Monday, December 23, 2024

ನೀಲಿ ಕಾಡಲ್ಲಿ ಒಂಟಿ ಪಯಣಿಗ ದಿಗಂತ್ ಮಾಡಿದ್ದೇನು..?!

ಸಾಲು ಸಾಲು ಸಿನಿಮಾಗಳಲ್ಲಿ ಮೋಡಿ ಮಾಡಿದ್ದ ಅನಂತ್​ನಾಗ್- ದಿಗಂತ್ ಜೋಡಿ, ಇದೀಗ ಮತ್ತೊಮ್ಮೆ ಕಮಾಲ್ ಮಾಡೋಕೆ ರೆಡಿಯಾಗಿದೆ. ತಿಮ್ಮಯ್ಯ & ತಿಮ್ಮಯ್ಯನಾಗಿ ನೋಡುಗರನ್ನ ರಂಜಿಸೋಕೆ ಬರ್ತಿದೆ ಈ ಅಪರೂಪದ ಕಾಂಬೋ. ಸದ್ಯ ಅದ್ರ ಮತ್ತೊಂದು ಜರ್ನಿ ಸಾಂಗ್ ಲಾಂಚ್ ಆಗಿದ್ದು, ಕಣ್ಮನ ತಣಿಸುತ್ತಿದೆ.

  • ಡಿಸೆಂಬರ್ 2ರಿಂದ ತಾತ- ಮೊಮ್ಮಗನ ಜರ್ನಿ ಶುಭಾರಂಭ

ಜಾಲಿ ಮೂಡಲ್ಲಿರೋ ನಾಯಕ ನಟ, ಮಲೆನಾಡಿನ ಸೌಂದರ್ಯವನ್ನು ಸವಿಯುತ್ತಾ ವರ್ಣಿಸುವ ಸಾಲುಗಳು ಆ ನೀಲಿ ಕಾಡಿಂದ ಅನ್ನೋ ಈ ಬ್ಯೂಟಿಫುಲ್ ಸಾಂಗ್. ಯೆಸ್.. ತಿಮ್ಮಯ್ಯ ಅಂಡ್ ತಿಮ್ಮಯ್ಯ ಚಿತ್ರದ ಆಲ್ಬಮ್​ನ ಕಲರ್​ಫುಲ್ ಸಾಂಗ್ ಇದಾಗಿದ್ದು, ದಿಗಂತ್ ಬೈಕ್ ಏರಿ ಪ್ರಕೃತಿಯ ಮಧ್ಯೆ ಸಾಗುವ ಜರ್ನಿಯನ್ನ ತೋರಿಸಲಾಗಿದೆ.

ಜಯಂತ್ ಕಾಯ್ಕಿಣಿ ಪದಪುಂಜ ಹಾಗೂ ಅನೂಪ್ ಸೀಳಿನ್ ಸಂಗೀತವಿರೋ ಈ ಹಾಡನ್ನ ಮ್ಯೂಸಿಕ್ ಡೈರೆಕ್ಟರ್ ಅನೂಪ್ ಸೀಳಿನ್ ಅವ್ರೇ ಹಾಡಿದ್ದಾರೆ. ಪಕ್ಕಾ ಕೂರ್ಗ್​ ಲೊಕೇಷನ್ಸ್​ನಲ್ಲಿ ಚಿತ್ರಿಸಿರೋ ಈ ಹಾಡು ಸಿನಿಮಾಗೆ ಪ್ಲಸ್ ಆಗಲಿದ್ದು, ದಿಗಂತ್ ಹಾಡುಗಳಲ್ಲಿ ನೆನಪಲ್ಲಿ ಉಳಿಯೋ ಅಂತಹ ಗೀತೆಗಳ ಸಾಲಿಗೆ ಸೇರಲಿದೆ.

ಸಂಜಯ್ ಶರ್ಮಾ ನಿರ್ದೇಶನದ ತಿಮ್ಮಯ್ಯ ಅಂಡ್ ತಿಮ್ಮಯ್ಯ ಸಿನಿಮಾದಲ್ಲಿ ಅನಂತ್ ನಾಗ್- ದಿಗಂತ್ ಕಾಂಬೋ ಮತ್ತೊಮ್ಮೆ ಫುಲ್ ಫ್ಲೆಡ್ಜ್ ಆಗಿ ಮರುಕಳಿಸಲಿದೆ. ಇವ್ರ ಕಾಂಬಿನೇಷನ್​ನ ಸಾಕಷ್ಟು ಚಿತ್ರಗಳು ಹಿಟ್ ಆಗಿದ್ದು, ಇಲ್ಲಿ ತಾತ- ಮೊಮ್ಮಗನಾಗಿ ಮತ್ತೊಮ್ಮೆ ಕಮಾಲ್ ಮಾಡೋಕೆ ಮುಂದಾಗಿದೆ ಈ ಅಪರೂಪದ ಜೋಡಿ.

ಈಗಾಗ್ಲೇ ರಿಲೀಸ್ ಆಗಿರೋ ಎರಡು ಟೀಸರ್​ಗಳು ಫನ್ ವಿತ್ ಎಮೋಷನ್ಸ್​ನಿಂದ ಕೂಡಿದ್ದು, ನೋಡುಗರಿಗೆ ಸರ್​ಪ್ರೈಸಿಂಗ್ ಎಲಿಮೆಂಟ್ಸ್​ ಕೊಡೋ ಮನ್ಸೂಚನೆ ನೀಡಿದೆ. ಒಟ್ಟಾರೆ ಹೊಸ ಸಿನಿಮೋತ್ಸಾಹಿ ತಂಡ ಮಾಡಿರೋ ತಿಮ್ಮಯ್ಯ & ತಿಮ್ಮಯ್ಯನಿಂದ ಸೀನಿಯರ್ ಹಾಗೂ ಜೂನಿಯರ್ ಸಮಾಗಮ ಆಗ್ತಿದ್ದಾರೆ. ಇದು ತಾತ- ಮೊಮ್ಮಕ್ಕಳಿಗೆ ಬಹುಬೇಹ ಕನೆಕ್ಟ್ ಆಗಲಿದ್ದು, ಫ್ಯಾಮಿಲಿ ಆಡಿಯೆನ್ಸ್​​ ಮೆಚ್ಚೋ ಸದಭಿರುಚಿಯ ಕೌಟುಂಬಿಕ ಸಿನಿಮಾ ಆಗಿ ಇದೇ ಡಿಸೆಂಬರ್ 2ಕ್ಕೆ ಪ್ರೇಕ್ಷಕರ ಮುಂದೆ ಬರಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES