Friday, November 8, 2024

ರಾತ್ರೋ ರಾತ್ರಿ ಕಾಂಗ್ರೆಸ್‌ ವಿರುದ್ಧ ದೂರು ಕೊಟ್ಟ ಕೇಸರಿ ಬ್ರಿಗೇಡ್‌

ಬೆಂಗಳೂರು : ನಕಲಿ ಮತದಾರರ ಹೆಸರುಗಳನ್ನು ರದ್ದು ಮಾಡುವ ಪ್ರಕ್ರಿಯೆ ನಡೀತಿದೆ ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‌ ವಿರುದ್ಧ ಕೇಸರಿ ಬ್ರಿಗೇಡ್‌ ದೂರು ನೀಡಿದೆ.

ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಕೊಟ್ಟ ಬಿಜೆಪಿ, ನಕಲಿ ಮತದಾರರ ಹೆಸರುಗಳನ್ನು ರದ್ದು ಮಾಡುವ ಪ್ರಕ್ರಿಯೆ ನಡೀತಿದೆ. ಈ ಪ್ರಕ್ರಿಯೆಗೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ. ಆದ್ರೆ ಕಾಂಗ್ರೆಸ್ ಪಕ್ಷವು ಈ ವಿಚಾರದಲ್ಲಿ ದಿಕ್ಕು ತಪ್ಪಿಸುವ ಯತ್ನ ಮಾಡ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು, ಚಿಲುಮೆ ಸಂಸ್ಥೆಯ ನೇಮಕ ಮಾಡಿದ್ದೇ ಕಾಂಗ್ರೆಸ್, ಮತದಾರರ ಜಾಗೃತಿ ಕೆಲಸದ ನೆಪದಲ್ಲಿ ಚಿಲುಮೆ ನಿಯಮ ಉಲ್ಲಂಘಿಸಿದೆ, ಹೀಗಾಗಿ ಬಿಬಿಎಂಪಿ ಚಿಲುಮೆಗೆ ನೀಡಿದ್ದ ಅನುಮತಿ ವಾಪಸ್ ಪಡೆದಿದೆ. ಚಿಲುಮೆ ಸಂಸ್ಥೆ ವಿರುದ್ಧ ಈಗಾಗಲೇ ಪೊಲೀಸರು ತನಿಖೆ ಮಾಡ್ತಿದ್ದಾರೆ. ಆದ್ರೆ ಕಾಂಗ್ರೆಸ್ ಸುಳ್ಳು ಆರೋಪ ಮಾಡುವ ಮೂಲಕ ಗೊಂದಲ ಸೃಷ್ಟಿಸ್ತಿದೆ. ಈ ಪ್ರಕರಣದಲ್ಲಿ ಕೇಂದ್ರ ಚುನಾವಣಾ ಆಯೋದ ಮಧ್ಯ ಪ್ರವೇಶಿಸುವ ಅಗತ್ಯವಿದೆ. ಪ್ರಕರಣದ ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮ ವಹಿಸಬೇಕಾಗಿ ಮನವಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES