Tuesday, November 5, 2024

‘ಕಾಂತಾರ’ 400 ಕೋಟಿ ಬ್ಯುಸಿನೆಸ್.. ರಾಕಿಭಾಯ್ ನಂ.1

ಎಲ್ಲೆಲ್ಲೂ ಕಾಂತಾರದ ಕಹಳೆ ಮುಗಿಲು ಮುಟ್ಟಿದೆ. ಅಬ್ಬರ, ಆಡಂಬರ ಇಲ್ಲದೆ, ಅತೀವ ನಿರೀಕ್ಷೆಗಳಿಲ್ಲದೆ, ದೊಡ್ಡ ಸ್ಟಾರ್​ಕಾಸ್ಟ್ ಕೂಡ ಇಲ್ಲದೆ ಸಿನಿಮಾವೊಂದು ದೇಶಾದ್ಯಂತ ಸದ್ದು ಮಾಡೋದು ಸಾಮಾನ್ಯದ ಮಾತಲ್ಲ. ಅಷ್ಟೇ ಯಾಕೆ..? ಬಾಕ್ಸ್ ಆಫೀಸ್​ನಲ್ಲಿ 400 ಕೋಟಿ ಬ್ಯುಸಿನೆಸ್ ಮಾಡಿ, ಎಲ್ಲರ ಹುಬ್ಬೇರಿಸಿದೆ. ಆದ್ರೂ ಸಹ ರಾಕಿಭಾಯ್ ಯಶ್ ಅವ್ರೇ ನಂಬರ್ 1.

ಕಲೆಕ್ಷನ್​ನಲ್ಲಿ KGFನ ಮೀರಿಸೋ ಸಿನಿಮಾ ಇನ್ನೂ ಬಂದಿಲ್ಲ

ನಾಳೆಯಿಂದ ಓಟಿಟಿಗೆ ಲಗ್ಗೆ ಇಡ್ತಿದೆ ರಿಷಬ್ ಶೆಟ್ಟಿ ಕಾಂತಾರ

ಪವರ್​​ನಲ್ಲಿ ಕಾಂತಾರ ವರ್ಲ್ಡ್​ ಬಾಕ್ಸ್ ಆಫೀಸ್ ರಿಪೋರ್ಟ್​

ಸಿನಿಮಾ ಮಾಡೋಕೆ ಟ್ಯಾಲೆಂಟ್ ಮಾತ್ರ ಇದ್ರೆ ಸಾಲಲ್ಲ. ದೇವರ ಕೃಪೆ ಕೂಡ ಇರಬೇಕು. ಕಥೆ ಹಾಗೂ ಪಾತ್ರದಿಂದ ಅದು ಸಿಕ್ಕಿದ್ದು ಮಾತ್ರ ಡಿವೈನ್ ಬ್ಲಾಕ್​ಬಸ್ಟರ್ ಕಾಂತಾರ ಚಿತ್ರಕ್ಕೆ ಅನ್ನೋದು ಎಲ್ರಿಗೂ ಗೊತ್ತೇಯಿದೆ. ಯೆಸ್.. ಇಡೀ ಭಾರತೀಯ ಚಿತ್ರರಂಗ ತನ್ನತ್ತ ತಿರುಗಿ ನೋಡುವಂತೆ ಮಾಡಿತು ಕಾಂತಾರ ಅನ್ನೋ ಕರಾವಳಿ ಮಣ್ಣಿನ ಕಥೆ.

ಯಾವುದೇ ವೈಭವೋಪೇತ ಕಂಟೆಂಟ್ ಇಲ್ಲದೆ. 50 ಅಥ್ವಾ ನೂರು ಕೋಟಿ ಭಾರೀ ಬಜೆಟ್ ಇಲ್ಲದೆ. ದೊಡ್ಡ ಸೂಪರ್ ಸ್ಟಾರ್​ಗಳಿಲ್ಲದೆ. ಪ್ರಮೋಷನ್ಸ್ ಅಬ್ಬರದಿಂದ ನಿರೀಕ್ಷೆ ಮೂಡಿಸದೆ, ಜಸ್ಟ್ ಕಥೆ, ಮೇಕಿಂಗ್ ಹಾಗೂ ನಟನಯಿಂದಲೇ ನೋಡುಗರನ್ನ ಮನಸೂರೆಗೊಂಡ ಚಿತ್ರವಿದು. ರಿಷಬ್ ಶೆಟ್ಟಿಯ ಕನಸಿಗೆ ಎಲ್ಲವೂ ಪೂರಕವಾಗಿ ಕೈಗೂಡಿ, ಇಷ್ಟು ದೊಡ್ಡ ಹಿಟ್ ಆಗಿದೆ.

ಕನ್ನಡಕ್ಕೆ ಮಾತ್ರ ಅಂತ ಮಾಡಿದ ಕಾಂತಾರ, ನಂತ್ರ ಆನ್ ಡಿಮ್ಯಾಂಡ್​ನಿಂದ ಪಕ್ಕದ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂಗೂ ವಾಯ್ಸ್ ಡಬ್ ಆಯ್ತು. ಎಲ್ಲಾ ಭಾಷೆಗಳಲ್ಲಿ ಹೌಸ್​ಫುಲ್ ಪ್ರದರ್ಶನ ಕಂಡಿತು. ಬರೋಬ್ಬರಿ 50 ದಿನ ಪೂರೈಸಿರೋ ಈ ಸಿನಿಮಾ, ನಾಳೆಯಿಂದ ಓಟಿಟಿಗೆ ಲಗ್ಗೆ ಇಡ್ತಿದೆ. ಅಮೆಜಾನ್ ಪ್ರೈಮ್​ನಲ್ಲಿ ಲಭ್ಯವಾಗಲಿದೆ.

ವಿಶೇಷ ಅಂದ್ರೆ ಕರ್ನಾಟಕದಲ್ಲಿ ಕೆಜಿಎಫ್ ಸಿನಿಮಾಗಿಂತ ಹೆಚ್ಚು ಮಂದಿಯಿಂದ ವೀಕ್ಷಿಸಲ್ಪಟ್ಟ ಸಿನಿಮಾ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿತ್ತು ಕಾಂತಾರ. ಇದೀಗ ವರ್ಲ್ಡ್​ ವೈಡ್ ಕಾಂತಾರ ಬಾಕ್ಸ್ ಆಫೀಸ್ ರಿಪೋರ್ಟ್​ ಹೊರಬಿದ್ದಿದೆ. ಎಲ್ಲೆಲ್ಲಿ ಎಷ್ಟು ಕೋಟಿ ಗಳಿಸಿದೆ ಅನ್ನೋದ್ರ ಪಟ್ಟಿ ಇಲ್ಲಿದೆ. ನೋಡಿಬಿಡಿ.

ಕಾಂತಾರ ವರ್ಲ್ಡ್​ವೈಡ್ ಗಳಿಕೆ 400 ಕೋಟಿ

ಕರ್ನಾಟಕ- 168.50 ಕೋಟಿ

ಆಂಧ್ರ & ತೆಲಂಗಾಣ- 60 ಕೋಟಿ

ತಮಿಳುನಾಡು- 12.70 ಕೋಟಿ

ಕೇರಳ-19.20 ಕೋಟಿ

ಓವರ್​​ಸೀಸ್​- 44.50 ಕೋಟಿ

ನಾರ್ತ್ ಇಂಡಿಯಾ- 96 ಕೋಟಿ

ಅಂದಹಾಗೆ ಪರಭಾಷಾ ಮೇಕರ್ಸ್​ನಿಂದ ಹಿಡಿದು ಸೂಪರ್ ಸ್ಟಾರ್​ಗಳವರೆಗೆ ಮೆಚ್ಚಿದ ಕಾಂತಾರ ಎಷ್ಟು ದೊಡ್ಡ ಹಿಟ್ ಆದ್ರೂ, ಕೆಜಿಎಫ್ ಬಾಕ್ಸ್ ಆಫೀಸ್ ದಾಖಲೆ ಸರಿಗಟ್ಟಿಲ್ಲ. ಹೌದು.. ಇಂದಿಗೂ ಕನ್ನಡದ ನಂಬರ್ 1 ಸಿನಿಮಾ ಯಾವುದು ಅಂದ್ರೆ ಕೆಜಿಎಫ್ ಅಂತಾರೆ. ಸಾವಿರದ ಐದನೂರು ಕೋಟಿ ಬ್ಯುಸಿನೆಸ್​ನಿಂದ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ ರಾಕಿಭಾಯ್ ಯಶ್.

ಕೆಜಿಎಫ್ ಹಾಗೂ ಕಾಂತಾರ ಎರಡೂ ಸಿನಿಮಾಗಳು ವಿಶ್ವದ ಗಮನ ಸೆಳೆದ ಚಿತ್ರಗಳೇ. ಇವೆರಡೂ ಸಹ ಹೊಂಬಾಳೆ ಫಿಲಂಸ್ ಬ್ಯಾನರ್​ನಡಿ ತಯಾರಾದ ಚಿತ್ರಗಳು, ವಿಜಯ್ ಕಿರಗಂದೂರು ಡ್ರೀಮ್ ಪ್ರಾಜೆಕ್ಸ್ಟ್ ಅನ್ನೋದು ಇಂಟರೆಸ್ಟಿಂಗ್. ಅದೇನೇ ಇರಲಿ, ಅವ್ರು ಫಸ್ಟ್ ಇವ್ರು ಸೆಕೆಂಡ್ ಅನ್ನೋದಕ್ಕಿಂತ ಕನ್ನಡದ ಸಿನಿಮಾಗಳು ಹೀಗೆ ಧೂಳೆಬ್ಬಿಸ್ತಿರೋದು ಹೆಮ್ಮೆ ಅನಿಸಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES