮಾಗಳಲ್ಲಿ ಬ್ಯುಸಿ ಆಗಿರೋ ಬಾಸ್ ಸದ್ಯ ಮೆಗಾ ಪಾರ್ಟಿ ಸಾಂಗ್ ಕೊಟ್ಟಿದ್ದಾರೆ. ಅದೂ ಬಾಲಿವುಡ್ ಗ್ಲಾಮರ್ ಡಾಲ್ ಊರ್ವಶಿ ಜೊತೆ ಅನ್ನೋದು ಇಂಟರೆಸ್ಟಿಂಗ್.

  • ಗಾಡ್​ಫಾದರ್ 100 ಕೋಟಿ ಕಲೆಕ್ಷನ್.. ಚಿರು ಈಸ್ ಬ್ಯಾಕ್
  • ವಾಲ್ಟೈರ್ ವೀರಯ್ಯನಾಗಿ ಭೋಲಾ ಶಂಕರ್ ಮಾಸ್ ಖದರ್
  • ಅನ್ನಯ್ಯ ಬಳಿಕ ರವಿತೇಜಾ- ಚಿರಂಜೀವಿ ಮೆಗಾ ಮಲ್ಟಿಸ್ಟಾರ್

ಇದು ವಾಲ್ಟೈರ್ ವೀರಯ್ಯ ಅನ್ನೋ ಮೆಗಾಸ್ಟಾರ್ ಚಿರಂಜೀವಿ ಅವ್ರ ಹೊಚ್ಚ ಹೊಸ ಸಿನಿಮಾದ ಡ್ಯಾನ್ಸಿಂಗ್ ನಂಬರ್. ಬಾಸ್ ಪಾರ್ಟಿ ಅನ್ನೋ ಟೈಟಲ್​ನ ಈ ಸಾಂಗ್​ನಲ್ಲಿ ತರಹೇವಾರಿ ಪಾರ್ಟಿಗಳ ಕುರಿತು ಬಹಳ ಚೆನ್ನಾಗಿ ಬಣ್ಣಿಸಲಾಗಿದೆ. ಎಲ್ಲೇ ಪಾರ್ಟಿ ಮಾಡಿದ್ರೂ, ಅದ್ರ ಗಮ್ಮತ್ತು ಮಾತ್ರ ಒಂದೇ ಅನ್ನೋದು ಇದ್ರ ತಿರುಳು. ಆದ್ರೆ ಚಿರು ಸ್ಟೆಪ್ ಹಾಕ್ತಿದ್ರೆ ಎಂಥವ್ರೂ ಕುಣಿಯಲೇಬೇಕು. ಯಾಕಂದ್ರೆ ಅವ್ರು ಡ್ಯಾನ್ಸ್​ನಲ್ಲಿ ಮಾಸ್ಟರ್.

ಇಲ್ಲಿ ಬರೀ ಚಿರು ಮಾತ್ರ ಸ್ಟೆಪ್ ಹಾಕ್ತಿಲ್ಲ. ಅವ್ರೊಟ್ಟಿಗೆ ಬಾಲಿವುಡ್ ಪೋರಿ ಊರ್ವಶಿ ರೌಟೆಲಾ ಕೂಡ ಈ ಐಟಂ ನಂಬರ್​ಗೆ ಸೊಂಟ ಬಳುಕಿಸಿರೋದು ಅದ್ರ ಗ್ಲಾಮರ್ ಹೆಚ್ಚಿದೆ. ಪಡ್ಡೆ ಹುಡ್ಗರ ನಿದ್ದೆ ಕೆಡಿಸೋ ಆಕೆಯ ಅಂದ, ಚೆಂದ, ವೈಯ್ಯಾರಕ್ಕೆ ಈ ಹಾಡು ಪ್ಲಸ್ ಆಗಿದ್ದು, ಸಿನಿಮಾ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ.

ರಾಕ್​ಸ್ಟಾರ್ ದೇವಿಶ್ರೀ ಪ್ರಸಾದ್ ಮ್ಯುಸಿಕ್ ಕಂಪೋಸ್ ಮಾಡೋದ್ರ ಜೊತೆ ಸಾಹಿತ್ಯ ಕೂಡ ಅವ್ರೇ ರಚಿಸಿದ್ದಾರೆ. ಅಷ್ಟೇ ಅಲ್ಲ, ಅವ್ರದ್ದೇ ಕಂಠದಲ್ಲಿ ನಕಾಶ ಹಾಗೂ ಹರಿಪ್ರಿಯಾ ಜೊತೆಗೂಡಿ ಹಾಡಿದ್ದಾರೆ. ಒಟ್ಟಾರೆ ವಾಲ್ಟೈರ್ ವೀರಯ್ಯ ಸಿನಿಮಾ ಭೋಲಾ ಶಂಕರ್​ಗಿನ್ನ ಮೊದಲೇ ತೆರೆಗೆ ಬರಲಿದ್ದು, ಸ್ಯಾಂಪಲ್ಸ್​ನಿಂದ ಮಸ್ತ್ ಮನರಂಜನೆ ನೀಡೋ ಎಂಟರ್​ಟೈನರ್ ಅನಿಸಿದೆ. ಮಿಗಿಲಾಗಿ ಅನ್ನಯ್ಯ ಚಿತ್ರದ ಬಳಿಕ ಬಹುದೊಡ್ಡ ಗ್ಯಾಪ್ ಆಗಿತ್ತು. ಇದೀಗ ಚಿರು- ರವಿತೇಜಾ ಒಟ್ಟಿಗೆ ನಟಿಸ್ತಿರೋದು ಮತ್ತೊಂದು ಹೈಲೈಟ್.

ಗಾಡ್​ಫಾದರ್ ಸಿನಿಮಾದಿಂದ ಚಿರಂಜೀವಿ ಸಿನಿಮೋತ್ಸಾಹ ಡಬಲ್ ಆಗಿದೆ. ಯೆಸ್.. 150 ನೇ ಸಿನಿಮಾದಿಂದ ಚಿತ್ರರಂಗಕ್ಕೆ ಕಂಬ್ಯಾಕ್ ಆದ ಚಿರುಗೆ ನಿರೀಕ್ಷಿತ ಗೆಲುವು ಸಿಕ್ಕಿರಲಿಲ್ಲ. ಆದ್ರೆ ಸಲ್ಮಾನ್ ಖಾನ್ ಜೊತೆ ನಟಿಸಿದ ಗಾಡ್​ಫಾದರ್ ಸಿನಿಮಾ ನೂರು ಕೋಟಿ ಪೈಸಾ ವಸೂಲ್​ನಿಂದ ಬಝ್ ಕ್ರಿಯೇಟ್ ಮಾಡಿತು. ಇದೀಗ ಆ ಸಕ್ಸಸ್ ಫ್ಯಾನ್ಸ್​ಗೂ ಜೋಶ್ ತಂದಿದೆ.

ಇಳಿ ವಯಸ್ಸಿನಲ್ಲೂ ಎನರ್ಜಿಗೆ ಕೇರ್ ಆಫ್ ಅಡ್ರೆಸ್ ಆಗಿರೋ ಮೆಗಾಸ್ಟಾರ್ ಮೆಗಾ ಪರ್ಫಾಮೆನ್ಸ್​ಗೆ ಸ್ಟಾರ್ ಡೈರೆಕ್ಟರ್ಸ್​ ಕ್ಯೂ ನಿಂತಿದ್ದಾರೆ. ರಾಜಮೌಳಿ, ತ್ರಿವಿಕ್ರಮ್ ಶ್ರೀನಿವಾಸ್, ಪೂರಿ ಜಗನ್ನಾಥ್ ಅಂತಹ ದೊಡ್ಡ ನಿರ್ದೇಶಕರು ಚಿರು ಜೊತೆ ಕೆಲಸ ಮಾಡಲು ಕಾತರರಾಗಿದ್ದಾರೆ. ಬಾಸ್ ಈಸ್ ಆಲ್ವೇಸ್ ಬಾಸ್ ಅನ್ನೋದನ್ನ ಚಿರು ಮಗದೊಮ್ಮೆ ಪ್ರೂವ್ ಮಾಡಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES