Monday, January 6, 2025

ಇಶಾನ್​ಗೆ ಡಿಮ್ಯಾಂಡ್.. ಬೆನ್ನು ಹತ್ತಿದ ಸ್ಟಾರ್ ಡೈರೆಕ್ಟರ್ಸ್​

ಬಾಲಿವುಡ್ ಗ್ರೀಕ್​ಗಾಡ್ ಹೃತಿಕ್​ನಂತಿರೋ ಕನ್ನಡದ ಮಿಲ್ಕಿಬಾಯ್ ಇಶಾನ್​​ಗೆ ಡಿಮ್ಯಾಂಡ್ ಹೆಚ್ಚಿದೆ. ರೇಮೊ ರಿಲೀಸ್​ಗೂ ಮೊದಲೇ ಈತನ ಜೊತೆ ಸಿನಿಮಾ ಮಾಡೋಕೆ ಸ್ಟಾರ್ ಡೈರೆಕ್ಟರ್ಸ್​ ಸಾಲಲ್ಲಿ ನಿಂತಿದ್ದಾರೆ. ಇಷ್ಟಕ್ಕೂ ಇಶಾನ್​ಗೆ ಬೇಡಿಕೆ ಹೆಚ್ಚಾಗೋಕೆ ಕಾರಣ ಏನು..? ಯಾರೆಲ್ಲಾ ಕ್ಯೂನಲ್ಲಿದ್ದಾರೆ ಅನ್ನೋದಕ್ಕೆ ಈ ಇಂಟರೆಸ್ಟಿಂಗ್ ಸ್ಟೋರಿ ಒಮ್ಮೆ ಓದಿ.

  • ರೇಮೊ ರಿಲೀಸ್​ಗೂ ಮೊದ್ಲೇ ಮಿಲ್ಕಿಬಾಯ್ ಸೆನ್ಸೇಷನ್..!
  • ಕ್ಯೂನಲ್ಲಿ ಡೈರೆಕ್ಟರ್ ಚೇತನ್, ಅನಿಲ್, ಹರ್ಷ, ರುದ್ರನಾಗ್
  • ರೇಮೊ ನಂತ್ರ ಯಾವ ಚಿತ್ರ..? ಯಾರ ಜೊತೆ ಗೊತ್ತಾ..?

ರೇಮೊ.. ಶುಕ್ರವಾರ ಪ್ರೇಕ್ಷಕರಿಗೆ ಮಸ್ತ್ ಮನರಂಜನೆ ನೀಡೋಕೆ ಸಜ್ಜಾಗಿರೋ ಸಿನಿಮಾ. ಈ ಚಿತ್ರದಿಂದ ಕನ್ನಡ ಇಂಡಸ್ಟ್ರಿಗೆ ಮತ್ತೊಬ್ಬ ಆರಡಿ ಹೀರೋ ಸಿಗ್ತಿದ್ದಾರೆ. ಹೌದು.. ಇಶಾನ್ ಅನ್ನೋ ಈ ಸ್ಫುರದ್ರೂಪಿ ಚೆಲುವ, ನೋಡೋಕೆ ಫಾರಿನರ್ ತರಹ ಇದ್ರೂ, ಅಪ್ಪಟ ಕನ್ನಡಿಗ. ನಿರ್ಮಾಪಕ ಸಿ ಆರ್ ಮನೋಹರ್ ಕುಟುಂಬದ ಕುಡಿ.

ರೇಮೋ ಇವ್ರ ಮೊದಲ ಸಿನಿಮಾನಾ ಅಂದ್ರೆ ನೋ. ಇದಕ್ಕೂ ಮುನ್ನ ರೋಗ್ ಅನ್ನೋ ಚಿತ್ರದ ಮುಖೇನ ಟಾಲಿವುಡ್​ನಲ್ಲಿ ಇಂಟ್ರಡ್ಯೂಸ್ ಆಗಿದ್ರು ಇಶಾನ್. ಒಳ್ಳೆ ಹೈಟು, ಅದಕ್ಕೆ ತಕ್ಕನಾದ ವೈಟು, ಸಿಲ್ಕಿ ಹೇರ್, ಹಾಲಿನಂತಹ ಸ್ಕಿನ್ ಟೋನ್, ಮಿಗಿಲಾಗಿ ಫೈಟ್, ಡ್ಯಾನ್ಸ್ ಮಾಡಬಲ್ಲ ಪಕ್ಕಾ ಟ್ರೈನ್ಡ್ ಌಕ್ಟಿಂಗ್ ಸ್ಕಿಲ್ಸ್. ಇವೆಲ್ಲವುಗಳಿಂದ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಇವ್ರನ್ನ ಚಿತ್ರರಂಗಕ್ಕೆ ಪರಿಚಯಿಸಿದ್ರು.

ಆ ಸಿನಿಮಾ ತಕ್ಕ ಮಟ್ಟಿಗೆ ಸದ್ದು ಮಾಡಿತಾದ್ರೂ, ಕೊರೋನಾ ಬಳಿಕ ಪ್ರಾಪರ್ ಆಗಿ ಕನ್ನಡಲ್ಲಿ ಲಾಂಚ್ ಮಾಡ್ತಿರೋದು ಗೂಗ್ಲಿ, ರಣವಿಕ್ರಮ ಡೈರೆಕ್ಟರ್ ಪವನ್ ಒಡೆಯರ್. ಹೌದು.. ಆಶಿಕಾ- ಇಶಾನ್ ಜೋಡಿಯಲ್ಲಿ ಮ್ಯೂಸಿಕಲ್ ಲವ್ ಸ್ಟೋರಿ ಮಾಡಿರೋ ಒಡೆಯರ್, ಇದೇ ನವೆಂಬರ್ 25ಕ್ಕೆ ಕನ್ನಡಿಗರ ಮುಂದೆ ಪ್ರಸ್ತುತ ಪಡಿಸ್ತಿದ್ದಾರೆ.

ಇಂಪೋರ್ಟೆಡ್ ಌಕ್ಟರ್ ರೀತಿ ಇರೋ ಇಶಾನ್ ಲುಕ್ಸ್ ಹಾಗೂ ನಟನಾ ಗಮ್ಮತ್ತಿಗೆ ಮನಸೋತ ಕನ್ನಡ ಚಿತ್ರರಂಗದ ಸ್ಟಾರ್ ಡೈರೆಕ್ಟರ್ಸ್​ ಸದ್ಯ ಇವ್ರ ಹಿಂದೆ ಬಿದ್ದಿದ್ದಾರಂತೆ. ಡೇಟ್ಸ್ ಕೊಡಿ ಸಿನಿಮಾ ಮಾಡೋಣ ಅಂತ ಅವ್ರ ಮನೆ ಬಾಗಿಲು ತಟ್ಟಿದ್ದಾರೆ. ಆ ಪೈಕಿ ಜೇಮ್ಸ್ ಡೈರೆಕ್ಟರ್ ಚೇತನ್ ಕುಮಾರ್, ದಿಲ್​ವಾಲಾ ಅನಿಲ್ ಕುಮಾರ್, ಭಜರಂಗಿ ಸಾರಥಿ ಹರ್ಷ ಹಾಗೂ ಯುವ-01 ಕ್ಯಾಪ್ಟನ್ ಪುನೀತ್ ರುದ್ರನಾಗ ಮುಂಚೂಣಿಯಲ್ಲಿದ್ದಾರೆ.

ಇವರೆಲ್ಲರೂ ಹಾರ್ಡ್​ ವರ್ಕ್​ ಮಾಡೋ ಸ್ಟಾರ್ ಡೈರೆಕ್ಟರ್ಸ್​ ಆಗಿ ಗುರ್ತಿಸಿಕೊಂಡಿದ್ದು, ಪುನೀತ್ ರುದ್ರನಾಗ್ ಮಾತ್ರ ಕೆಜಿಎಫ್ ಟೀಂ ಜೊತೆ ಪಳಗಿದ್ದಾರೆ. ಯುವ ರಾಜ್​ಕುಮಾರ್ ಜೊತೆಗಿನ ಸಿನಿಮಾ ಸೆಟ್ಟೇರಬೇಕಿದೆ. ಹೀಗಾಗಿ ರೇಮೊ ನಂತ್ರ ಇಶಾನ್ ಡೇಟ್ಸ್ ಯಾರಿಗೆ ಅನ್ನೋದೇ ಇಂಟರೆಸ್ಟಿಂಗ್. ಆದ್ರೆ ಮೂಲಗಳ ಪ್ರಕಾರ ಬಹದ್ದೂರ್ ಚೇತನ್ ಈಗಾಗ್ಲೇ ಕಥೆ ಸಿದ್ಧಪಡಿಸಿಕೊಳ್ತಿದ್ದು, ಡಿಸೆಂಬರ್​ ಅಥ್ವಾ ಹೊಸ ವರ್ಷದ ಆರಂಭದಲ್ಲಿ ಸಿನಿಮಾ ಸೆಟ್ಟೇರಲಿದೆ.

ಒಟ್ಟಾರೆ ಆರಂಭದ ದಿನಗಳಲ್ಲೇ ಇಶಾನ್ ಈ ರೀತಿ ಡಿಮ್ಯಾಂಡ್ ಹೆಚ್ಚಿಸಿಕೊಂಡಿರೋದು ಖುಷಿಯ ವಿಚಾರ. ಇವ್ರ ಕರಿಯರ್ ಇದೇ ರೀತಿ ಬ್ಯುಸಿ ಆಗಿರಲಿ ಅಂತ ಹಾರೈಸುತ್ತಾ ಮುಂದಿನ ಪ್ರಾಜೆಕ್ಟ್​ಗೆ ಬೆಸ್ಟ್ ವಿಶಸ್ ಹೇಳೋಣ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ 

RELATED ARTICLES

Related Articles

TRENDING ARTICLES