ಬೆಂಗಳೂರು : ಆ್ಯಪ್ ಆಧಾರಿತ ಓಲಾ, ಉಬರ್ ಆಟೋ ರಿಕ್ಷಾಗಳ ಪ್ರಯಾಣ ದರ ನಿಗದಿಗೆ ಸಂಬಂಧಿಸಿದಂತೆ ನ್ಯಾಯಾಲಯದ ನಿರ್ದೇಶನದಂತೆ ಸಂಬಂಧಪಟ್ಟವರ ಅಹವಾಲು ಆಲಿಸಲಾಗಿದ್ದು. ನ. 25ರೊಳಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ನಿಗದಿಗಿಂತ ಹೆಚ್ಚಿನ ಹಣ ವಸೂಲಿಗಿಳಿದಿರೋ ಆಗ್ರಿಗೇಟರ್ ಸಂಸ್ಥೆಗಳಿಗೆ ಮೂಗುದಾರ ಹಾಕಲು ಸರ್ಕಾರ ಹೊರಟಿದೆ.ಹಲವು ದಿನದಿಂದ ಸರ್ಕಾರ ಹಾಗೂ ಅಗ್ರಿಗೇಟರ್ ಕಂಪನಿಗಳ ನಡುವೆ ದರ ನಿಗದಿ ಹಗ್ಗಜಗ್ಗಾಟ ನಡೆಯುತ್ತಿತ್ತು.ಆದ್ರೆ ಇದೀಗ ಕೊನೆಗೂ ಶುಕ್ರವಾರ ದೊಳಗೆ ಹೊಸ ನಿಗದಿ ಮಾಡುತ್ತೇವೆ ಅಂತ ಸರ್ಕಾರ ಹೈಕೋರ್ಟ್ ಗೆ ತಿಳಿಸಿದೆ.
ಹೊಸದಾಗಿ ದರ ನಿಗದಿಪಡಿಸಬೇಕು. ಅನುಮತಿಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರಿಗೆ ಇಲಾಖೆಗೆ ಹೈಕೋರ್ಟ್ ಸೂಚಿಸಿತ್ತು. ಈ ಬೆನ್ನಲ್ಲೇ ಓಲಾ, ಉಬರ್ ಕಂಪನಿಗಳಿಗೆ ಸರ್ಕಾರ ಮೂಗುದಾರ ಹಾಕಿ, ಹೊಸ ಪ್ರಯಾಣ ದರ ಪರಿಷ್ಕರಣೆಗೆ ಮುಂದಾಗಿದೆ.ಆದ್ರೆ ಓಲಾ ಉಬರ್ ಆಟೋರಿಕ್ಷಾ ಗಳು ನಗರದಲ್ಲಿ ಸಂಚಾರ ಮಾಡಲು ಅನುಮತಿ ಇಲ್ಲ.ಆದ್ರೂ ದರ ನಿಗದಿಗೆ ಮುಂದಾಗ್ತಿರೋ ಮೀಟರ್ ಆಟೋ ಚಾಲಕರ ಕೆಂಗಣ್ಣಿಗೆ ಗುರಿಯಾಗಿದೆ.
ಸರ್ಕಾರವು ಬೆಂಗಳೂರಿನಲ್ಲಿ ಕನಿಷ್ಠ ಆಟೋ ದರ ಮೊದಲ 2 ಕಿಮೀಗೆ 30, ನಂತರದ ಪ್ರತಿ ಕಿ.ಮೀಗೆ 15 ಸದ್ಯ ನಿಗದಿ ಮಾಡಿದೆ. ಮೊದಲ 5 ನಿಮಿಷಕ್ಕೆ ಯಾವುದೇ ವೇಟಿಂಗ್ ಚಾರ್ಜ್ ಇರುವುದಿಲ್ಲ ಮತ್ತು ನಂತರ ಪ್ರತಿ 15 ನಿಮಿಷಕ್ಕೆ 5 ಇದೆ. ರಾತ್ರಿ ಪ್ರಯಾಣದಲ್ಲಿ ರಾತ್ರಿ 10ರಿಂದ ಬೆಳಗ್ಗೆ 5ಶೇ.50 ದರ ಹೆಚ್ಚು ನಿಗದಿಪಡಿಸಿದೆ. ಆದ್ರೆ ಈ ದರ ಸಾಕಗಲ್ಲ ಎರಡು ಕೀ ಮೀಟರ್ ಗೆ 100 ನಿಗದಿ ಮಾಡಿ ಎಂದಿತ್ತು ಓಲಾ ಉಬರ್. ಹೀಗಾಗಿ ನೂತನ ದರ ನಿಗದಿಗೆ ಸಾರಿಗೆ ಇಲಾಖೆ ಮುಂದಾಗಿದೆ.
ಓಲಾ ಉಬರ್ ಕಂಪನಿನಿಗಳು ಪ್ರಯಾಣಿಕರಿಂದ ಬೇಕಾಬಿಟ್ಟಿ ವಸೂಲಿ ಮಾಡಿವೆ. .ಈಗ ಆಟೋಗಳಿಗೆ ದರ ಫಿಕ್ಸ್ ಮಾಡಿ ಮೂಗುದಾರ ಹಾಕೋಕೆ ಸರ್ಕಾರ ಹೊರಟಿದೆ. ಸರ್ಕಾರದ ದರ ನಿಗದಿ ಆದೇಶವನ್ನ ಕಟ್ಟುನಿಟ್ಟಾಗಿ ಅಗ್ರಿಗೇಟರ್ ಕಂಪನಿಗಳು ಪಾಲನೆ ಮಾಡುತ್ತಾ ಕಾದು ನೋಡಬೇಕು.
ಕೃಷ್ಣಮೂರ್ತಿ ಪವರ್ ಟಿವಿ ಬೆಂಗಳೂರು