Monday, December 23, 2024

ಬಾಲಿವುಡ್​​ ನಟ ವಿಕ್ರಮ್ ಗೋಕಲೆ​​ ನಿಧನ

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮರಾಠಿ ಹಾಗೂ ಬಾಲಿವುಡ್​​ ಲೋಕದ ಹಿರಿಯ ನಟ ವಿಕ್ರಮ್​​​ ಗೋಕಲೆ ಅವರು ದೀನನಾಥ್​ ಮಂಗೇಶ್ಕರ್​ ಆಸ್ಪತ್ರೆಯಲ್ಲಿ ಬುಧವಾರ ಮಧ್ಯರಾತ್ರಿ ಕೊನೆಯುಸಿರೆಳೆದಿದ್ದಾರೆ.

ಇವರು ಹೆಸರಾಂತ ಮರಾಠಿ ರಂಗಭೂಮಿ ಹಾಗೂ ಸಿನಿಮಾ ನಟ ಚಂದ್ರಕಾಂತ್​​​ ಗೋಕಲೆ ಅವರು ಪುತ್ರ. ವಿಕ್ರಮ್​​​​ ಗೋಕಲೆ ಅವರು ಹಿರಿತೆರೆ ಮಾತ್ರವಲ್ಲದೇ ಕಿರುತೆರೆ ಹಾಗೂ ರಂಗ ಕಲಾವಿದರಾಗಿಯೂ ಹೆಸರು ಪಡೆದಿದ್ದಾರೆ. ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿದ್ದ ಇವರು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.

ನಿನ್ನೆ ಮಧ್ಯಾಹ್ನ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಸಂಜಯ್​​ ಲೀಲಾ ಬನ್ಸಾಲಿ ಅವರ ಹಮ್​​​ ದಿನ್​​ ಲೇ ಚುಕ್​​​ ಸನಮ್​​ ಐಶ್ವರ್ಯಾ ರೈ ಅವರ ತಂದೆ ಪಾತ್ರದಲ್ಲಿ ನಟಿಸಿದ್ದರು. ಮರಾಠಿ ಚಲನಚಿತ್ರ ಅನುಮತಿಯಲ್ಲಿ ತಮ್ಮ ವಿಶಿಷ್ಟ ಅಭಿನಯಕ್ಕಾಗಿ ಅತ್ಯುತ್ತಮ ನಟ ವಿಭಾಗದಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದಾರೆ.

RELATED ARTICLES

Related Articles

TRENDING ARTICLES