Sunday, January 19, 2025

‘ವೇದ’ದಲ್ಲಿ ಶಿವಣ್ಣನ ಶೇಡ್ಸ್ ಎಷ್ಟು..? ನ್ಯೂ ಲುಕ್ ರಿವೀಲ್

ಕರುನಾಡ ಚಕ್ರವರ್ತಿ ಡಾ. ಶಿವರಾಜ್​ಕುಮಾರ್ ನಟನೆಯ 125ನೇ ಸಿನಿಮಾ ವೇದ, ದಿನದಿಂದ ದಿನಕ್ಕೆ ಜೋರಾಗಿ ಸದ್ದು ಮಾಡ್ತಿದೆ. ಈಗಾಗ್ಲೇ ಎರಡು ಲುಕ್ಸ್ ರಿವೀಲ್ ಆಗಿದ್ದು, ಮೂರನೇ ಗೆಟಪ್ ಕೂಡ ಹೊರಬಿದ್ದಿದೆ. ಇಷ್ಟಕ್ಕೂ ಚಿತ್ರದಲ್ಲಿ ಸನ್ ಆಫ್ ಬಂಗಾರದ ಮನುಷ್ಯನ ಶೇಡ್ಸ್ ಎಷ್ಟು..? ಆ ಹೊಸ ಲುಕ್ ಹೇಗಿದೆ ಅಂತೀರಾ..? ನೀವೇ ಓದಿ.

  • ರುದ್ರ, ವೇದ ಆಯ್ತು.. ಯಾರು ಈ ಡೆಡ್ಲಿ & ಡೇರಿಂಗ್ ಬೀರ

ಇದು ವೇದ ಚಿತ್ರದ ವೆಪನ್ಸ್ ಟೀಸರ್ ಝಲಕ್. ಭೈರತಿ ರಣಗಲ್ ಡಾ. ಶಿವರಾಜ್​ಕುಮಾರ್ ನಟನೆಯ 125ನೇ ಸಿನಿಮಾ. ಹತ್ತು ಹಲವು ವಿಶೇಷತೆಗಳಿಂದ ಕೂಡಿರೋ ವೇದ, ನೋಡುಗರ ನಾಡಿಮಿಡಿತ ಹೆಚ್ಚಿಸಿದೆ. ಪ್ರೇಕ್ಷಕರು ಹಾಗೂ ಫ್ಯಾನ್ಸ್ ಪಾಳಯದಲ್ಲಿ ಹೊಸ ಕ್ಯೂರಿಯಾಸಿಟಿ ಹುಟ್ಟಿಸಿದೆ.

ನಿರ್ದೇಶಕ ಹರ್ಷ ಸಾರಥ್ಯದಲ್ಲಿ ಶಿವಣ್ಣ ಕಾಂಬೋನ ನಾಲ್ಕನೇ ಸಿನಿಮಾ ಇದು. ಭಜರಂಗಿ, ವಜ್ರಕಾಯ, ಭಜರಂಗಿ- 2 ಬಳಿಕ ವೇದ ರಿಲೀಸ್​ಗೆ ಸಜ್ಜಾಗ್ತಿದ್ದು, ಇದೇ ಡಿಸೆಂಬರ್ 23ಕ್ಕೆ ವರ್ಲ್ಡ್​ ವೈಡ್ ತೆರೆಗೆ ಬರ್ತಿದೆ. ಅಂದಹಾಗೆ ಇದು 124 ಸಿನಿಮಾಗಳ ಬಳಿಕ ಶಿವಣ್ಣ ಅವ್ರೇ ತಮ್ಮ ಹೋಮ್ ಬ್ಯಾನರ್ ಗೀತಾ ಪಿಕ್ಚರ್ಸ್​ ಬ್ಯಾನರ್​ನಡಿ ನಿರ್ಮಿಸಿರೋ ಮೆಗಾ ಮಾಸ್ ಪ್ರಾಜೆಕ್ಟ್.

ಮೊದಲಿಗೆ ಶಿವಣ್ಣ ಸಂತನಂತೆ ಫುಲ್ ವೈಟ್ ಹೇರ್​ನಲ್ಲಿ ಕಾಣಿಸಿಕೊಂಡ ಲುಕ್ ರಿವೀಲ್ ಮಾಡಲಾಯ್ತು. ನಂತರ ಟೀಸರ್​ನಲ್ಲಿ ಮಚ್ಚು ಹಿಡಿದು, ರಕ್ತ ಹರಿಸೋ ರುದ್ರನಾಗಿ ಮಿಂಚು ಹರಿಸಿದ್ರು ಶಿವಣ್ಣ. ಅದು ಅಸುರನ್ ಚಿತ್ರದಲ್ಲಿ ತಮಿಳು ಸೂಪರ್ ಸ್ಟಾರ್ ಧನುಷ್ ಗೆಟಪ್ ಅನಿಸಿದ್ರೂ, ಶಿವಣ್ಣನ ಇಂಟೆನ್ಸ್ ಎಮೋಷನ್ಸ್ ಮಾತ್ರ ಸೇಮ್ ಟು ಸೇಮ್ ಅನಿಸಿದೆ.

60ರ ದಶಕದ ರಕ್ತಸಿಕ್ತ ಕಥಾನಕ ಇದಾಗಿದ್ದು, ಜೈಲ್ ಕೂಡ ಇದ್ರ ಬ್ಯಾಕ್​ಡ್ರಾಪ್​ನಲ್ಲಿದೆ. ಹರ್ಷ ಪ್ರತಿ ಬಾರಿ ಒಂದು ಸಾಮ್ರಾಜ್ಯ ಸೃಷ್ಟಿಸ್ತಾರೆ. ಈ ಬಾರಿ ಶಿವಣ್ಣನಿಗಾಗಿ ಯಾವ ಬಗೆಯ ಕಥೆ ಹೆಣೆದಿದ್ದಾರೆ..? ಅದ್ರ ಅಸಲಿ ಕಹಾನಿ ಏನು ಅನ್ನೋದು ತಿಳಿಯಬೇಕು ಅಂದ್ರೆ ಡಿಸೆಂಬರ್ 23ರ ವರೆಗೂ ಕಾಯಲೇಬೇಕು.

ಕಲ್ಲು ಹಿಡಿದು ನಿಂತ ಕನಕ ಪಾತ್ರದಾರಿಯನ್ನ ಇಂಟ್ರಡ್ಯೂಸ್ ಮಾಡಿದ್ದ ಡೈರೆಕ್ಟರ್, ಇದೀಗ ಬೀರ ಅನ್ನೋ ಮತ್ತೊಂದು ಕ್ಯಾರೆಕ್ಟರ್​ನ ಹೊರತಂದಿದ್ದಾರೆ. ಒಟ್ಟಾರೆ ಒಂದಿಕ್ಕಿಂತ ಒಂದು ಪಾತ್ರ ಭಯಾನಕ ಅನಿಸಿದ್ದು, ಶಿವಣ್ಣನಿಗೆ ಕನಿಷ್ಟ ಎರಡ್ಮೂರು ಶೇಡ್​​ಗಳು ಇರಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES