ಬೆಂಗಳೂರು : ಹೌದು ಪ್ರೆಷರ್ ಕುಕ್ಕರ್ ಸ್ಫೋಟದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜನದಟ್ಟಣೆ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದ್ದಾರೆ. ಆದರೆ, ಎಲ್ಲಿಯೂ ಪರಿಶೀಲನಾ ಕಾರ್ಯ ಕಂಡುಬರಲಿಲ್ಲ. ಪವರ್ ಟಿವಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ರಿಯಾಲಿಟಿ ಚೆಕ್ ನಡೆಸಿತು. ರೈಲು ನಿಲ್ದಾಣದೊಳಗೆ ಪ್ರವೇಶಿಸಿದ ಯಾವೊಬ್ಬ ಪ್ರಯಾಣಿಕರನ್ನೂ ಭದ್ರತಾಧಿಕಾರಿಗಳು ತಪಾಸಣೆ ನಡೆಸಲಿಲ್ಲ.
ರೈಲ್ವೆ ನಿಲ್ದಾಣದ ಪ್ರವೇಶದಲ್ಲಿ ಪ್ರಯಾಣಿಕರ ಲಗೇಜ್ ತಪಾಸಣೆಗೆ ಅಳವಡಿಸಿದ್ದ ಮೆಟಲ್ ಡಿಟೆಕ್ಟರ್‌ಗಳು, ಸ್ಕ್ಯಾನರ್ ಯಂತ್ರಗಳು ಕಣ್ಮರೆಯಾಗಿದ್ದವು. ಬ್ಯಾಗ್, ಸೂಟ್‌ಕೇಸ್ ಸಮೇತ ಆಗಮಿಸಿದ ಪ್ರಯಾಣಿಕರು ಯಾವುದೇ ತಪಾಸಣೆಗೆ ಒಳಗಾಗದೆ, ನೇರವಾಗಿ ನಿಲ್ದಾಣ ಪ್ರವೇಶಿಸುತ್ತಿದ್ದಾರೆ. ನಿತ್ಯ ಲಕ್ಷಾಂತರ ಮಂದಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲೂ ಇದೇ ಪರಿಸ್ಥಿತಿ ಇತ್ತು. ಇದಲ್ಲದೇ ಮಾರುಕಟ್ಟೆ ಪ್ರದೇಶಗಳು, ಮಾಲ್‌ಗಳು, ಜನದಟ್ಟಣೆ ಪ್ರದೇಶಗಳಲ್ಲೂ ಭದ್ರತಾ ವೈಫಲ್ಯ ಕಂಡುಬಂದಿತು.
ಇನ್ನು ಮಂಗಳೂರಿನ ಸ್ಫೋಟ ಪ್ರಕರಣ ತಿರುಪಡಿತುಕೊಳ್ಳುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್‌ನಲ್ಲಿ ತಪಾಸಣೆಗೆ ಮುಂದಾದರು. ಈ ಬೇಳೆ ಪವರ್ ಟಿವಿ ಜೊತೆಗೆ ಮಾತನಾಡಿದ ರೈಲ್ವೇ ಪೊಲೀಸ್ ವಿಭಾಗದ ಅಧೀಕ್ಷಕಿ ಡಾ.ಎಸ್.ಕೆ.ಸೌಮ್ಯಲತಾ ಮೆಟಲ್ ಡಿಟೆಕ್ಟರ್ ಕೆಟ್ಟು ಹೋಗಿವೆ. ಅದನ್ನು ಕೂಡಲೇ ರಿಪೇರಿ ಮಾಡಿಸಲಾಗುತ್ತದೆ. ಅನುಮಾನವಾಗಿ ಕಾಣುವ ಜನರನ್ನ ಪೊಲೀಸರು ಚೆಕ್ ಮಾಡುತ್ತಾರೆ ಅಂತ
ಸಬೂಬು ಹೇಳಿದರು.
ಒಟ್ಟಾರೆ ಈಗಾಗಲೇ ರಾಜ್ಯ ಸರ್ಕಾರ ಹೈ ಅಲರ್ಟ್ ಘೋಷಣೆ ಮಾಡಿದ್ರೂ ಕೂಡ ರೈಲ್ವೆ ಸ್ಟೇಷನ್ ಹಾಗೂ ಬಸ್ ನಿಲ್ದಾಣಗಳಲ್ಲಿ ಮೆಟಲ್ ಡಿಟೆಕ್ಟರ್ ಹಾಗೂ ಬ್ಯಾಡ್ ಸ್ಕ್ಯಾನಿಂಗ್ ಮಿಷನ್ ಇಲ್ಲದಿರುವುದು ಸರ್ಕಾರದ ನಿರ್ಲಕ್ಷ್ಯ ದೋರಣೆಯನ್ನು ಎದ್ದು ಕಾಣುತ್ತಿದೆ.
ಸ್ವಾತಿ ಪುಲಗಂಟಿ ಮೆಟ್ರೋ ಬ್ಯೂರೋ ಬೆಂಗಳೂರು